11:51 AM Tuesday30 - November 2021
ಬ್ರೇಕಿಂಗ್ ನ್ಯೂಸ್
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ… ದಂಪತಿ ಜತೆ ಸುರತ್ಕಲ್ ಟೋಲ್ ಸಿಬ್ಬಂದಿ ಅನುಚಿತ ದುರ್ವರ್ತನೆ: ಪೋಲೀಸ್ ಕಮಿಷನರ್ ಶಶಿಕುಮಾರ್… ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು!: 4 ಬಾರ್ ಗಳಿಗೆ ಹೊಕ್ಕ ಚೋರರು: ಹಣ ಸಿಕ್ಕಿಲ್ಲ, ಆದ್ರೆ… ಕಡೂರು: ನೀರಿನ ಟ್ಯಾಂಕ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು; ಒಬ್ಬ ಗಂಭೀರ ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ ಮೂಡಿಗೆರೆ: ಒಣ ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ ಕಲಬುರಗಿ ಪಾಲಿಕೆ ಕಮಿಷನರ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ: ಕಮಿಷನರ್ ಈ… ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಡಾ. ರತ್ನಾಕರ್ ಬಂಧನ; 2…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ   ತಡೆಗೋಡೆ ನಿರ್ಮಾಣ

24/10/2021, 09:12

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಕ್ಷೇತ್ರ ವ್ಯಾಪ್ತಿಯ ಬಳಗಾನೂರ ಸಮೀಪದ ಬೆಳಿಗ್ನೋರೂ ಗ್ರಾಮದಲ್ಲಿ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ ತಡೆಗೋಡೆ ನಿರ್ಮಿಸಲಾಗಿದೆ. ಇದು ರಿಪೋರ್ಟರ್ ಕರ್ನಾಟಕ ವರದಿಯ ಫಲಶ್ರುತಿ ಆಗಿದೆ.

ಅಧಿಕಾರಿಗಳಲ್ಲಿ ನಾಗರಿಕರು ಹಲವು ಬಾರಿ ವಿನಂತಿ ಮಾಡಿದರೂ ಕ್ಯಾರೇ ಮಾಡದಿರುವುದನ್ನು ಕಂಡು ನಾಗರಿಕರು ಮಾಧ್ಯಮಗಳ ಮೊರೆ ಹೋಗಿದ್ದರು. 

ತಡೆಗೋಡೆ ಇಲ್ಲದೆ ಸಂಭವಿಸಬಹುದಾದ ಅಪಾಯದ ಕುರಿತು ರಿಪೋರ್ಟರ್ ಕರ್ನಾಟಕ ಚಿತ್ರ ಸಹಿತ ಸಮಗ್ರ ವರದಿ ಪ್ರಕಟಿಸಿತ್ತು.

ತಡೆಗೋಡೆ ನಿರ್ಮಿಸದೇ ಗುತ್ತೇದಾರು ಹಾಗೆ ಕೆಲಸ ನಿಲ್ಲಿಸಿದ್ದರು. ಬಿಲ್ ಕೂಡ ಪಾವತಿ ಆಗಿತ್ತು.

ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ರಿಪೋರ್ಟರ್ ಕರ್ನಾಟಕ ಸೇರಿದಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸೇತುವೆಗೆ ತಡೆಗೋಡೆ ನಿರ್ಮಿಸಿದ್ದಾರೆ. 

ತಡೆಗೋಡೆ ಇಲ್ಲದ ಸೇತುವೆ ತುಂಬಾ ಅಪಾಯಕಾರಿಯಾಗಿತ್ತು. ವಾಹನ ಸವಾರರು ಸ್ವಲ್ಪ ಯಾಮಾರಿಸಿದರೂ ಗುಂಡಿಗೆ ಬೀಳುವುದು ಖಂಡಿತಾ. ಅದಲ್ಲದೆ ಸಮೀಪದಲ್ಲೇ ಶಾಲೆ ಇದೆ. ಇಲ್ಲಿನ ನೂರಾರು ಮಕ್ಕಳು ಇದೇ ದಾರಿಯಾಗಿ ತೆರಳುತ್ತಿದ್ದರು. ಕೆಲವು ಮಕ್ಕಳು ಕುತೂಹಲದಿಂದ ಕೆಳಗೆ ಇಣುಕುವ ಕೆಲಸ ಮಾಡುತ್ತಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು