10:13 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಎಲ್ ಐ ಸಿಯಲ್ಲಿ ಕೇಳೋರಿಲ್ಲದೇ ಬಿದ್ದಿದೆ 21 ಸಾವಿರ ಕೋಟಿ ರುಪಾಯಿ: ಕ್ಲೈಮ್ ಮಾಡದ ಹಣವಿದು !!

17/02/2022, 13:46

ಹೊಸದಿಲ್ಲಿ(reporterkarnataka.com):

ಎಲ್‌ಐಸಿಯಲ್ಲಿ ಕ್ಲೈಮ್ ಮಾಡದ ಸುಮಾರು 21,500 ಕೋಟಿಗೂ ಹೆಚ್ಚು ನಿಧಿ ಇದೆ. ಹೌದು, ಮಾರುಕಟ್ಟೆ ನಿಯಂತ್ರಕ ಸೆಬಿಗೆ, ಐಪಿಒಗಾಗಿ ಸಲ್ಲಿಸಿದ ಕರಡಿನಲ್ಲಿ ಕಂಪನಿ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಎಲ್‌ಐಸಿ ಸೆಪ್ಟೆಂಬರ್ 2021 ವೇಳೆಗೆ 21,539  ಕೋಟಿ ರೂ.ಗಳಷ್ಟು ಕ್ಲೈಮ್ ಮಾಡದ ಹಣವನ್ನು ಹೊಂದಿದೆ.

ಇದರಲ್ಲಿ ಕ್ಲೈಮ್ ಮಾಡದ ಬಾಕಿ ಮೊತ್ತದ ಮೇಲೆ ಗಳಿಸಿದ ಬಡ್ಡಿ ಹಣ ಕೂಡ ಸೇರಿದೆ. ಭಾರತೀಯ ಜೀವ ವಿಮಾ ನಿಗಮ ಸಲ್ಲಿಸಿದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ, ಕ್ಲೈಮ್ ಮಾಡದ ಮೊತ್ತವು ಮಾರ್ಚ್ 2021ರ ಅಂತ್ಯದ ವೇಳೆಗೆ 18,489 ಕೋಟಿಯಷ್ಟಿತ್ತು.

ಸೆಬಿಯ ನಿಯಮಗಳ ಪ್ರಕಾರ ಯಾವುದೇ ವಿಮಾ ಕಂಪನಿ ತನ್ನ ಜಾಲತಾಣದಲ್ಲಿ ಕ್ಲೈಮ್ ಮಾಡದ ಮೊತ್ತವನ್ನು ಪರಿಶೀಲಿಸಲು ಸೌಲಭ್ಯವನ್ನು ಒದಗಿಸಬೇಕಿದೆ. ಈ ಸೌಲಭ್ಯವನ್ನು ಎಲ್ ಐ ಸಿ ವೆಬ್ ಸೈಟ್ ನಲ್ಲಿ ಕಲ್ಪಿಸಲಾಗಿದ್ದು, ಪಾಲಿಸಿ ಹೊಂದಿರುವವರು ತಮಗೆ ಬರಬೇಕಾದ ಮೊತ್ತವಿದೆಯೇ ಎಂಬುದನ್ನು ಪರಿಶೀಲಿಸಿ ಅದನ್ನು ಕೋರುವುದಕ್ಕೆ ಅವಕಾಶವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು