ಇತ್ತೀಚಿನ ಸುದ್ದಿ
ತುಂಬೆ: ಭಾರಿ ಮಳೆಗೆ ನಾಗಪ್ಪ ಪೂಜಾರಿ ಮನೆ ಭಾಗಶಃ ಕುಸಿತ; ಮನೆ ಮಂದಿ ಪ್ರಾಣಾಪಾಯದಿಂದ ಪಾರು
31/07/2022, 19:26
ಬಂಟ್ವಾಳ(reporterkarnataka.com): ಶುಕ್ರವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮುದಲ್ಮೆ ಹೌಸ್ ನಾಗಪ್ಪ ಪೂಜಾರಿ ಅವರ ಮನೆ ಶನಿವಾರ ಬೆಳಗ್ಗೆ ಭಾಗಶಃ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಡ ಕುಟುಂಬದ ಮನೆ ಅಪಾಯದ ಭೀತಿಯಲ್ಲಿದೆ. ಸ್ಥಳಕ್ಕೆ ತುಂಬೆ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ತುಂಬೆ, ಗ್ರಾಮ ಕರಣಿಕರು ಭೇಟಿ ನೀಡಿ ಪರಿಶೀಲಿಸಿದ್ದುಘ, ಪರಿಹಾರದ ಭರವಸೆ ನೀಡಿದ್ದಾರೆ.