11:17 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಮಂಗಳೂರು:  ಅಮೃತ ಭಾರತಿಗೆ ‘ತುಲು ಪುರ್ಪ’ ಪುಸ್ತಕದ ಅರ್ಪಣೆ; ರಾಷ್ಟ್ರಪತಿ, ಪ್ರಧಾನಿಗೆ ಸಮರ್ಪಣೆ

23/08/2022, 11:34

ಮಂಗಳೂರು(Reporterkarnataka.com):ಪ್ರಧಾನಿ, ರಾಷ್ಟ್ರಪತಿ, ಕೇಂದ್ರ ಗೃಹಮಂತ್ರಿ  ಭಾರತದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗೆ ತುಲು ಪುರ್ಪ  ಕಳುಹಿಸಿ ತುಲು ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ರಾಜ್ಯದ ಅಧಿಕೃತ ಭಾಷೆ ಮತ್ತು 8ನೇ ಪರಿಚ್ಛೇದಕ್ಕೆ ಸೇರಿಸಲು ಮನವಿ ಮಾಡಲಾಗಿದೆ.

ಜೈ ತುಲುನಾಡ್(ರಿ) ಸಂಘಟನೆ ಉಡುಪಿ,ಮಂಗಳೂರು, ಕಾಸರಗೋಡು ಸೇರಿಕೊಂಡು, ತುಲು ಭಾಷೆಗೆ ಎರಡನೇ ಪ್ರಾದೇಶಿಕ ಬಾಷೆಯ ಮಾನ್ಯತೆ ದೊರೆಯಬೇಕು ಮತ್ತು ನಮ್ಮ ಸಂವಿಧಾನದ ಎಂಟನೇ ಪರೀಚ್ಛೇದದಲ್ಲಿ ಸೇರಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.  ಅದರ ಮುಂದಿನ ಹೆಜ್ಜೆಯಾಗಿ ಮಂಗಳೂರಿನ ಕೆನರಾ ಕಾಲೇಜಿನ  ಸಭಾಂಗಣದಲ್ಲಿ “ತುಲು ಪುರ್ಪ”ಎಂಬ ತುಲು ಕವನ ಸಂಕಲವನ್ನು ತುಲು ಲಿಪಿಯಲ್ಲಿ ಮುದ್ರಿಸಿ ಬಿಡುಗಡೆಗೊಳಿಸಲಾಯಿತು. ಇದರಲ್ಲಿ ತುಳುನಾಡಿನ ಹಿರಿ ಕಿರಿಯ ನೂರಕ್ಕೂ ಅಧಿಕ ಕವಿಗಳ ದೇಶ ಭಕ್ತಿಗೀತೆ, ತುಲುನಾಡ ಗೀತೆ, ಸೈನಿಕರ ಬಗ್ಗೆ ಬರೆದ ಗೀತೆ, ಕೃಷಿಗೆ ಸಂಬಂಧಪಟ್ಟ ಹಾಗೂ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕವನಗಳಿವೆ. ಜೊತೆಗೆ ಈ ಪುಸ್ತಕದಲ್ಲಿ ಪೇಜಾವರ ಮಠಾಧೀಶರಾದ  ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಗಳ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.
ವೀರೇಂದ್ರ ಹೆಗ್ಗಡೆಯವರ ಆಶೀರ್ವಚನವಿದೆ.

ಡಾ. ಆಕಾಶ್ ರಾಜ್ ಜೈನ್ ( ಸದಸ್ಯರು ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ) ಇವರು ಮುನ್ನುಡಿಯನ್ನು ಬರೆದಿದ್ದು,  ಸಂಘಟನೆಯ ದ್ಯೇಯೋದ್ಧೇಶಗಳನ್ನು ಸಂಘಟನೆಯ ಅಧ್ಯಕ್ಷರಾದ ಅಶ್ವತ್ ತುಲುವ ಹಾಗೂ ಕಾರ್ಯದರ್ಶಿ ಅವಿನಾಶ್ ಬರೆದಿದ್ದಾರೆ. ಪುಸ್ತಕದ ಬೆನ್ನುಡಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಬರೆದಿದ್ದಾರೆ.ತುಲುನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮುಖಪುಟ ದೊಂದಿಗೆ,  ನಮ್ಮ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನೊಂದಿಗೆ ಬಿಡುಗಡೆಗೊಳ್ಳುತಿರುವ ಈ ಕೃತಿಯನ್ನು  ತುಲು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಲು ಸಹಕರಿಸಬೇಕು, 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬ ಬೇಡಿಕೆಯೊಂದಿಗೆ ನಮ್ಮ ದೇಶದ ಮಾನ್ಯ ಪ್ರಧಾನಿಯವರಿಗೆ,  ರಾಷ್ಟ್ರಪತಿ, ಕೇಂದ್ರ ಗೃಹಮಂತ್ರಿ ಹಾಗೂ  ಭಾಷೆ ಮತ್ತು ಸಂಸ್ಕೃತಿ ಇಲಾಖೆಗೆ  ಮತ್ತು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿ ತುಲು ಭಾಷೆಗೆ ಮಾನ್ಯತೆಯನ್ನು ದೊರಕಿಸಿಕೊಡಬೇಕಾಗಿ ಬಿನ್ನವಿಸಿಕೊಳ್ಳಲಾಗುವುದು. ಅದೇ ರೀತಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡಿನ ಸಂಸದರು,ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟು ನಮ್ಮ ಈ ಹೋರಾಟದಲ್ಲಿ ಕೈಜೋಡಿಸಬೇಕಾಗಿ ವಿನಂತಿಸಲಾಗುವುದು.ಮತ್ತು ಈ ಮುಖೇನ ತುಲು ಲಿಪಿಯನ್ನು ದೇಶದಾಧ್ಯಂತ ಪರಿಚಯಿಸಲಾಗುವುದು.

ಈ ಕೃತಿ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ದಯಾನಂದ ಜಿ ಕತ್ತಲ್ಸರ್,(ಅಧ್ಯಕ್ಷರು ,ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ) ನೆರವೇರಿಸಿ, ಜೈತುಲುನಾಡ್ ಸಂಘಟನೆ ತುಲು ಭಾಷೆ,ಸಂಸ್ಕೃತಿ, ಆಚಾರ-ವಿಚಾರದ ಉಳಿವಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯ, ತುಲು ಭಾಷೆಗೆ ಪ್ರಾದೇಶಿಕ ಭಾಷಾ ಮಾನ್ಯತೆ ಹಾಗೂ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಅವರ ಬೇಡಿಕೆ ನ್ಯಾಯಯುತವಾದದ್ದು. ಈ ಹೋರಾಟಕ್ಕೆ ಯಾವತ್ತೂ ನಾನೂ ಅವರೊಂದಿಗಿದ್ದೇನೆ ಎಂದರು.  ಹಿರಿಯ ಪತ್ರಕರ್ತ ಹಾಗೂ ಸಾಹಿತಿಗಳಾದ ಚಿದಂಬರ ಬೈಕಂಪಾಡಿ ಕೃತಿ ಬಿಡುಗಡೆ ಮಾಡಿ ಈ ಕೃತಿಯು ಒಂದು ಐತಿಹಾಸಿಕ ದಾಖಲೆಯಾಗುವುದರಲ್ಲಿ ಸಂಶಯವಿಲ್ಲ , ತುಲು ಲಿಪಿಯಲ್ಲಿ ಇದಕ್ಕಿಂತ ಮೊದಲು ಕೃತಿಗಳು ಬಂದಿಲ್ಲ ,ಅವರ ಪ್ರಯತ್ನಕ್ಕೆ ಯಶವಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅಥಿತಿಗಳಾಗಿ ಡಾ. ಆಕಾಶ್ ರಾಜ್ ಜೈನ್,(ಸದಸ್ಯರು ಕರ್ನಾಟಕ ತುಲು ಸಾಹಿತ್ಯ ಅಕಾಡೆಮಮಿ) ಅವರು ಮಾತನಾಡಿ, ಜೈ ತುಲುನಾಡ್ ಸಂಘಟನೆಯ ಯುವಕರ ತುಲು ನಾಡು ನುಡಿಯ ಮೇಲಿನ ಪ್ರೀತಿ ಅಪಾರವಾದದ್ದು ,ತುಲುವಿನ ತುಡಿತವು ಇನ್ನೂ ಭಾವನಾತ್ಮಕವಾಗಬೇಕು. ಹಲವಾರು ಕೈಗಾರಿಕಾ ಸಂಸ್ಥೆಗಳು, ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣಗಳು, ಮಹಾ ವಿದ್ಯಾಲಯ, ತಾಂತ್ರಿಕ ವಿಧ್ಯಾಲಯ, ವೈದ್ಯಕೀಯ ಕಾಲೇಜುಗಳು ತುಲುನಾಡ ಮಣ್ಣಿನಲ್ಲಿ ಬೆಳೆದು ಪ್ರಸಿದ್ದಿಯನ್ನು ಪಡೆದಿದೆ, ಆದರೆ ಬೆಳೆದ ಈ ಮಣ್ಣಿಗಾಗಿ ಏನು ಮಾಡಿದೆ ? ಕನಿಷ್ಠ ಪಕ್ಷ ತುಲು ಲಿಪಿಯ ನಾಮ ಫಲಕವನ್ನಾದರೂ ಇಡಬಹುದಿತ್ತು,. ತುಲು ಭಾಷೆಯಲ್ಲಿ ಸಾಹಿತ್ಯ ಕೃಷಿ ಆಗಬೇಕು, ಅದು ಇತರ ಭಾಷೆಗಳಲ್ಲಿಯೂ ಮುದ್ರಿತವಾಗಿ ದೇಶದಾದ್ಯಂತ ತುಲು ಸಂಸ್ಕೃತಿಯ ಪರಿಚಯವಾಗಬೇಕಿದೆ, ಆ ನಿಟ್ಟಿನಲ್ಲಿ ತುಲು ಲಿಪಿಯ ಕವನ ಸಂಕಲವನ್ನು ಹೊರತಂದುದು ಅಭಿನಂದನೀಯ ಕೆಲಸ, ತುಲು ಲಿಪಿ ಇಲ್ಲ ಎನ್ನುತಿದ್ದ ಸಮಯವೊಂದಿತ್ತು ,ತುಲು ಲಿಪಿ ಇದೆ, ಅದನ್ನು ಕಲಿಸಿ ಉಳಿಸುವ ಕೆಲಸ ಜೈ ತುಲುನಾಡ್ ಸಂಘಟನೆಯಿಂದ ಆಗುತ್ತಾ ಇದೆ. ಇವರ ಎಲ್ಲಾ ತುಲುಪರ ಕಾರ್ಯದಲ್ಲಿ ಜಯ ಸಿಗಲಿ ಎಂದರು,  ವರುಣ್ ಚೌಟ ,ಕಾರ್ಪೊರೇಟರ್ ಮಂಗಳೂರು ಮಹಾ ನಗರಪಾಲಿಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತುಲುಭಾಷೆ ಗಟ್ಟಿಯಾಗಬೇಕಾದರೆ ತುಲು ಸಾಹಿತ್ಯ ಮುಖ್ಯ ,ಇಷ್ಟೊಂದು ತುಲು ಬರಹಗಾರರ ಕವನಗಳನ್ನು ಸಂಗ್ರಹಿಸಿ ಅದನ್ನು ತುಲು ಲಿಪಿಯಲ್ಲಿ ಮುದ್ರಿಸಿ ತುಲು ಭಾಷೆಗೆ ಸಿಗಬೇಕಾದ ಸ್ಥಾನಮಾನವನ್ನು ದೊರಕಿಸಿಕೊಡುವಲ್ಲಿ ಸಹಕರಿಸಬೇಕೆಂಬ ಬೇಡಿಕೆಯೊಂದಿಗೆ  ದೇಶದ ಪ್ರಧಾನಿಯವರಿಂದ ಹಿಡಿದು ಏಲ್ಲಾ ರಾಜ್ಯದ ಮುಖ್ಯಮಂತ್ರಿಗಳವರೆಗೆ ತಲುಪಿಸುವ ನಿಮ್ಮ ಕಾರ್ಯ ಮಹತ್ತರವಾದದ್ದು , ಯಶಸ್ಸು ಸಿಗಲಿ ಎಂದು ಕೆನರಾ ಕಾಲೇಜಿನ ಪ್ರಾಧ್ಯಾಪಕರಾದ ರಘು ಇಡ್ಕಿದು ಶುಭ ಹಾರೈಸಿದರು. ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್(ರಿ) ಸಂಘಟನೆ ಉಪಾಧ್ಯಕ್ಷರಾದ ಹರಿಕಾಂತ್ ಕಾಸರಗೋಡು ವಹಿಸಿದ್ದರು,

ಪ್ರೇಮಾ ಎಂ.ಕಣ್ವತೀರ್ಥ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಿ, ಮಾಹಿತಿ ಮತ್ತು ತಂತ್ರಜ್ಞಾನ ಮೇಲ್ವಿಚಾರಕ ಸುಮಂತ್ ಹೆಬ್ರಿ ಸ್ವಾಗತಿಸಿದರು,. ಸಂಘಟನೆಯ  ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ ಪ್ರಸ್ತಾವನೆಗೈದು  ತುಲು ಸಾಹಿತ್ಯ  ಸಮಿತಿಯ ಮೇಲ್ವಿಚಾರಕಿ ಕುಶಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಕೃತಿ ಪರಿಚಯವನ್ನು ಮಾಡಿದರು.  ಕವಿತೆಗಳನ್ನು ಬರೆದು ಸಹಕರಿಸಿದ ಕವಿಗಳಿಗೆ ನೆನಪಿನೋಲೆಯನ್ನು ಹಂಚುವ ಕಾರ್ಯಕ್ರಮವನ್ನು ರಕ್ಷಿತ್ ರಾಜ್ ಕಲ್ಲಾಪು ನಿರ್ವಹಿಸಿದರು,.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ದೈವಾಧೀನರಾದ ತುಲುಭಾಷೆ, ಸಾಹಿತ್ಯ ಹಾಗೂ ಮಾನ್ಯತೆ ಗಾಗಿ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನೀಯರಾದ ಉದಯ ಧರ್ಮಸ್ಥಳ ಅವರಿಗೆ ಪುಷ್ಪ ನಮನಗಳುನ್ನು ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಜೈ ತುಲುನಾಡ್ ಸಂಘಟನೆಯ ಕೋಶಾಧಿಕಾರಿ ರಕ್ಷಿತ್ ಕೋಟ್ಯಾನ್ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ತುಳು ಸಾಹಿತ್ಯ ಸಮಿತಿ ಉಪ ಮೇಲ್ವಿಚಾರಕಿ ಗೀತಾ ಲಕ್ಷ್ಮೀಶ್ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ  ತುಲು ಸಂಸ್ಕೃತಿ ಸಮಿತಿಯ ಡಾ. ರವೀಶ್ ಪಡುಮಲೆ,  ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷರಾದ ವಿಶು ಶ್ರೀಕೆರ, ಸಂಘಟನೆಯ, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ,  ಉಪ ಸಂಘಟನಾ ಕಾರ್ಯದರ್ಶಿ  ಪೃಥ್ವಿ ತುಲುವೆ, ಪ್ರಚಾರ ಸಮಿತಿಯ ವಿನಯ್ ರೈ ಕುಡ್ಲ, ಸ್ಥಾಪಕ ಸಮಿತಿಯ ಕಿರಣ್ ತುಲುವೆ ಹಾಗೂ ಜೈ ತುಲುನಾಡ್ ಸಂಘಟನೆಯ ಸದಸ್ಯರು ಮತ್ತು ಹಿರಿಯ ಕಿರಿಯ ಕವಿ ಮಿತ್ರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು