4:51 PM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಕಂಬಿ ಹಿಂದೆ ಕಣ್ಣೀರು!: ಜೈಲಿನಿಂದ ಹೊರ ಬಂದ ಬಳಿಕ ಅನಾಥಾಶ್ರಮ ಕಟ್ಟುತ್ತಾರಂತೆ ಪಿಎಸ್‌ಐ ಹಗರಣದ ದಿವ್ಯಾ ಹಾಗರಗಿ!!

12/05/2022, 13:06

ಕಲಬುರಗಿ(reporterkarnataka.com): ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ, ಆಡಳಿತ ಪಕ್ಷ ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ತಾನು ಮಾಡಿದ ಮಹಾ ಅಪರಾಧಕ್ಕೆ ನೊಂದು ಪ್ರತಿ ದಿನವೂ ಕಣ್ಣೀರು ಹಾಕುತ್ತಿದ್ದಾರೆ. ‘ಹಣದ ಹಿಂದೆ ಬಿದ್ದು ನಾನು ನನ್ನ ಲೈಫ್ ಹಾಳುಮಾಡಿಕೊಂಡೆ ಸರ್. ಜೈಲಿನಿಂದ ಹೊರಗೆ ಬಂದ ಬಳಿಕ ಅನಾಥಾಶ್ರಮ ಕಟ್ಟಿ ಜನರ ಸೇವೆ ಮಾಡುತ್ತೇನೆ’ ಎಂದು ಸಿಐಡಿ ಅಧಿಕಾರಿಗಳ ಮುಂದೆ ದಿವ್ಯಾ ಹೇಳಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಲಕ್ಷ ಲಕ್ಷ ಹಣ ಬರುತ್ತೆ ಎಂದು ಇಂತಹ ತಪ್ಪು ಕೆಲಸ ಮಾಡಿದೆ. ನಾನು ಮಾಡಿದ್ದು ದೊಡ್ಡ ತಪ್ಪು. ಅದಕ್ಕಾಗಿ ನನಗೆ ಬಹಳ ಪಶ್ಚಾತಾಪ ಇದೆ.

ಪ್ರಾಮಾಣಿಕರ ಭವಿಷ್ಯ ಹಾಳು ಮಾಡಿ ಬಿಟ್ಟೇ.ದಯವಿಟ್ಟು ಕ್ಷಮಿಸಿ ಬಿಡಿ ಸರ್ ಎಂದು ಸಿಐಡಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ.

ಆರೋಪಿಗಳಾಗಿರುವ ಮಂಜುನಾಥ್ ಮತ್ತು ಕಾಶೀನಾಥ್ ಮಾತು ಕೇಳಿ ನನ್ನ ಜೀವನ ಹಾಳು ಮಾಡಿಕೊಂಡೆ. ನಾನು ಬುದ್ಧಿ ಕಲಿಯಲು ಸಿಐಡಿ ಬಂಧನವೊಂದೇ ಸಾಕು ಎಂದು ತನಿಖಾಧಿಕಾರಿ ಮುಂದೆ ಕಣ್ಣೀರು ಸುರಿಸುತ್ತಾ ದಿವ್ಯಾ ಹೇಳಿಕೆ ನೀಡಿದ್ದಾರಂತೆ.

ಪ್ರತಿನಿತ್ಯ ಕಷ್ಟ ಅಂತ ಜನರು ಬಂದ್ರೆ ಸಹಾಯ ಮಾಡುತ್ತಿದೆ. ಆದರೆ ಈಗ ನನ್ನ ಪರಿಸ್ಥಿತಿ ಈ ರೀತಿಯಾಗಿದೆ. ಜೈಲಿನಿಂದ ಹೊರ ಬಂದ ಮೇಲೆ ಅನಾಥಾಶ್ರಮ ಕಟ್ಟುತ್ತೇನೆ. ಅನಾಥಾಶ್ರಮವನ್ನು ಇದೇ ಸಿಐಡಿ ಅಧಿಕಾರಿಗಳ ಕೈಯಲ್ಲೇ ಉದ್ಘಾಟನೆ ಮಾಡಿಸುತ್ತೇನೆ. ನನ್ನ ಬಂಧಿಸಿ ನನ್ನ
ಮನಃ ಪರಿವರ್ತನೆಗೆ ಸಹಕಾರ ನೀಡಿದ ಸಿಐಡಿ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರಂತೆ.

ಈ ಅವಮಾನ ಎಲ್ಲವೂ ಸಾಕು. ನಾನು ಮುಂದಿನ ದಿನಗಳಲ್ಲಿ ಒಳ್ಳೆಯವಳಾಗಿ ಬಾಳುತ್ತೇನೆ. ಮತ್ತೆ ಅನಾಥಾಶ್ರಮ ಕಟ್ಟಿ ಜನಸೇವೆ
ಮಾಡುತ್ತೇನೆ ಎನ್ನುವುದು ದಿವ್ಯಾ ಅವರ ನುಡಿ ದಿವ್ಯಾ ಹಾಗರಗಿ ಅವರ ಸಿಐಡಿ ಕಸ್ಟಡಿ ಅಂತ್ಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು
ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪದ ಮೇಲೆ


ಬಂಧಿತರಾಗಿರುವ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಅವರೂ ಕೂಡ
ಇದೇ ಜೈಲಿನಲ್ಲಿದ್ದಾರೆ. ಈ ವೇಳೆ ಜೈಲಿನಲ್ಲಿ ದಂಪತಿ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಪರಸ್ಪರ ನೋಡಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಕೆಟ್ಟ ಮೇಲೆ ಬುದ್ಧಿ ಅಂತ ಹೇಳುವುದು ಇದಕ್ಕೆ ತಾನೆ?

ಇತ್ತೀಚಿನ ಸುದ್ದಿ

ಜಾಹೀರಾತು