ಇತ್ತೀಚಿನ ಸುದ್ದಿ
ಕುಕ್ಕುಂದೂರು: ಕಾರ್ಕಳ ಕಡೆಗೆ ತೆರಳುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿ
18/08/2022, 23:53
ಕಾರ್ಕಳ(reporterkarnataka.com): ಉಡುಪಿ ಯಿಂದ ಬರುತ್ತಿದ್ದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡು ರಸ್ತೆ ಬಿಟಿಕೆ ಪೆಟ್ರೋಲ್ ಬಂಕ್ ಬಳಿ ಅ.18 ರಂದು ನಡೆದಿದೆ.
ಕಾರು ಉಡುಪಿಯಿಂದ ಕಾರ್ಕಳ ಕಡೆಗೆ ಸಾಗುತಿತ್ತು ಎನ್ನಲಾಗಿದೆ. ಅಪಘಾತ ದ ತೀವ್ರತೆಗೆ ಕಾರಿನ ಮುಂಭಾಗವು ಜಖಂಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.