9:08 AM Wednesday8 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಹಗರಿಬೊಮ್ಮನಹಳ್ಳಿ: ಮಕ್ಕಳಲ್ಲಿ ಭರ್ಜರಿ ಭರವಸೆ ಮೂಡಿಸುತ್ತಿರುವ ಕಲಾ ಭಾರತಿ ನಾಟ್ಯ ಶಾಲೆ

25/06/2022, 19:30

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಸಾಂಸ್ಕ್ರತಿಕ ಹಿನ್ನಲೆಯನ್ನ ಹೊದಿರುವ ಯುವ ಪೀಳಿಗೆಗೆ ಪಟ್ಟಣದಲ್ಲಿರುವ  ಕಲಾಭಾರತಿ ಭರತ ನಾಟ್ಯ ಕಲಾ ಶಾಲೆ, ಬಾಳಿನ ಭರವಸೆಯನ್ನು ಹಾಗೂ ಉತ್ತಮ ಭವಿಷ್ಯವನ್ನು ಕಲ್ಪಿಸುತ್ತಿದೆ. 

ವೃತ್ತಿಯಲ್ಲಿ ವಕೀಲರಾಗಿರುವ ವಾಸಂತಿ ಸಾಲುಮನಿ ಅವರು ನಾಟ್ಯಕಲ‍ಾ ಶಾಲೆಯ ಸ್ಥಾಪಕರಾಗಿದ್ದಾರೆ, ಹಾಗೂ  ಅದ್ಭುತ ಕಲಾರಾಧಕರೂ ಆಗಿದ್ದಾರೆ ವಾಸಂತಿ ಸಾಲುಮನಿ. ಅವರು ಮಕ್ಕಳಿಗೆ ನಾಟ್ಯದೊಂದಿಗೆ ಗುರುಕುಲ ಶಿಕ್ಷಣದ ಮಾದರಿಯಲ್ಲಿ, ಸಂಸ್ಕಾರ ಧಾರ್ಮಿಕ ಶ್ರದ್ದೆ ಹಾಗೂ ಉತ್ಕೃಷ್ಟ ಜೀವನದ ರಹದಾರಿಯನ್ನು ಯುವ ಪೀಳಿಗೆಗೆ ತೋರುತ್ತಿದ್ದಾರೆ. ತಾವು ಕಲಿತ ಭರತ ನಾಟ್ಯ ಕಲೆಯನ್ನು ಯುವ ಪೀಳಿಗೆಗೆ ಕಲಿಸುವ ಮೂಲಕ, ಆಧುನಿಕ ಜಗತ್ತಿನಿಂದ ತಾತ್ಸಾರಕ್ಕೀಡಾಗಿರುವ ಭರತ ನಾಟ್ಯ ಕಲೆಯನ್ನು ಯುವಪೀಳಿಗೆಯ ಮೂಲಕ ಚಿಗುರೊಡೆಸುವ  ಮಹಾದಾಸೆ ಹೊಂದಿದ್ದಾರೆ. ಅದಕ್ಕಾಗಿ ಹತ್ತು ಹಲವು ವರ್ಷಗಳಿಂದ ಕಲಾ ಸೇವೆಗೆಂದೇ ತಮ್ಮನ್ನ ಸ್ಥಾಪಿತವಾಗಿರುವ ತಮ್ಮ ಕಲಾ ಶಾಲೆಯ ಮೂಲಕ, ಈ ವರೆಗೆ ನೂರಾರು ಪ್ರತಿಭಾನ್ವಿತ ನಾಟ್ಯ ಕಲಾವಿದರನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಅವರು ಅಸಂಖ್ಯಾತ ಶಿಷ್ಯ ವೃಂಧವನ್ನು ಹೊಂದಿದ್ದಾರೆ. ವಾಸಂತಿಯವರು ಮಾತನಾಡಿ ತಮ್ಮ ಕಲಾ ಸೇವೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ, ವಿದ್ಯಾರ್ಥಿಗಳಿಗೆ  ನಾನು ಕಲಿತಿರುವ  ಭರತನಾಟ್ಯದ ಕಲೆಯನ್ನು, ಮಕ್ಕಳಿಗೆ ಹಾಗೂ ಆಸಕ್ತ ಯುವ ಪೀಳಿಗೆಗೆ ಕಲಿಸುವ ಮೂಲಕ ಕಲೆಗೆ ಪುನಶ್ಚೇತನ ಮೂಡಿಸುವ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು. ಜೊತರಗೆ ಗುರುಕುಲ ಮಾಧರಿಯಲ್ಲಿ ಸಂಸ್ಕಾರ ಸಂಸ್ಕ್ರತಿ ಧಾರ್ಮಿಕ ಶ್ರದ್ಧೆ, ನಾಡ ಹಾಗೂ ದೇಶ ಪ್ರೇಮ, ಮಾನಸಿಕ ಹಾಗೂ ಧೈಹಿಕ ವ್ಯಾಯಾಮಗಳನ್ನು ಕಲಿಸಲಾಗುತ್ತದೆ.ಯುವ ಪೀಳಿಗೆಗೆ ಕಲೆಯೊಂದಿಗೆ ಸಾಮಾಜಿಕ ಕಾಳಜಿ ಮೂಡಿಸುವ ಪ್ರಯತ್ನ ನಡೆದಿದ್ದು, ಭರತ ನಾಟ್ಯ ಕಲೆಯೊಂದಿಗೆ ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯಗಳನ್ನು, ಇಮ್ಮಡಿಗೊಳಿಸುವ ಸದುದ್ದೇಶ ದಿಂದ ಶಾಲೆಯನ್ನು ಪ್ರಾರಂಭಿಸಿಲಾಗಿದೆ. ಈ ನಿಟ್ಟಿನಲ್ಲಿ ಬಹುತೇಕ ಯಶಸ್ಸು ಕಂಡಿದ್ದು ಅದಕ್ಕೆ ಸಾಕಷ್ಟು  ನಿದರ್ಶನಗಳಿವೆ, ಹತ್ತಾರು ಕಡೆ ಕಾರ್ಯಕ್ರಮಗಳನ್ನು  ಮಾಡಲಾಗಿದೆ ಮತ್ತು ಕೆಲವೆಡೆಗಳಿಂದ ಕಾರ್ಯಕ್ರಮಕ್ಕೆ ಬೇಡಿಕೆಗಳು ಬಂದಿವೆ ಎಂದು ವಾಸಂತಿ ತಿಳಿಸಿದ್ದಾರೆ. ತಮ್ಮ ಈ ಯಶಸ್ವಿಗೆ ಅವರ ತಂದೆ ತಾಯಿ  ಮತ್ತು ಕುಟುಂಬದವರ ಸಂಪೂರ್ಣ ಸಹಕಾರ ಇದ್ದೇ ಇದೆ ಎನ್ನುತ್ತಾರೆ, ಭರತ ನಾಟ್ಯ ಕಲಾ ಶಿಕ್ಷಕಿ ವಾಸಂತಿ ರವರು.ತಮ್ಮ ಈ ಕಲಾ ಸೇವೆಗೆ ನೆರೆ ಹೊರೆಯವರು ಹಾಗೂ ಸ್ನೇಹಿತರು, ಪ್ರೋತ್ಸಾಹ ನೀಡಿ ಬೆನ್ನಿಗೆ ನಿಂತುಕೊಂಡಿದ್ದಾರೆಂದು ಅದಕ್ಕಾಗಿ ಅವರೆಲ್ಲರಿಗೂ ಚಿರ ಋಣಿ ಎನ್ನುತ್ತಾರೆ ಕಲಾ ಶಿಕ್ಷಕಿ ವಾಸಂತಿ. ಭರತನಾಟ್ಯ ಶಿಷ್ಯಂದಿರ ಪೋಷಕರು ಮಾತನಾಡಿ, ಮನತುಂಬಿ ವಾಸಂತಿ ಸಾಲುಮನಿಯವರು ಅಭಿನಂದಿಸಿ ಹಾರೈಸಿದ್ದಾರೆ. ನಮ್ಮ ಮಕ್ಕಳನ್ನು ಅವರ ಮಕ್ಕಳಂತೆ ಕಾಣುತ್ತಾರೆ, ವಿದ್ಯಾರ್ಥಿಗಳು ಪಠ್ಯ ಶಿಕ್ಷಣ ದೊಂದಿಗೆ, ಬೌದ್ಧಿಕ ಶಕ್ತಿ ಹೆಚ್ಚಾಗಿರುವುದು ಕಾಣುತ್ತಿದ್ದೇವೆ. ಪಾಶ್ವಿಮಾತ್ಯ ಸಂಸ್ಕೃತಿಗೆ ಯುವ ಪೀಳಿಗೆ ಹೋಗಿದ್ದು, ಪ್ರಸ್ತುತ ದಿನಮಾನದಲ್ಲಿ ಅವರಿಗೆ ಗುರುಕುಲ ಮಾಧರಿ ಶಿಕ್ಷಣ ಅತ್ಯಗತ್ಯವಾಗಿದೆ. ಭರತನಾಟ್ಯ ಕಲೆ ಯಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಿದ್ದು, ಭರತ ನಾಟ್ಯ ತರಬೇತಿಯಿಂದಾಗಿ ಮಕ್ಕಳು ವಿದ್ಯಾಭ್ಯಾಸದಲ್ಲಿಯೂ ಅಭಿವೃದ್ಧಿ ಸಾಧಿಸುತ್ತಿದ್ದಾರೆ. ಅವರಲ್ಲಿ ಧೈಹಿಕ ಹಾಗೂ ಮಾನಸಿಕ ಆರೋಗ್ಯ ಸಾಕಷ್ಟು ವೃದ್ಧಿಯಾಗಿದೆ. ಮಕ್ಕಳು ಭವಿಷ್ಯದಲ್ಲಿ ಉತ್ತಮ ಹಾಗೂ ಸದೃಢ    ಯುವ ಪೀಳಿಗೆಯಾಗಿ ಹೊರ ಹೊಮ್ಮಲಿದ್ದಾರೆ, ಇದು ಎಲ್ಲಾ ಮಕ್ಕಳ ಮತ್ತು  ಎಲ್ಲಾ ವಯಸ್ಕರಿಗೂ ಪ್ರೇರಣೆ ಯಾಗಿದೆ ಎಂದು ಮಕ್ಕಳ ಪೋಷಕರು ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ. 

 *ಕಲಾಭಾರತಿ ನಾಟ್ಯ ಶಾಲೆ ಪರಿಚಯ* ನಾಟ್ಯ ಶಾಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ಗಂಟೆಯಿಂದ ಭರತ ನಾಟ್ಯವನ್ನು ಹೇಳಿಕೊಡಲಾಗುತ್ತದೆ, ಮಕ್ಕಳಿಗೆ  ಭರತ ನಾಟ್ಯದೊಂದಿಗೆ, ವ್ಯಾಯಾಮ, ಜಾನಪದ ನೃತ್ಯಗಳನ್ನು ಹೇಳಿಕೊಡಲಾಗುವುದು ಎಂದು ಶಿಕ್ಷಕಿ ವಾಸಂತಿ ತಿಳಿಸಿದ್ದಾರೆ.  4 ವರ್ಷದ ಮಕ್ಕಳಿಂದ 58 ವರ್ಷದ ವರೆಗಿನ ಎಲ್ಲಾ ವಯಸ್ಸಿನವರು ತರಗತಿಗೆ ಬರುತ್ತಿದ್ದಾರೆ. ವಯಸ್ಸಿನ ಮಿತಿಯಿಲ್ಲ ಆಸಕ್ತಿಯೇ ಮುಖ್ಯ ಮಾನದಂಡವಾಗಿದೆ, ಯಾವದೇ ವಯೋಮಾನದವರಾದರೂ ಭರತ ನಾಟ್ಯ ನೃತ್ಯ ಕಲಿಯಬಹುದಾಗಿದೆ ಎಂದಿದ್ದಾರೆ.  *ಸಂಪರ್ಕಿಸಿ*-


ಹೆಚ್ಚಿನ ಮಾಹಿತಿಗಾಗಿ ವಾಸಂತಿ ಸಾಲುಮನಿ ಅವರ ಮೊಬೈಲ್ ನಂ – 8971413698/ 6363381265 ಸಂಪರ್ಕಿಸಬಹುದು. ಅಥವಾ ಹಳೇ ಹಗರಿಬೊಮ್ಮನಹಳ್ಳಿಯ ಶ್ರೀ ಬನಶಂಕರಿ ದೇವಸ್ಥಾನದ ರಸ್ತೆ, ಸಮುದಾಯ ಭವನ ಹತ್ತಿರದಲ್ಲಿರುವ “ಕಲಾ ಭಾರತಿ  ಭರತ ನಾಟ್ಯ ಕಲಾ ಶಾಲೆ” ಯನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು