1:04 PM Friday26 - April 2024
ಬ್ರೇಕಿಂಗ್ ನ್ಯೂಸ್
ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ…

ಇತ್ತೀಚಿನ ಸುದ್ದಿ

ಚಿತ್ರಾಪುರ : ಕೊರೊನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ದಂಪತಿಯ ಕೊರೊನಾ ವರದಿ ನೆಗೆಟಿವ್.!?

17/08/2021, 16:00

ಮಂಗಳೂರು (Reporterkarnataka.com)

ಇಂದು ಬೆಳ್ಳಂಬೆಳಗ್ಗೆ ಸುರತ್ಕಲ್ ಚಿತ್ರಾಪುರದಲ್ಲಿ ಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ದಂಪತಿಗಳ ಸಾವಿನ ಬಳಿಕ ಕೋವಿಡ್ ಪರೀಕ್ಷೆ ಮಾಡಿದಾಗ ರಿಪೋರ್ಟ್ ನೆಗಟಿವ್ ಬಂದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಡಿಸಿಪಿ ಹರಿರಾಂ ಶಂಕರ್, ಡೆತ್ ನೋಟಲ್ಲಿ ನಮಗೆ ಕೊರೊನಾ ಇದೆ, ಬ್ಲ್ಯಾಕ್ ಫಂಗಸ್ ಬಂದರೆ ಸಮಸ್ಯೆ ಎಂದು ಬರೆದಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ಅವರಿಗೆ ಕೊರೊನಾ ಸೋಂಕು ಇರಲಿಲ್ಲ ಎಂದಿದ್ದಾರೆ.

ಆತ್ಮಹತ್ಯೆಗೆ ಶರಣಾಗಿದ್ದ ದಂಪತಿಯ ಮೃತದೇಹವನ್ನು ಟೆಸ್ಟ್ ಮಾಡಿದ ಬಳಿಕ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದೆ. ಪೋಸ್ಟ್ ಮಾರ್ಟಮ್‌ಗೂ ಮುನ್ನ ನಡೆಸಿದ ಕೊವಿಡ್ ಟೆಸ್ಟ್‌ನಲ್ಲಿ ರಿಪೋರ್ಟ್ ನೆಗೆಟಿವ್ ಎಂದು ತಿಳಿದು ಬಂದಿದೆ. ರಿಪೋರ್ಟ್ ನೆಗೆಟಿವ್ ಬೆನ್ನಲ್ಲೇ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಸಲ ಮಗು ಪಡೆಯಲು ಯತ್ನಿಸಿ ವಿಫಲರಾಗಿದ್ದು, ಇದರ ಖಿನ್ನತೆ ಇರಬಹುದು ಎನ್ನಲಾಗಿದೆ. ಅದೇ ರೀತಿ ಬೇರೆ ಯಾರೊಂದಿಗೂ ಇವರು ಅಷ್ಟೊಂದು ಬೆರೆಯುತ್ತಿರಲಿಲ್ಲ ಎಂದು ಹೇಳಲಾಗಿದೆ.

ಕೊರೊನಾ ಸೋಂಕಿನ ಭಯದಲ್ಲಿ ದಂಪತಿ ನೇಣಿಗೆ ಶರಣಾದ ದಾರುಣ ಘಟನೆ ನಗರದ ಬೈಕಂಪಾಡಿ ಸಮೀಪದ ಚಿತ್ರಾಪುರದ ಅಪಾರ್ಟ್ ಮೆಂಟ್‌ವೊಂದರಲ್ಲಿ ರಮೇಶ್(ಆರ್ಯ) ಸುವರ್ಣ (45) ಹಾಗೂ ಗುಣ ಸುವರ್ಣ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ಮುನ್ನ ರಮೇಶ್ ಸುವರ್ಣ ಅವರು ಪೊಲೀಸ್ ಕಮಿಷನರ್ ಅವರಿಗೆ ವಾಯ್ಸ್ ಮೆಸೇಜ್ ಮಾಡಿದ್ದರು.
ಗುಣ ಸುವರ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ. ಎರಡು ಬಾರಿ ಗರ್ಭಿಣಿಯಾದರೂ ಮಕ್ಕಳಾಗದ ಬಗ್ಗೆ ತನ್ನ ನೋವು ಹೇಳಿಕೊಂಡಿದ್ದಾರೆ. ಇದರ ಜತೆಗೆ ಕೊರೊನಾ ಸೋಂಕು ತಗಲಿರುವ ಬಗ್ಗೆ ಪತ್ರದಲ್ಲಿ ನಮೂದಿಸಿದ್ದಾರೆ. ಒಂದು ವಾರದಿಂದ ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದಿದೆ. ‌ಗಂಡನಿಗೂ ಅದೇ ರೀತಿಯ ಲಕ್ಷಣಗಳಿವೆ.‌ ಹಾಗಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇವೆ. ಹಿಂದೂ ಪದ್ಧತಿಯಂತೆ ತಮ್ಮ ಅಂತ್ಯಕ್ರಿಯೆ ನಡೆಸಲು 1 ಲಕ್ಷ ರೂ. ಹಣ ಇಟ್ಟಿರುವುದಾಗಿ ತಿಳಿಸಿದ್ದಾರೆ. ಜತೆಗೆ ಮನೆಯ ಸೊತ್ತುಗಳನ್ನು ಅಗತ್ಯವಿದ್ದವರಿಗೆ ನೀಡುವಂತೆ ಹೇಳಿದ್ದಾರೆ. ಮನೆಯ ಮಾಲೀಕರಲ್ಲಿ ತಮ್ಮ ಕೃತ್ಯದ ಬಗ್ಗೆ ಕ್ಷಮೆ ಕೂಡ ಕೇಳಿದ್ದಾರೆ.
ರಮೇಶ್  ಸುವರ್ಣ ಅವರು ಪೊಲೀಸ್ ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳಿಸಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಹೇಳಿಕೊಂಡಿದ್ದರು. ಕೂಡಲೇ ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿ, ದುಡುಕಿನ ನಿರ್ಧಾರ ಮಾಡದಂತೆ ಮನವಿ ಮಾಡಿದ್ದಾರೆ. ಮೀಡಿಯಾ ಗ್ರೂಪಿನಲ್ಲಿ ವಾಯ್ಸ್ ಕಳಿಸಿ, ಆವರ ಪತ್ತೆಗೆ ಮತ್ತು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ಬೈಕಂಪಾಡಿ ಪ್ರದೇಶದಲ್ಲಿ ಯಾರಾದರೂ ಇದ್ದರೆ ಈತನ ರಕ್ಷಣೆ ಮಾಡುವಂತೆ ಹೇಳಿದ್ದಾರೆ. ಅದಲ್ಲದೆ
20 ನಿಮಿಷದಲ್ಲಿ ಪೊಲೀಸರ ತಂಡ ಬೈಕಂಪಾಡಿಯ ಅಪಾರ್ಟ್ಮೆಂಟ್ ತಲುಪಿದೆ. ಆದರೆ ಅಷ್ಟೊತ್ತಿಗೆ ದಂಪತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು