4:17 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ನರ್ಸಿಂಗ್ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ !: ಜರ್ಮನಿಯಲ್ಲಿ 4 ಲಕ್ಷ ನರ್ಸ್ ಹುದ್ದೆ ಖಾಲಿ!!; ಇನ್ನೇಕೆ ತಡ, ಅವಕಾಶ ಬಾಚಿಕೊಳ್ಳಿ

20/12/2021, 21:24

ಮಂಗಳೂರು(reporterkarnataka.com): ನರ್ಸಿಂಗ್ ತರಬೇತಿ ಪಡೆದವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ವಿದೇಶದಲ್ಲಿ ಕೈತುಂಬಾ ಸಂಬಳ ಪಡೆದು ಕೆಲಸ ಮಾಡುವ ಯೋಗ ಕೂಡಿಬರಲಿದೆ.

ಜರ್ಮನಿಯಲ್ಲಿ 4 ಲಕ್ಷ ನರ್ಸ್ ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳಿಗೆ ಅದೃಷ್ಟ ಒಲಿದು ಬರಲಿದೆ.

ಜರ್ಮನಿಯ ವಿವಿಧ ಆಸ್ಪತ್ರೆಗಳಲ್ಲಿ ತೆರವಾಗಿರುವ ಸುಮಾರು 4 ಲಕ್ಷ ನರ್ಸ್ ಹುದ್ದೆಗಳ ಭರ್ತಿಗೆ 4 ಏಜೆನ್ಸಿಗಳನ್ನು ನೇಮಿಸಲಾಗಿದೆ. ಇದರಲ್ಲಿ ಬಾಡಿಂಗ್ ಬ್ರಿಡ್ಜ್ ಏಜೆನ್ಸಿಯೂ ಒಂದಾಗಿದೆ. ಭಾರತ, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳಿಂದ ಅರ್ಹ ಅಭ್ಯರ್ಥಿಗಳ ಶೋಧ ನಡೆಸಿ ಉದ್ಯೋಗಾವಕಾಶ ನೀಡುವ ಜವಾಬ್ದಾರಿ ಈ ಏಜೆನ್ಸಿಯದ್ದಾಗಿದೆ.

*ಅಭ್ಯರ್ಥಿಗಳ ಅರ್ಹತೆ ಏನು?

ನರ್ಸಿಂಗ್ ತರಬೇತಿ ಪಡೆದ ಅಭ್ಯರ್ಥಿ ಗಳು ಜರ್ಮನ್ ಭಾಷೆ ಕಲಿತಿರುವುದು ಕಡ್ಡಾಯವಾಗಿದೆ. 4 ಹಂತಗಳಲ್ಲಿ ಜರ್ಮನಿ ಭಾಷೆ ಕಲಿಯಲು ಅವಕಾಶವಿದೆ. A1, A2, B1 ಮತ್ತು B2 ಹಂತಗಳಲ್ಲಿ ಅಭ್ಯರ್ಥಿಗಳು B1 ಪಾಸ್ ಆಗಿರಬೇಕು

*ಎಲ್ಲೆಲ್ಲಿ ತರಬೇತಿ?

ಬೆಂಗಳೂರಿನ Goethe ಸಂಸ್ಥೆಯಲ್ಲಿ ಜರ್ಮನಿ ಭಾಷೆ ಕಲಿಸಲಾಗುತ್ತದೆ. ಕರಾವಳಿಯ ಮಂಗಳೂರಿನಲ್ಲಿಯೂ 5 ತಿಂಗಳ ಜರ್ಮನ್ ಭಾಷೆ ಕಲಿಕೆಯ ಕೋರ್ಸ್ ಆರಂಭಿಸಲಾಗಿದೆ. ಜರ್ಮನಿ ಭಾಷೆಯಲ್ಲಿ ಪಾಂಡಿತ್ಯ ಪಡೆದ ಮೂವರು ಶಿಕ್ಷಕರನ್ನು ನೇಮಿಸಲಾಗಿದೆ. ಆನ್ ಲೈನ್ ಮೂಲಕ ಜರ್ಮನ್ ಭಾಷೆ ಕಲಿಕೆಯ ತರಗತಿ ಆರಂಭಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಕಲಿತಾ ತರಗತಿ ನಡೆಸಲಾಗುತ್ತದೆ. 50 ಸಾವಿರ ರೂ ವೆಚ್ಚದಲ್ಲಿ B1 ಹಂತದ ಕಲಿಕೆ ಸಾಧ್ಯವಾಗಲಿದೆ. ಅಭ್ಯರ್ಥಿ ನೌಕರಿ ಪಡೆದ ಬಳಿಕ ಜರ್ಮನಿ ಭಾಷೆ ಕಲಿತಿರುವುದಕ್ಕಾಗಿ 500 ಯುರೋ(45 ಸಾವಿರ ರೂ.) ಪ್ರತಿಯೊಬ್ಬ ಅಭ್ಯರ್ಥಿಗೆ ದೊರೆಯಲಿದೆ.

ನೌಕರಿಗೊಸ್ಕರ ಅಭ್ಯರ್ಥಿಗಳು ಇತರ ಏಜೆನ್ಸಿಗಳಿಗೆ ನೀಡಿದಂತೆ 4- 5 ಲಕ್ಷ ನೀಡುವ ಅಗತ್ಯವಿಲ್ಲ. ಎಲ್ಲವೂ ಉಚಿತವಾಗಲಿದೆ. ಜರ್ಮನಿ ಮತ್ತು ಆಸ್ಟ್ರಿಯಾದ ಆಸ್ಪತ್ರೆಗಳಿಗೆ ಇಂಟರ್ ವ್ಯೂಗೆ ಹೋಗುವ ಮುನ್ನ ಬೆಂಗಳೂರಿನಲ್ಲಿರುವ ಜರ್ಮನ್ ರಾಯಭಾರಿ ಕಚೇರಿಯಲ್ಲಿ ಕೇವಲ 7 ಸಾವಿರ ರೂ. ಪಾವತಿಸಿದರಾಯಿತು ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿಕೊಡುತ್ತಾರೆ. ಜರ್ಮನಿಯಲ್ಲಿ 3 ತಿಂಗಳ ಕಾಲ ಉಚಿತ ವಾಸ್ತವ್ಯದ ವ್ಯವಸ್ಥೆ ಕೂಡ ಮಾಡಿ ಕೊಡುತ್ತಾರೆ.

*ಸಂಬಳ ಎಷ್ಟು? 

ಜರ್ಮನಿಯಲ್ಲಿ ನೌಕರಿ ಪಡೆದವರನ್ನು ಮೊದಲ 6 ತಿಂಗಳು ಟ್ರೈ ನಿಂಗ್ ನರ್ಸ್ ಆಗಿ ಪರಿಗಣಿಸಲಾಗುತ್ತದೆ. ನಂತರ B2 ಪರೀಕ್ಷೆಯನ್ನು ಜರ್ಮನಿಯಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ. ಹೆಡ್ ನರ್ಸ್ ಮಾರ್ಗದರ್ಶನದಲ್ಲಿ ಪರೀಕ್ಷೆ ನಡೆಯುತ್ತದೆ. ಅದು ಪಾಸ್ ಆಗಬೇಕು.  ವಾರ್ಷಿಕ ಸಂಬಳ 30ರಿಂದ 38 ಲಕ್ಷ ರೂ. ಇರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಸಂಸ್ಥೆಯ ರಾಹುಲ್ ಜಯಪ್ರಕಾಶ್ ಅವರನ್ನು ಮೊಬೈಲ್ ನಂಬರ್ 6364323932 ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು