11:22 AM Friday26 - April 2024
ಬ್ರೇಕಿಂಗ್ ನ್ಯೂಸ್
ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ

ಇತ್ತೀಚಿನ ಸುದ್ದಿ

ವೈಜ್ಞಾನಿಕ ಅಧ್ಯಯನ ಪ್ರವಾಸ: ವಿಜ್ಞಾನ ಕಲಿಕೆಗೆ ಪೂರಕ

06/12/2021, 15:15

ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಅಂತರ್ ಶಿಸ್ತು, ಬೌದ್ಧಿಕ ಮತ್ತು ಮಾನಸಿಕ ವಿಕಾಸ ಹೊಂದಲು ಶಾಲಾ ಶಿಕ್ಷಣ ಅತಿ ಅವಶ್ಯಕವಾಗಿದೆ. ನಾಲ್ಕು ಗೋಡೆಗಳ ಶಾಲಾ ಪರಿಸರದಲ್ಲಿ ಶಿಕ್ಷಕರು ,ಪಠ್ಯಪುಸ್ತಕ ಗಳ ಬೋಧನೆಯ ನಡುವೆ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿದಾಯಕವಾಗಿ ಕಲಿಯುವ ವಿಷಯ ವಿಜ್ಞಾನ.

ವಿಜ್ಞಾನವು ಸತ್ಯಾಂಶಗಳ ಬಗೆಗಿನ ಕ್ರಮಬದ್ಧವಾದ ಅಧ್ಯಯನವಾಗಿದೆ. ವಿಶ್ವದ ಬಗೆಗಿನ ಜ್ಞಾನವನ್ನು ನೀಡುವ ಮೂಲಕ ವಿಶ್ವಾಸಾರ್ಹತೆ ,ತಾರ್ಕಿಕತೆ, ಸಂಶೋಧನೆ, ಸತ್ಯ, ನಿಖರತೆ, ವೈಜ್ಞಾನಿಕ ಮನೋಭಾವನೆ ,ಬೌದ್ಧಿಕ ವಿಕಾಸ ,ಅನ್ವೇಷಣಾ ಭಾವನೆ, ಹೊಂದಾಣಿಕೆ ,ಸಹಕಾರ ಮೊದಲಾದವುಗಳನ್ನು ವಿಜ್ಞಾನ ಅಧ್ಯಯನದಿಂದ ವಿಧ್ಯಾರ್ಥಿಗಳು ಗಳಿಸಿಕೊಳ್ಳಬಹುದು. 

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿನಂತೆ ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿ ಕಲಿತಿರುವ ವಿಷಯವನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದಾಗ ಸಿಗುವ ಜ್ಞಾನಕ್ಕೆ ಸಮಾನವಾದುದು ಬೇರೊಂದು ಇಲ್ಲ.

ವಿಜ್ಞಾನದ ಕೆಲವೊಂದು ವಿಷಯಗಳನ್ನು ತರಗತಿಗಳಲ್ಲಿ ವಿವರಿಸಲು ಹಾಗೂ ಕಲ್ಪನೆಯನ್ನು ಮೂಡಿಸಲು ಅಸಾಧ್ಯವಾಗಿರುವಂತಹ


ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಯನ್ನು ಮೂಡಿಸಲು ವೈಜ್ಞಾನಿಕ ಅಧ್ಯಯನ ಪ್ರವಾಸ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ತರಗತಿ ಕಲಿಕೆಗೆ ಪೂರಕವಾಗುವಂತೆ ಜೊತೆಗೆ  ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಗೂ ನೈಜ ಜೀವನದಲ್ಲಿ ಸ್ವಾವಲಂಬಿಯಾಗುವ ಅಂತಹ ವಾತಾವರಣವನ್ನು ನಿರ್ಮಿಸಲು ವೈಜ್ಞಾನಿಕ ಅಧ್ಯಯನ ಪ್ರವಾಸ ಉತ್ತಮ ಸಾಧನವಾಗಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಹಾಗೂ ವಿಜ್ಞಾನಕ್ಕೆ ಅನುಕೂಲಕರವಾದ ವಾತಾವರಣ ಕಡಿಮೆ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವುದು ಕೂಡಾ ಸವಾಲಿನ ಸಂಗತಿಯಾಗಿದೆ… ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ ಮಕ್ಕಳಲ್ಲಿ ಹೊಸ ಕನಸನ್ನು ಬಿತ್ತಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವೈಜ್ಞಾನಿಕ ಅಧ್ಯಯನ ಪ್ರವಾಸ ಸಹಕಾರಿಯಾಗಬೇಕೆಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು