10:48 AM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

ಕೋಲಾರ ಜಿಲ್ಲಾ ಕಾಂಗ್ರೆಸ್‌ನಿಂದ  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

31/10/2021, 18:45

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com 

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ , ತಮ್ಮ ನಟನೆ , ಸಜ್ಜನಿಕೆ , ಹೃದಯವಂತಿಕೆಯ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದಿದ್ದ ಪವರ್ ಸ್ಟಾರ್ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.

ಕನ್ನಡ ನಾಡು – ನುಡಿಗೆ ರಾಜ್‌ಕುಮಾರ್‌ ಅವರ ಕುಟುಂಬ ನೀಡಿರುವ ಕೊಡುಗೆ ಅಪಾರ. ಅದರಲ್ಲೂ ಪುನೀತ್ ರಾಜ್‌ಕುಮಾರ್‌ ಅವರ ಸಮಾಜಮುಖಿ ಕಾರ್ಯಗಳು ಅವರ ಹಿರಿಮೆಯನ್ನು ಮತ್ತಷ್ಟು  ಹೆಚ್ಚಿಸಿದೆ, ಕನ್ನಡ ನಾಡು ಇಂದು ಓರ್ವ ಧೀಮಂತ ನಟನನ್ನು ಕಳೆದುಕೊಂಡು ದುಃಖಿಸುತ್ತಿದೆ ಎಂದರು . ಈ ಸಂದರ್ಭದಲ್ಲಿ ಮುಖಂಡರಾದ ಇಟ್ಬಾಲ್ ಅಹಮದ್‌ , ಊರುಬಾಗಿಲು ಶ್ರೀನಿವಾಸ್ , ಕೆಪಿಸಿಸಿ ಸದಸ್ಯ ಕುಮಾರ್‌ , ಮುಖಂಡರಾದ ಪ್ರಸಾದ್‌ಬಾಬು , ಗಂಗಮ್ಮನಪಾಳ್ಯ ರಾಮಯ್ಯ ಲಾಲ್‌ಬಹುದ್ದೂರು ಶಾಸ್ತ್ರಿ , ವೆಂಕಟಪತಿ , ಬಾಬು ಸೇರಿದಂತೆ ಹಲವಾರು ಮಂದಿ ಹಾಜರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು