8:51 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಪಾಲಿಕೆ ಆಡಳಿತ ನಿರ್ಲಕ್ಷ್ಯ; ಬಜಾಲ್ ಚರ್ಚ್ ಮುಂಭಾಗದಲ್ಲಿ ತ್ಯಾಜ್ಯ ನೀರು ಕಕ್ಕುವ ಮ್ಯಾನ್ ಹೋಲ್ !!; ದುರ್ವಾಸನೆಯೊಂದಿಗೆ ಸ್ಥಳೀಯರ ಬದುಕು!

06/05/2022, 15:20

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ನೆಗಡಿಯಾದಾಗ ಮೂಗು ಸೋರುವುದು ಸಾಮಾನ್ಯ. ನಮ್ಮ ಮಹಾನಗರಪಾಲಿಕೆಗೂ ಇದೇ ಸಮಸ್ಯೆ. ಪಾಲಿಕೆಯ 60 ವಾರ್ಡ್ ಗಳ ಪೈಕಿ ಎಲ್ಲದರೂ ಒಂದು ಕಡೆ ಮ್ಯಾನ್ ಹೋಲ್ ಸೋರುತ್ತಲೇ ಇರುತ್ತದೆ. ನಗರದ ಹೃದಯಭಾಗವಾದ ಅಂಬೇಡ್ಕರ್ ಸರ್ಕಲ್ ಬಳಿಯೇ ತಿಂಗಳಿಗೆ ಎರಡು ಬಾರಿ ಮ್ಯಾನ್ ಹೋಲ್ ಸೋರುತ್ತಿರುತ್ತದೆ. ಆದರೆ ನಾವು ಈಗ ಹೇಳ ಹೊರಟಿರುವುದು ನಗರದ ಹೃದಯಭಾಗದ ಸೋರಿಕೆಯಲ್ಲ. ಬದಲಿಗೆ ನಗರದ ಒಂದು ಮೂಲೆಯಲ್ಲಿರುವ ಕಂಕನಾಡಿ ಬಿ ವಾರ್ಡ್ ಹಾಗೂ ಅಳಪೆ 50ನೇ ವಾರ್ಡ್ ಮಧ್ಯದಲ್ಲಿ ಇರುವ ಮ್ಯಾನ್ ಹೋಲ್ ಕಥೆ. 


ಎರಡು ವಾರ್ಡ್ ಗಳ ಮಧ್ಯೆ ಇದು ಇರುವುದರಿಂದ ಇದು ಯಾವ ವಾರ್ಡ್ ಗೆ ಸೇರಿದ್ದು ಎಂಬ ಜಿಜ್ಞಾಸೆ ಇದೆ. ಇಲ್ಲಿನ ಮ್ಯಾನ್ ಹೋಲ್ ಕಿವಿ ಸೋರುವ ರೀತಿಯಲ್ಲಿ ಸೋರುತ್ತಲೇ ಇರುತ್ತದೆ. ಕಿವಿ ಸೋರಿದರೆ ಹತ್ತಿ ಇಟ್ಟು ಭದ್ರ ಮಾಡಬಹುದು. ಆದರೆ ಪಾಲಿಕೆಯ ಮ್ಯಾನ್ ಹೋಲ್ ಸೋರಿದರೆ ಯಾವ ಹತ್ತಿಯ ಆಟವೂ ನಡೆಯೋದಿಲ್ಲ. ಆದ್ದರಿಂದ ದುರ್ವಾಸನೆಯುಕ್ತ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದು ಅಂಗಡಿಯ ಎದುರುಗಡೆಯಿಂದ ಸಾಗುತ್ತದೆ.


ಬಸ್ಸು ಹೋಗುವ ಈ  ರಸ್ತೆಯಲ್ಲಿ ಸತತ ಒಂದು ತಿಂಗಳಿಂದ ಮ್ಯಾನ್ ಹೋಲ್ ತ್ಯಾಜ್ಯ ಹರಿಯುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ಆದರೆ ಸೂಕ್ತ ಕ್ರಮ ಕೈಗೊಂಡಿಲ್ಲ. ಮ್ಯಾನ್ ಹೋಲ್ ಕನೆಕ್ಷನ್  ಸರಿಯಾಗಿ ಆಗಿಲ್ಲ ಎಂಬ ಸಾರ್ವಜನಿಕರು ಹೇಳುತ್ತಾರೆ. ಮಳೆ ನೀರಿನೊಂದಿಗೆ ಡ್ರೈನೇಜ್ ನೀರು ಮಿಶ್ರಣವಾಗಿ ನಡೆದು ಹೋಗುವ ಪ್ರಯಾಣಿಕರು ಅದನ್ನೇ ತುಳಿದುಕೊಂಡು ಹೋಗುವ ಹೋಗುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಇಂದಿನ ಕೊರೊನಾ ಕಾಲದಲ್ಲಿ ಅನೇಕ ಬ್ಯಾಕ್ಟೀರಿಯಗಳು ಹರಡುವ ಸಾಧ್ಯತೆಯಿದ್ದು, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕೊಡಬೇಕಾಗಿದೆ

ಹೇಮಾವತಿ ನಗರದಲ್ಲಿ ಇತ್ತೀಚಿಗೆ ಮ್ಯಾನ್ ಹೋಲ್ ಸಂಪರ್ಕ ಮಾಡಲಾಗಿದೆ. ಆದರೆ ನನಗೆ ಬಜಾಲ್ ಮ್ಯಾನ್ ಹೋಲ್ ಸಂಪರ್ಕದ ಬಗ್ಗೆ ಗೊತ್ತಿಲ್ಲ. ಯಾವಾಗ ಕೊಟ್ಟಿದೆ ಯಾರು ಕೊಟ್ಟಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ.ಇದು ಅಳಪೆ 50 ವಾರ್ಡಿಗೆ ಬರುವುದಿಲ್ಲ. ಆದರೆ ಎರಡು ಬಾರಿ ಲೀಕೇಜ್ ಸಮಸ್ಯೆ  ಪರಿಹರಿಸಿದ್ದೇನೆ.

– ಶೋಭಾ ಪೂಜಾರಿ, ಕಾರ್ಪೊರೇಟರ್ , ಅಳಪೆ 50 ವಾರ್ಡ್

ಇದು ನನ್ನ ವಾರ್ಡ್ ಗೆ ಬೀಳುವುದಿಲ್ಲ.ಆದರೆ ಈ ಮ್ಯಾನ್ ಹೋಲ್ ಸಮಸ್ಯೆ  ಸರಿಪಡಿಸುವುದು ಇಬ್ಬರು ಕಾರ್ಪೊರೇಟರ್ ಗಳ ಜವಾಬ್ದಾರಿಯೂ ಹೌದು. ಈ ಮ್ಯಾನ್ ಹೋಲ್ ಪ್ರದೇಶದಲ್ಲಿ   ಕಾಂಕ್ರೀಟ್  ಕಾಮಗಾರಿ  ಕಾರ್ಪೊರೇಟರ್ ಶೋಭಾ  ಅವರ ಉಸ್ತುವಾರಿಯಲ್ಲಿ ನಡೆದಿತ್ತು. ಈ ಬಗ್ಗೆ ಇಂಜಿನಿಯರ್ ಪದ್ಮಾ ಅವರಲ್ಲಿ ಮಾತಾಡಿದ್ದೇನೆ. ನಾಳೆ  ಲೀಕೇಜ್   ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಹಾಗೊಂದು ವೇಳೆ ಲಿಕೇಜ್ ಸರಿಯಾಗದಿದ್ದ ಲ್ಲಿ ಆ ಜಾಗದಲ್ಲಿನ ಕಾಂಕ್ರೆಟ್ ಒಡೆದು ನೋಡಬೇಕಷ್ಟೇ.

ಕಾಂಕ್ರೀಟ್ ಹಾಕುವಾಗಲೇ ಸರಿಯಾದ ಪ್ಲಾನಿಂಗ್ ಹಾಕಿದ್ದಲ್ಲಿ ಮತ್ತೆ ಇಂತಹ ಸಮಸ್ಯೆಗಳು ಬರುವುದಿಲ್ಲ.  

ಪ್ರವೀಣ್ ಚಂದ್ರ ಆಳ್ವ, ಕಾರ್ಪೊರೇಟರ್ ಕಂಕನಾಡಿ (49) ಬಿ ವಾರ್ಡ್

ಇತ್ತೀಚಿನ ಸುದ್ದಿ

ಜಾಹೀರಾತು