1:39 AM Thursday2 - May 2024
ಬ್ರೇಕಿಂಗ್ ನ್ಯೂಸ್
ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ

ಇತ್ತೀಚಿನ ಸುದ್ದಿ

ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಸೆ. 20ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಮುತ್ತಿಗೆ: ರಾಜ್ಯ ರೈತ ಸಂಘ ಎಚ್ಚರಿಕೆ

14/09/2021, 11:51

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರೈತರ ಬಾಕಿ ಬಿಲ್ ಪಾವತಿಗೆ ಗಡವು ನೀಡಿ ಬಾಕಿ ಬಿಲ್ಲನ್ನು ಪಾವತಿಸಿ ಎಂದು ನಮ್ಮ ಸಂಘದ ವತಿಯಿಂದ ಹಲವು ಬಾರಿ ಮನವಿ ಮಾಡಿದ್ದರೂ ಸಹ ಇಲ್ಲಿಯವರೆಗೆ ಕಾರ್ಖಾನೆಯವರಿಂದ ಯಾವುದೇ ರೀತಿಯ ಸ್ಪಂದನೆ ಬಂದಿಲ್ಲ. ಅದಕ್ಕಾಗಿ ರೈತರ ಹಿತಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಥಣಿ ಘಟಕದ ವತಿಯಿಂದ ಸೆ. 20 ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಹೇಳಿದರು.

ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನಮ್ಮದೇ ಸಹಕಾರಿ ರೈತರ ಪ್ಯಾಕ್ಟರಿಯಾದ ಕೃಷ್ಣಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ರೈತರು ಪೂರೈಸಿದ ಕಬ್ಬಿಗೆ 2018-19 ನೇ ಸಾಲಿನಲ್ಲಿ 300 ರೂ, 2020-21 ನೇ ಸಾಲಿನಲ್ಲಿ 200 ಬಾಕಿ ಹಣ ಪಾವತಿಸಿಲ್ಲ ಹಾಗೂ 2021-22ನೇ ಸಾಲಿನಲ್ಲಿ ಪ್ರಾರಂಭದ ಮುಂಚಿತವಾಗಿ ದರ ನಿಗದಿ, ಸಕ್ಕರೆ ಪ್ರಮಾಣ ಹೆಚ್ಚಳ, ಶೇರುಗಳ ಹೆಚ್ಚಳ ಮಾಡಲು ಆಗ್ರಹಿಸಿ ಬ್ರಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. 

ಜಿಲ್ಲೆಯ ಸಾವಿರಾರು  ರೈತರು ಸೇರಿಕೊಂಡು ಸೆ. 20 ರಂದು ದರೂರದ ಜೋಗಪ್ಪನ ಗುಡಿ ವ್ರತ್ತ ದಿಂದ ಕಾರ್ಖಾನೆ ಗೇಟಿನ ವರೆಗೆ ಬೃಹತ್ ಪ್ರತಿಭಟನೆ ಮಾಡಿ ಕಾರ್ಖಾನೆ ಮುತ್ತಿಗೆ ಹಾಕುವುದಾಗಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ನಂತರದಲ್ಲಿ ಎಂ. ಸಿ. ತಾಂಬೋಳಿ ಹಾಗೂ ಎ ಬಿ ಹಳ್ಳೂರ ಅವರು ಪ್ರತಿಭಟನೆ ಕುರಿತು ಮಾಹಿತಿ ನೀಡಿ ಎಲ್ಲ ರೈತರು ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಈ ವೇಳೆ ಪ್ರಕಾಶ ಪೂಜಾರಿ, ರಾವಸಾಬ ಜಗರತಾಪ,ಪ್ರಕಾಶ ಪೂಜಾರಿ, ಡಿ. ಎಂ. ನಾಯಿಕ, ಗೋಪಾಲ ಮಿಸಾಳ, ರಾವಸಾಬ ಕೋಳಿ, ದಶರಥ ನಾಯಿಕ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು