ಇತ್ತೀಚಿನ ಸುದ್ದಿ
ಬದುಕು ಕಟ್ಟಿಕೊಳ್ಳಲು ನೆರವಾದ ಕಾಫಿದೊರೆ ಸಿದ್ದಾರ್ಥ ಗೆ ಮದುವೆ ಮನೆಯಲ್ಲಿ ನುಡಿ ನಮನ
27/01/2022, 09:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಉದ್ಯೋಗ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಕಾರಣರಾದ ಸಿದ್ದಾರ್ಥ ಹೆಗ್ಗಡೆ ಅವರಿಗೆ ಯುವಕನೊಬ್ಬ ತನ್ನ ಮದುವೆಯ ದಿನ ವೇದಿಕೆಯಲ್ಲಿ ನುಡಿನಮನ ಸಲ್ಲಿಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ನಿಡ್ನಳ್ಳಿ ಸಮೀಪದ ಹೊಳೆಕೂಡಿಗೆಯ ಸಂತೋಷ್ ಹಾಗೂ ಬಾಳೆಹೊನ್ನೂರು ಗಡಿಗೇಶ್ವರದ ಪ್ರಮೀತಾ ಅವರ ವಿವಾಹದ ಹಿನ್ನಲೆಯಲ್ಲಿ ಮದುಮಗ ಸಂತೋಷ್ ಅವರ ಮನೆ ಹೊಳೆಕೂಡಿಗೆಯಲ್ಲಿ ಮಂಗಳವಾರ ಮೆಹಂದಿ ಶಾಸ್ತ್ರ ನಡೆದಿದ್ದು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಿದ್ದಾರ್ಥ ಅವರ ಭಾವಚಿತ್ರವನ್ನು ಇಟ್ಟು ಪುಷ್ಪ ನಮನ ಹಾಗೂ ನುಡಿನಮನ ವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮದುಮಗ ಸಂತೋಷ್, ಬಡ ಕುಟುಂಬದಿಂದ ಬಂದ ನನಗೆ ಸಿದ್ದಾರ್ಥ ಹೆಗ್ಗಡೆ ಅವರು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕೊಟ್ಟ ಕಾರಣದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾದ್ಯವಾಯಿತು ಎಂದರು.
ಬಿಜೆಪಿ ಮುಖಂಡರಾದ ಸಂಜಯ ಗೌಡ, ಪರೀಕ್ಷಿತ್ ಗೌಡ ಮುಂತಾದವರು ಆಗಮಿಸಿ ಸಿದ್ದಾರ್ಥ ಹೆಗ್ಗಡೆ ಅವರ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿದರು.