6:24 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಕಲಬುರ್ಗಿ: ಶ್ರೀರಾಮ ನವಮಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಎಬಿವಿಪಿ ಖಂಡನೆ

11/04/2022, 10:18

ಮಂಗಳೂರು(reporterkarnataka.com): ರಾಮ ನವಮಿ ಆಚರಣೆಗೆ ದೇವಸ್ಥಾನಕ್ಕೆ ತೆರಳಿದ ಕಲಬುರ್ಗಿಯ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯ ಘಟಕ ಖಂಡಿಸಿದೆ.

ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಬಳಿ ಇರುವ ಲಕ್ಷ್ಮಿ ದೇವಸ್ಥಾನದಲ್ಲಿ ರಾಮ ನವಮಿಯ ಆಚರಣೆಯು ನಡೆಯುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಸೇರಿದ್ದರು . 

ವಿದ್ಯಾರ್ಥಿಗಳು ದೇವಸ್ಥಾದಲ್ಲಿ ನಡೆದ  ರಾಮನವಮಿಯ ಆಚರಣೆಯ ನಂತರ ಹಿಂದಿರುಗುವ ಸಂಧರ್ಭದಲ್ಲಿ 4 ವಿದ್ಯಾರ್ಥಿಗಳ ತಂಡವೊಂದು ರಾಮ ನವಮಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ , ವಿದ್ಯಾರ್ಥಿಯ ಬಟ್ಟೆಯನ್ನು ಹರಿದು  ಹಲ್ಲೆಯನ್ನು ನಡೆಸಿದ್ದಾರೆ ಮತ್ತು ವಿದ್ಯಾರ್ಥಿಯನ್ನು ಅಪಹರಿಸುವಂತಹ ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡಿರುತ್ತಾರೆ . 

ಈ ಘಟನೆಯು ವ್ಯವಸ್ಥಿತ ಸಂಚಿನಿಂದ ನಡೆದಿರುವ ರೀತಿಯಾಗಿ ಕಂಡು ಬರುತ್ತಿದೆ. ಈ ರೀತಿಯಾಗಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ನಡುವೆ ವೈಷಮ್ಯ ಬಿತ್ತುವಂತ ಕೆಲಸವನ್ನು ಮಾಡಿ ಭಯದ ವಾತಾವರಣವನ್ನು ವಿಶ್ವ ವಿದ್ಯಾನಿಲಯದಲ್ಲಿ ಸೃಷ್ಟಿಸುವಂತ ಕೆಲಸವನ್ನು ಗೂಂಡಾ ವರ್ತನೆಯ ಈ ವಿದ್ಯಾರ್ಥಿಗಳು ಮಾಡಿರುತ್ತಾರೆ. ಈ ಘಟನೆಯನ್ನು ವಿದ್ಯಾರ್ಥಿ ಪರಿಷತ್  ಖಂಡಿಸುತ್ತದೆ.  ಈ ಗೂಂಡಾ ವರ್ತನೆ ತೋರಿರುವ ವಿದ್ಯಾರ್ಥಿಗಳ ವಿರುದ್ಧ  ಕೂಡಲೇ ವಿಶ್ವ ವಿದ್ಯಾಲಯವು ಸೂಕ್ತವಾದ ಶಿಸ್ತು ಕ್ರಮವನ್ನು ತೆಗೆದುಕೊಳ್ಳ ಬೇಕು ಹಾಗೂ ಕಾನೂನು ಕ್ರಮಕ್ಕಾಗಿ ಮೊಕದ್ದಮೆಯನ್ನು ಹೂಡ ಬೇಕು ಎಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ . 

ಇತ್ತೀಚಿನ ಸುದ್ದಿ

ಜಾಹೀರಾತು