9:25 PM Tuesday7 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಗುರು ಇಲ್ಲದ ಜೀವನ ವ್ಯರ್ಥ, ಪ್ರೀತಿ- ಜೀವ, ದ್ವೇಷ- ಸಾವು:  ಸುದ್ದಿ ಸಂಪಾದಕ ಡಾ. ಯು. ಪಿ. ಶಿವಾನಂದ್ ಅಭಿಮತ

13/01/2022, 11:39

ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಸಹಯೋಗದಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸುದ್ದಿ ಪತ್ರಿಕೆಯ ಸಂಪಾದಕ, ಆಡಳಿತ ನಿರ್ದೇಶಕ ಯು. ಪಿ. ಶಿವಾನಂದ್ ಅವರು ಮಾತನಾಡಿ, ಪ್ರೀತಿಯನ್ನು ಹಂಚಿ, ಅದು ನಿಮಗೆ ಮರಳಿ ಬರುತ್ತದೆ. ದ್ವೇಷ ನಿಮ್ಮನೆ ನಾಶ ಮಾಡುತ್ತದೆ.


ಶಿಕ್ಷಣ ಎಂಬುದು ಕಿಡಿ ಅದನ್ನು ಜೀವನದಲ್ಲಿ ಸರಿಯಾಗಿ ಬಳಸಿಕೊಳ್ಳಿ , ಇನ್ನೊಬ್ಬರನ್ನು ಕಾಪಿ ಹೊಡಿಬೇಡಿ, ನಿಮ್ಮದೇ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ. ವಿವೇಕಾನಂದರು ಆಗಿನ ಕಾಲಘಟ್ಟದಲ್ಲಿ ಮಾಡಿದ ಸೇವೆಯನ್ನು ಮುಂದಿಟ್ಟು ಈ ಕಾಲಘಟ್ಟಕ್ಕೆ ಅನ್ವಯವಾಗುವಂತೆ ಸಮಾಜಕ್ಕೆ ಸೇವೆ ನೀಡಿ ಎಂದು ಅವರು ಹೇಳಿದರು.
ಜಗತ್ತಿನಲ್ಲಿರುವ ಧರ್ಮವನ್ನು ಗೌರವವಿಸಿದರೆ ಗಲಭೆಗಳು ನಡೆಯುದಿಲ್ಲ.ಇನ್ನೊಬ್ಬರ ಧರ್ಮವನ್ನು ಗೌರವಿಸಿ. ವಿವೇಕಾನಂದರ ಜೀವನವನ್ನು ಅನ್ವಯಿಸಿಕೊಳ್ಳಿ.ಧರ್ಮ ನಮ್ಮದು, ದೇಶ ನಮ್ಮದು ಎಂಬ ವಿವೇಕಾನಂದರ ನಂಬಿಕೆಯನ್ನು ನಾವು ಉಳಿಸಿ ನೆಮ್ಮದಿಯುತ ಜೀವನ ನಡೆಸೋಣ. 

ಪ್ರೀತಿ ಜೀವ, ದ್ವೇಷ ಸಾವು. ಪ್ರೀತಿಯನ್ನು ಹಂಚಿಕೊಳ್ಳಿ ಅದು ತಿರುಗಿ ಬರುತ್ತದೆ. ವಿದ್ಯಾರ್ಥಿಗಳು ಯಾವುದೇ ಕಾರ್ಯದಲ್ಲಿ ಪ್ರಯತ್ನಿಸಬೇಕು,ಸೋತರೆ ಅನುಭವ, ಗೆದ್ದರೆ ಸಂತೋಷ. ಸೇವೆಯ ಅವಶ್ಯಕತೆ ಇರುವರಿಗೆ ನೀಡಿ. ಅದೇ ಸೇವೆಯ ಇನ್ನೊಂದು ಮುಖ. ಹೆತ್ತವರಿಗೆ ವೃದ್ಧಾಪ್ಯದಲ್ಲಿ  ಪ್ರೀತಿ ವಿಶ್ವಾಸ ನೀಡಿ ಅದೇ ಸೇವೆ ಎಂದು ಅವರು ಹೇಳಿದರು.

ದೇಶದ ಪ್ರಜೆಯು ಕುಂಟನಾಗಲಿ ಕುರುಡಣಗಲಿ ಪ್ರತಿಯೊಬ್ಬ ವ್ಯಕ್ತಿಯು ಶೇಷ್ಟ. ಯಾರನ್ನು ಕೇಳಾಗಿ ಕಾಣಬೇಡಿ. ಶೇಷ್ಟ ವಾಗಿ ಬಾಳಿ ಬದುಕಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ  ಡಾ.ವರದರಾಜ ಚಂದ್ರಗಿರಿ ಮಾತನಾಡಿ ವಿವೇಕಾನಂದ ನಮಗೆ ರೋಲ್ ಮಾಡಲ್ ಎಂದರು.

ಕಾರ್ಯಕ್ರಮದ ಆಯೋಜಕರಾದ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಮಾತನಾಡಿ,ವಿವೇಕಾನಂದರ  ತತ್ವಾದರ್ಶಗಳನ್ನು ಅರಿತು ಸಮಾಜದ ಶಕ್ತಿಯಾಗಿ ಯುವಕರು ಬೆಳೆಯಬೇಕು. ದೇಶದ ಶಕ್ತಿಯೇ ಯುವಶಕ್ತಿ ಎಂದು ವಿವೇಕಾನಂದರು ನಂಬಿದ್ದರು. ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತಿಸಿದಾಗ ಅವರಿಂದಲೇ ಕಾರ್ಯಕ್ರಮ ರೂಪುಗೊಳ್ಳುವಷ್ಟು ಯುವ ಪೀಳಿಗೆ ಜ್ಞಾನವನ್ನು ಹೊಂದಿದೆ.

ಎನ್.ಸಿ.ಸಿ ದೇಶ ರಚನೆ ಮಾಡಿದರೆ, ಎನ್ಎಸ್ಎಸ್  ದೇಶ ಸೇವೆ ಮಾಡುತ್ತದೆ. ದೇಶದ ಸಾಂಸ್ಕೃತಿಕ  ವೈಭೋಗವನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಮಕ್ಕಳದ್ದು, ನಮ್ಮತನದ ಅರಿವು ಮೂಡಿಸುವುದೇ ಎನ್ಎಸ್ಎಸ್  ಹಾಗೂ ಸುತ್ತಮುತ್ತಲಿನ ಆರೋಗ್ಯವನ್ನು ಕಾಪಾಡುವುದು ಕೂಡ ರಾ.ಸೇ.ಯೋ ಸ್ವಯಂಸೇವಕರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.


ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾ.ಸೆ.ಯೋ. ಸ್ವಯಂ ಸೇವಕರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶನ ಸ್ವಯಂ ಸೇವಕರಿಂದ ನಡೆಯಿತು.



ಯೋಜನಾಧಿಕಾರಿ ಹರಿಪ್ರಸಾದ್ ಎಸ್. ಸ್ವಾಗತಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ದಾಮೋದರ ಕಣಜಾಲು ವಂದಿಸಿದರು.
ರಾ.ಸೆ.ಯೋ. ಘಟಕ ನಾಯಕ ಸಾರ್ಥಕ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು