4:14 PM Friday17 - September 2021
ಬ್ರೇಕಿಂಗ್ ನ್ಯೂಸ್
ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:… ದಾವೂದ್ ಗ್ಯಾಂಗ್ ನಿಂದ ಹಲವು ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು: 6 ಮಂದಿ… ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ: ಕಂದಾಯ ಸಚಿವ ಆರ್. ಅಶೋಕ್… ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧ: ತೆರವು ಲಿಸ್ಟ್… ಮಾಜಿ ಸಚಿವ ಆಸ್ಕರ್ ಪಾರ್ಥಿವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುಷ್ಪನಮನ:… ಸಿನಿಮಾ ಸಂಭಾಷಣೆಕಾರ ಗುರು ಕಶ್ಯಪ್ ವಿಧಿವಶ: ಹೃದಯಾಘಾತದಿಂದ ಸಾವು

ಇತ್ತೀಚಿನ ಸುದ್ದಿ

ಶಾಕಿಂಗ್ ನ್ಯೂಸ್ : ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಬಾಲಾಪರಾಧಿ; ಆರೋಪಿಗಳೆಲ್ಲರೂ ಕೂಲಿ ಕಾರ್ಮಿಕರು

28/08/2021, 16:47

ಮೈಸೂರು(reporterkarnataka.com): ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಮಂಗಳವಾರ ನಡೆದ ಎಂಬಿಎ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಬಾಲಾಪರಾಧಿ  ಕೂಡ ಸೇರಿದ್ದಾನೆ ಎಂಬ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ದೆಹಲಿಯಲ್ಲಿ ಬಸ್ ನಲ್ಲಿ ನಡೆದ ಅತ್ಯಾಚಾರವನ್ನು ಮತ್ತೆ ನೆನಪಿಸುವಂತಿದೆ.

ಡಿಜಿ ಐಜಿಪಿ ಪ್ರವೀಣ್ ಸೂದ್ ಈ ಕುರಿತು ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳ ಪತ್ತೆಗೆ ಪೊಲೀಸರ 7 ತಂಡ ರಚಿಸಲಾಗಿತ್ತು. ಆರೋಪಿಗಳು ಎಲ್ಲರೂ ತಮಿಳುನಾಡಿನ ತಿರುಪುರ್ ಗೆ ಸೇರಿದವರಾಗಿದ್ದಾರೆ. ಅವರೆಲ್ಲಾ ಕೂಲಿ ಕಾರ್ಮಿಕರರು. ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳಿದ್ದಾರೆ. ಐವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬಾತ 17 ವರ್ಷದ ಬಾಲಾಪರಾಧಿಯಾಗಿದ್ದಾನೆ ಎಂದರು.

ಇವರು ಕೆಲವು ಬಾರಿ ಮೈಸೂರಿಗೆ ಬಂದು ಹೋಗುತ್ತಿದ್ದರು. ವಾಪಸ್ ಹೋಗುವಾಗ ಪಾರ್ಟಿ ಮಾಡಿ ಹೋಗುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಈ ಐವರು ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದರು. ಬಂಧಿತರಲ್ಲಿ ಕೆಲವರು ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು