3:30 PM Tuesday19 - March 2024
ಬ್ರೇಕಿಂಗ್ ನ್ಯೂಸ್
ಲೋಕಸಭಾ ಚುಣಾವಣೆ: ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಪೂರ್ವಾನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ ದೇವರಮನೆಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು ಮೂಡಿಗೆರೆ: ಇಬ್ಬರು ಬಿಜೆಪಿ ಮುಖಂಡರ ಅಮಾನತು ಆದೇಶ ವಾಪಸ್; ಭಿನ್ನಮತ ಉಪಶಮನಕ್ಕೆ ಹಿರಿಯ… ಭಾರತದ ಕಾರು ಮಾಲೀಕರ ನೆಚ್ಚಿನ ಸೂಪರ್ ಆ್ಯಪ್ ಪಾರ್ಕ್+: ಪ್ರಸ್ತುತ ದೇಶದಲ್ಲಿ 1.5… ಕರ್ನಾಟಕವನ್ನು ಲೂಟಿಕೋರರಿಂದ ರಕ್ಷಿಸುತ್ತೇನೆ: ಕಲಬುರಗಿ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ ಘೋಷಣೆ ದೇಶದ ಗದ್ದುಗೆಗೆ ಬಿಗ್ ಫೈಟ್: ಮತ್ತೊಮ್ಮೆ ಮೋದಿ- ರಾಹುಲ್ ಮುಖಾಮುಖಿ; ರಾಜ್ಯದಲ್ಲಿ ಏ.26… ಸಂಸತ್ ಚುನಾವಣೆಯ ದಿನಾಂಕ ನಾಳೆ ಪ್ರಕಟ: ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ ಚೀಫ್ ಎಲೆಕ್ಷನ್… ಕಡೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ: ಮೊಮ್ಮಗ ಪ್ರಜ್ವಲ್ ಪರ… ಹಿಂದುತ್ವ ಮತ್ತು ಅಭಿವೃದ್ಧಿಗೆ ನನ್ನ ಆದ್ಯತೆ: ದ.ಕ. ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ… ಮಂಗಳೂರು: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಮಾನತಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಇತ್ತೀಚಿನ ಸುದ್ದಿ

ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?  

16/09/2021, 08:21

ಬೆಂಗಳೂರು(reporterkarnataka.com) : ರಾಜ್ಯಾದ್ಯಂತ ಗ್ರಾಮಕ್ಕೊಂದರಂತೆ ಸ್ಮಶಾನ ಇರಬೇಕು. ಎಲ್ಲೆಲ್ಲಿ ಸ್ಮಶಾನ ಇಲ್ಲವೋ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಗ್ರಾಮಕ್ಕೊಂದು ಸ್ಮಶಾನ ಇರಬೇಕು.ಇದಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ 26 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದ 372 ತಾಲ್ಲೂಕುಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಸರ್ಕಾರ ಹಣ ನೀಡುತ್ತದೆ. ಆದರೆ ಕೃಷಿ ಭೂಮಿಯ ಬೆಲೆ ಹೆಚ್ಚಿರುವುದರಿಂದ, ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಜಾಗ ಖರೀದಿ ಮಾಡಲಾಗುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ರಸ್ತಾವನೆ ಪಡೆದು ಹೆಚ್ಚುವರಿ ಹಣ ನೀಡಿ, ಸ್ಮಶಾನಕ್ಕಾಗಿ ಭೂಮಿ ಖರೀದಿ ಮಾಡಲಾಗುವುದು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು