3:59 PM Saturday18 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಯಾರೆಂದು ನಂಗೆ ಗೊತ್ತಿಲ್ಲ: ಜೀವಿಜಯ

22/08/2022, 12:04

ಮಡಿಕೇರಿ(reporterkarnataka.com):
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಬೆಂಬಲಿಗ ಎಂದು ಹೇಳುವ ಮೂಲಕ ಸಂಪತ್ ನಿಂದ ನನ್ನ ಹೆಸರಿಗೆ ಕಪ್ಪುಚುಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಸಂಪತ್ ಕಾಂಗ್ರೆಸ್ ಕಾಯ೯ಕತ೯ ಎಂದು ಬಿಜೆಪಿಯವರು ನಿರೂಪಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎ.ಜೀವಿಜಯ ಸವಾಲ್ ಹಾಕಿದ್ದಾರೆ.

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವ ಸಂಪತ್ ಕಾಂಗ್ರೆಸ್ಸಿಗ ಅಲ್ಲವೇ ಅಲ್ಲ. ಜೀವಿಜಯ ಬೆಂಬಲಿಗ ಎಂದು ಹೇಳಿಕೊಂಡಿರುವ ಸಂಪತ್ ಒಂದೇ ಒಂದು ಉದಾಹರಣೆಯೊಂದಿಗೆ ಅದನ್ನು ನಿರೂಪಿಸಲಿ. ಮುಂದಿನ ಚುನಾವಣೆಯನ್ನು ದೖಷ್ಟಿಯಲ್ಲಿರಿಸಿಕೊಂಡು ಬಿಜೆಪಿಯಿಂದ 

ಷಡ್ಯಂತ್ರ ನಡೆದಿದೆ. ಬಿಜೆಪಿಯ ಎಂದಿನ ಷಡ್ಯಂತ್ರವನ್ನು ತಿಳಿಯದ ಜನತೆ ಕೊಡಗಿನಲ್ಲಿಲ್ಲ.

ಸಂಪತ್ ತಂದೆ 2004 ರಲ್ಲಿ ಸೋಮವಾರಪೇಟೆ ಪಂಚಾಯತ್ ಗೆ ಬಿಜೆಪಿಯಿಂದ ನಾಮನಿದೇ೯ಶಿತ ಸದಸ್ಯರಾಗಿದ್ದರು. ಸಂಪತ್ ಹಿನ್ನಲೆಯಲ್ಲಿ ಬಿಜೆಪಿ ಇತಿಹಾಸವಿದೆ. ಸಂಪತ್ ಯಾರಿಂದ ಕಾಮಗಾರಿ ಗುತ್ತಿಗೆ ಪಡೆಯುತ್ತಿದ್ದಾನೆ ಎಂಬುದು ಸೋಮವಾರಪೇಟೆ ಜನರಿಗೆ ತಿಳಿದಿದೆ.

ಕಾಂಗ್ರೆಸ್ ಅಧಿಕಾರಕ್ಕೇರುವ ತವಕದಲ್ಲಿ ಬಿಜೆಪಿಯಿಂದ ಇಂಥ ಷಡ್ಯಂತ್ರ ಎಂದು ಜೀವಿಜಯ ಆರೋಪ ಆರೋಪ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು