11:13 AM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ

28/11/2021, 09:05

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಜಂಗಮ ಸೋವೇನಹಳ್ಳಿ,ಗ್ರಾಮ ಸೇರಿದಂತೆ ಹಗರಿಬೊಮ್ಮನಹಳ್ಳಿ ಮಾರ್ಗಕ್ಕೆ ಸಮಪರ್ಕವಾಗಿ ಬಸ್  ಸಂಚಾರ ವ್ಯವಸ್ಥೆ ಮಾಡಬೇಕೆಂದು ಜಂಗಮ ಸೋವೇನಹಳ್ಳಿ ಗ್ರಾಮಸ್ಥರು ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ವ್ಯವಸ್ಥಾಪರಿಗೆ ಹಕ್ಕೊತ್ತಾಯ ಮಾಡಿದ್ದಾರೆ.

ಈ ಮೂಲಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವಿವಿಧ ಗ್ರಾಮಗಳ ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ. ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ಮಾರ್ಗದ ಹೆಸರಿನ ಬಸ್, ನಾಣ್ಯಪುರ, ಶಿವಪುರ ಗ್ರಾಮದ ಮೂಲಕ ಬಸ್ ಸಂಚಾರ ಮಾಡುತ್ತಿತ್ತು. ಆ ಬಸ್ ಕೂಡ್ಲಿಗಿ ಯಿಂದ  ಜಂಗಮ ಸೋವೇನಹಳ್ಳಿ, ನಾಣ್ಯಾಪುರ,  ಶಿವಪುರ ಮಾರ್ಗದಲ್ಲಿ ಸಂಚರಿಸುತ್ತಿತ್ತು.

ಅದನ್ನು ಕೋವಿಡ್ ಲಾಕ್ ಡೋನ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು, ಲಾಕ್ ಡೋನ್ ಅವದಿ ಮುಗಿದು ಆರೇಳು ತಿಂಗಳಾದರೂ ಕೂಡ.ಈ ವರೆಗೂ ಹಗರಿಬೊಮ್ಮನಹಳ್ಳಿ- ಕೂಡ್ಲಿಗಿ ಮಾರ್ಗದ ರೂಟ್ ನಂಬರ್ 27ರ ಬಸ್ ಪುನಃ ಸಂಚಾರಕ್ಕೆ ಕ್ರಮ ಜರುಗಿಸಿಲ್ಲ, ಸಂಸ್ಥೆಗೆ ನಷ್ಟ ಆಗುತ್ತೆ ಅನ್ನುವಂತಹ ಕುಂಟು ನೆಪ ಮಾಡಿ ಬಸ್ ಸಂಚಾರವನ್ನು ಸ್ಥಗಿತ ಮಾಡಿದ್ದು,ಹತ್ತಾರು ಹಳ್ಳಿಗಳ ನೂರಾರು ಪ್ರಯಾಣಿಕರು ಹಾಗೂ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಬಸ್ ಅನುಕೂಲವಾಗಿತ್ತು.

ಎರಡೂ ತಾಲೂಕುಗಳ ಪ್ರಯಾಣಿಕರು ಇದೇ ಬಸ್ ನ್ನು ಅವಲಂಬಿಸಿದ್ದಾರೆ. ಆರ್ಥಿಕ ಹಾಗೂ ಶೈಕ್ಷಣಿಕ ಕೃಷಿ ಆರೋಗ್ಯ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಹೆಚ್ಚಾಗಿ ವ್ಯವಹಾರ ಮಾಡುವುದರಿಂದಾಗಿ. ಅತ್ಯಾವಶ್ಯಕವಾಗಿದೆ ಬಡ ಮದ್ಯಮ ವರ್ಗದವರು ಸಾರಿಗೆ ಬಸ್ಸುಗಳನ್ನೆ ಅನಿವಾರ್ಯವಾಗಿ ಅವಲಂಬಿತರಾಗಿದ್ದು, ಅಲ್ಲದೇ ಈ ಭಾಗದ ಜನರ ಜೀವನಾಡಿ ಯಾಗಿರುವ ಸಾರಿಗೆ ಬಸ್ ಸಂಚಾರ ಅನಿವಾರ್ಯವಾಗಿದ್ದು. ಆದ ಕಾರಣ ಲಾಭ-ನಷ್ಟದ ನೆಪ ಹೇಳದೆ ಸೇವಾ ಮನೋಭಾವ ದೊಂದಿಗೆ ಹಾಗೂ ಗ್ರಾಮಸ್ಥರ ಹಿತಕ್ಕಾಗಿ, ಲಾಕ್ಡನ್ ನ ಪೂರ್ವದಲ್ಲಿ ಕಾರ್ಯ ನಿರ್ವಹಿಸುವಂತೆ ಸಾರಿಗೆ ರೂಟ್ ನಂಬರ್ 27 ಮಾರ್ಗದ ಬಸ್ಸನ್ನು ಅದೇ ಮಾರ್ಗದಲ್ಲಿ ಪುನಃ ಸಂಚಾರಕ್ಕೆ ಕ್ರಮ ಜರುಗಿಸಬೇಕೆಂದು ವಿವಿದ ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿದ ಗ್ರಾಮಗಳ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಕೂಡ್ಲಿಗಿ ಸಾರಿಗೆ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪರವರಿಗೆ ತಮ್ಮ ಹಕ್ಕೋತ್ತಾಯ ಪತ್ರ ನೀಡಿದ್ದಾರೆ. ಜಂಗಮ ಸೋವೇನಹಳ್ಳಿ,ನಾಣ್ಯಪುರ, ಶಿವಪುರ ಗ್ರಾಮಗಳ ಮುಂಡರು ಹಾಗೂ ವಿದ್ಯಾರ್ಥಿಗಳು.ಜಂಗಮ ಸೋವೇನಹಳ್ಳಿ ಗ್ರಾಮದ ನಂದಿ ವಿರೂಪಾಕ್ಷಪ್ಪ, ಕಟ್ಟಡ ಕಾರ್ಮಿಕ ಮುಖಂಡ ಬಿ.ಹೂಲೆಪ್ಪ ನೇತೃತ್ವದಲ್ಲಿ ಹಕ್ಕೋತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು