10:00 PM Friday26 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಶರನ್ನವರಾತ್ರಿ; ನವರಾತ್ರಿ ದುರ್ಗಾದೇವಿಯ ಎಂಟನೇ ಸ್ವರೂಪವೇ ಮಹಾಗೌರೀ

14/10/2021, 09:06

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಹಾ ಗೌರಿ- ನೇರಳೆ ಗುಲಾಬಿ ಬಣ್ಣ ಶಿವನ ಒಲವಿಂದ ಕಾಂತಿಯುತವಾಗಿ ಕಂಗೊಳಿಸುವ ದೇವಿ…ದುರ್ಗಾ ದೇವಿಯ ಈ ಅವತಾರ ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಪುರಾಣ ಕಥೆಗಳ ಪ್ರಕಾರ ಅವಳು ಹಿಮಾಲಯದ ಕಾಡುಗಳಲ್ಲಿ ಇದ್ದುದರಿಂದ ಅವಳ ಬಣ್ಣ ಅತ್ಯಂತ ಕಪ್ಪು ಬಣ್ಣದಿಂದ ಕೂಡಿತ್ತು ಎನ್ನಲಾಗುತ್ತದೆ. ಶಿವನು ಗಂಗಾ ನೀರಿನಿಂದ ಅವಳ ದೇಹವನ್ನು ಶುದ್ಧೀಕರಿಸಿದನು. ನಂತರ ಅವಳ ಸೌಂದರ್ಯವು ಅತ್ಯಂತ ಸುಂದರ ಹಾಗೂ ಹೊಳಪಿನಿಂದ ಮಾರ್ಪಟ್ಟಿತು. ಆಶಾವಾದದ ಬಣ್ಣವಾದ ಗುಲಾಬಿ ಬಣ್ಣದ ಸೀರೆಯನ್ನು ತೊಟ್ಟಿದ್ದಳು. ಹಾಗಾಗಿ ಈ ದಿನ ದೇವಿಗೆ ಗುಲಾಬಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಸಲ್ಲಿಸಲಾಗುತ್ತದೆ.

ದುರ್ಗಾಷ್ಟಮಿ ಮಹತ್ವ: ದುರ್ಗೆಯು ಭಗವಂತನ ಪತ್ನಿಯೇ ಆಗಿದ್ದಾಳೆ. ಈ ದುರ್ಗೆಯ ಪೂಜೆಯನ್ನು ನವರಾತ್ರಿಯಲ್ಲಿ ದುರ್ಗಾಷ್ಟಮಿಯ ದಿನ ಮಾಡುವುದು ವಿಹಿತವಾಗಿದೆ. ಶ್ರೀವಾದಿರಾಜಪೂಜ್ಯ ಚರಣರು ದುರ್ಗಾದೇವಿಯನ್ನು ಹೀಗೆ ಸ್ತುತಿಸಿದ್ದಾರೆ .

ದುರ್ಜ್ಞೇಯತ್ವಾತ್ ದುಃಖದತ್ವಾತ್ ದುಷ್ಪ್ರಾಪ್ಯತ್ವಾಚ್ಚ ದುರ್ಜನೈಃ |

ಸತಾಮಭಯಭೂಮಿತ್ವಾತ್ ದುರ್ಗಾತ್ವಂ ಹೃದ್ಗುಹಾಶ್ರಯಾತ್ ||

– ಪಶ್ಚಿಮಪ್ರಬಂಧ

1) ಸಾಕಲ್ಯೇನ ಬ್ರಹ್ಮಾದಿಗಳಿಂದ ತಿಳಿಯಲಶಕ್ಯಳಾದ್ದರಿಂದ ಲಕ್ಷ್ಮೀದೇವಿಯರಿಗೆ ದುರ್ಗಾ ಎಂದು ಹೆಸರು.

2) ದುಷ್ಟಜನರಿಗೆ ದುಃಖವನ್ನು ಕೊಡುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.

3) ದುಷ್ಟ ಜನರಿಂದ ಹೊಂದಲು ಅಶಕ್ಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.

4) ಸಜ್ಜನರಿಗೆ ಶ್ವೇತದ್ವೀಪ, ಅನಂತಾಸನ, ವೈಕುಂಠಗಳೆಂಬ ತ್ರಿಧಾಮರೂಪಳಾಗಿ ಅಭಯಸ್ಥಾನೀಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.

5) ಸಕಲ ಜೀವರ ಹೃದಯಗಳಲ್ಲಿ ನಿಯಾಮಕತ್ವೇನ ನೆಲೆಸಿರುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.

ದುರ್ಗಾ ಮಂತ್ರವು ಹೀಗಿದೆ –

ಜಾತವೇದಸೇ..‌.ವೇದಃ

ಸರ್ವಜ್ಞನಾದ ಅಗ್ನ್ಯಂತರ್ಗತ ಪರಶುರಾಮನಿಗೆ, ದುರ್ಗೆಗೆ ಸೋಮರಸವನ್ನು ಹಿಂಡಿ ಕೊಡುತ್ತೇವೆ. ನಾವಿಕನು ಹಡಗಿನ ಮೂಲಕ ಸಮುದ್ರವನ್ನು ದಾಟಿಸುವಂತೆ ಅಗ್ನಿನಾಮಕ ಭಗವಂತನು ನಮ್ಮನ್ನು ಆಪತ್ತುಗಳೆಂಬ ಸಮುದ್ರದಿಂದ ದಾಟಿಸಲಿ. ಎಲ್ಲ ಪಾಪಗಳನ್ನು ಪರಿಹರಿಸಲಿ.

ಜಗನ್ಮಾತೆ ದುರ್ಗಾದೇವಿಯ ಎಂಟನೆಯ  ಶಕ್ತಿ ಸ್ವರೂಪವು ‘ಮಹಾಗೌರೀ’ ಎಂದಾಗಿದೆ. ಇವಳ ಬಣ್ಣವು ಪೂರ್ಣವಾಗಿ ಬೆಳ್ಳಗಿದೆ. ಈ ಬಿಳುಪಿಗೆ ಶಂಖ, ಚಂದ್ರ ಮತ್ತು ಕುಂದ ಪುಷ್ಪ ಇವುಗಳ ಉಪಮೆ ಕೊಡಲಾಗಿದೆ. ಇವಳ ವಯಸ್ಸು ಎಂಟು ವರ್ಷದವಳೆಂದು ತಿಳಿಯಲಾಗಿದೆ.

 ‘ಅಷ್ಟವರ್ಷಾ ಭವೇದ್ ಗೌರೀ’. ಇವಳ ಎಲ್ಲ ವಸ್ತ್ರ ಹಾಗೂ ಆಭೂಷಣಗಳೂ ಬಿಳಿಯದಾಗಿವೆ. ಇವಳಿಗೆ ನಾಲ್ಕು ಭುಜಗಳಿದ್ದು ವಾಹನ ವೃಷಭವಾಗಿದೆ. ಆ ವೃಷಭವೂ ಬೆಳ್ಳಗಿದೆ. ಇವಳ ಮೇಲಿನ ಬಲಗೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದಮುದ್ರೆ ಇದೆ. ಇವಳ ಮುದ್ರೆ ಅತ್ಯಂತ ಶಾಂತವಾಗಿದೆ.

ತನ್ನ ಪಾರ್ವತಿರೂಪದಲ್ಲಿ ಇವಳು ಭಗವಾನ್ ಶಿವನನ್ನು ಪತಿಯಾಗಿ ಪಡೆಯಲು ಭಾರೀ ಕಠೋರ ತಪಸ್ಸು ಮಾಡಿದ್ದಳು. ‘ವ್ರಿಯೇsಹಂ ವರದಂ ಶಂಭುಂ ನಾನ್ಯಂ ದೇವಂ ಮಹೇಶ್ವರಾತ್’’ (ನಾರದ ಪಾಂಚರಾತ್ರ) ‘ನಾನು ವರದನಾದ ಶಂಭುವಲ್ಲದೆ ಬೇರೆ ಯಾವುದೇ ದೇವತೆಯನ್ನು ವರಿಸುವುದಿಲ್ಲ’ ಎಂಬ ಪ್ರತಿಜ್ಞೆ ಮಾಡಿದ್ದಳು. ಗೋಸ್ವಾಮಿ ತುಳಸೀದಾಸರು ಹೇಳಿರುವರು – ಇವಳು ಭಗವಾನ್ ಶಿವನನ್ನು ವರಿಸುವುದಕ್ಕಾಗಿ ಕಠೋರ ಸಂಕಲ್ಪ ಮಾಡಿದ್ದಳು.

ಜನ್ಮ ಕೋಟಿ ಲಗಿ ರಗರ ಹಮಾರೀ| ಬರಉ ಸಂಭು ನ ತ ರಹಉ   ಕು ಆರೀ ||

ಈ ಕಠೋರ ತಪಸ್ಸಿನ ಕಾರಣ ಇವಳ ಶರೀರವು ಪೂರ್ಣವಾಗಿ ಕಪ್ಪಾಗಿತ್ತು. ಇವಳ ತಪಸ್ಸಿಗೆ ಸಂತುಷ್ಟನಾಗಿ ಭಗವಂತನಾದ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಚೆನ್ನಾಗಿ ತೊಳೆದಾಗ ಅದು ವಿದ್ಯುತ್ತಿನಂತೆ ಅತ್ಯಂತೆ ಪ್ರಕಾಶಮಾನವಾಗಿ ಬೆಳ್ಳಗಾಯಿತು. ಆಗಿನಿಂದ ಇವಳ ಹೆಸರು ‘ಗೌರಿ’ ಎಂದಾಯಿತು.‘ಮಹಾಗೌರಿ’.

ಮಹಾಗೌರಿ: ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ 

“ಮಹಾಗೌರಿ”

ನವರಾತ್ರೆಯ ಎಂಟನೇ ದಿನ ಮಹಾಗೌರಿಯ ಉಪಾಸನೆಯ ವಿಧಿ ಇದೆ. ಇವಳ ಶಕ್ತಿಯು ಅಮೋಘ ಹಾಗೂ ಸದ್ಯಃ ಫಲದಾಯಿನಿಯಾಗಿದೆ. ಇವಳ ಉಪಾಸನೆಯಿಂದ ಭಕ್ತರ ಎಲ್ಲ ಕಲ್ಮಷಗಳು ತೊಳೆದು ಹೋಗುತ್ತದೆ. ಅವರ ಪೂರ್ವಸಂಚಿತ ಪಾಪಗಳೂ ಕೂಡ ನಾಶವಾಗಿ ಹೋಗುತ್ತವೆ. ಭವಿಷ್ಯದಲ್ಲಿ ಪಾಪ-ಸಂತಾಪ, ದೈನ್ಯ-ದುಃಖ ಅವರ ಬಳಿಗೆ ಎಂದೂ ಬರುವುದಿಲ್ಲ. ಅವರು ಎಲ್ಲ ಪ್ರಕಾರದಿಂದ ಪವಿತ್ರ ಮತ್ತು ಅಕ್ಷಯ ಪುಣ್ಯಗಳ ಅಧಿಕಾರಿಯಾಗುತ್ತಾರೆ.

ಜಗಜ್ಜನನಿಯ ಧ್ಯಾನ-ಸ್ಮರಣೆ, ಪೂಜೆ-ಆರಾಧನೆಯು ಭಕ್ತಿರಿಗಾಗಿ ಎಲ್ಲಾ ವಿಧದಿಂದ ಶ್ರೇಯಸ್ಕರವಾಗಿದೆ. ನಾವು ಯಾವಾಗಲೂ ಇವಳ ಧ್ಯಾನ ಮಾಡಬೇಕು. ಇವಳ ಕೃಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಮನಸ್ಸನ್ನು ಅನನ್ಯಭಾವದಿಂದ ಏಕನಿಷ್ಠವಾಗಿಸಿ ಮನುಷ್ಯನು ಸದಾಕಾಲ ಇವಳ ಪಾದಾರವಿಂದಗಳ ಧ್ಯಾನ ಮಾಡಬೇಕು. ಇವಳು ಭಕ್ತರ ಕಷ್ಟಗಳನ್ನು ಖಂಡಿತವಾಗಿ ದೂರ ಮಾಡುತ್ತಾಲೆಳೆ. ಇವಳ ಉಪಾಸನೆಯಿಂದ ಆರ್ತಭಕ್ತರ ಅಸಂಭವ ಕಾರ್ಯಗಳೂ ಕೂಡ ನೆರವೇರುತ್ತವೆ. ಆದ್ದರಿಂದ ಇವಳ ಚರಣಗಳಲ್ಲಿ ಶರಣಾಗತನಾಗಲು ನಾವು ಎಲ್ಲ ವಿಧದಿಂದ ಪ್ರಯತ್ನಿಸಬೇಕು. ಪುರಾಣಗಳಲ್ಲಿ ಇವಳ ಮಹಿಮೆಯನ್ನು ಅನೇಕ ಆಖ್ಯಾನಗಳು ಹೊಗಳಿವೆ. ಇವಳು ಮನುಷ್ಯರ ವೃತ್ತಿಗಳನ್ನು ಸತ್ ಕಡೆಗೆ ಪ್ರೇರೇಪಿಸಿ ಅಸತ್ತಿನ ನಾಶಮಾಡುತ್ತಾಳೆ. ನಾವು ಪ್ರಪತ್ತಿಭಾವದಿಂದ ಎಲ್ಲ ಹೊತ್ತಿನಲ್ಲಿಯೂ ಇವಳಿಗೆ ಶರಣಾಗತರಾಗಬೇಕು.

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |

ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋSಸ್ತು ತೇ |

ಓಂ ಮಹಾಗೌರಿ ದೇವಿ ನಮಃ

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 

ಅಂತರಗಂಗೆ

ಇತ್ತೀಚಿನ ಸುದ್ದಿ

ಜಾಹೀರಾತು