1:36 AM Friday26 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಸುಖಃ – ದುಃಖದಲ್ಲಿ ಜತೆಯಾಗಿ ನಿಂತ ಸಂಗಾತಿ, ಪ್ರಿಯ ಸಖಿ: ಅದೇ… Kerchief !!

13/08/2021, 18:52

Kerchief ಇಲ್ಲದ ಒಂದು ದಿನ …….

ಸಮಯ ಸಂಜೆ ೪ ಗಂಟೆ . ಕಾಲೇಜು ಬಸ್ ಅಂಗಳದಲ್ಲಿ ಹಾರ್ನ್ ಹಾಕಿ ನಮ್ಮನ್ನು ಕಾಯುತಿತ್ತು. ಅವಸರದಲ್ಲಿ ಬ್ಯಾಗ್ ಹಾಕಿ ಮನೆಗೆ ಮರಳುವ ವೇಳೆ ನನ್ನ colleague ಹೇಳಿದ ಒಂದು ಮಾತು “kerchief ಇಲ್ಲದೆ ಈ ಒಂದು ದಿನವನ್ನು ನಾನು ದೂಡಿದೆ ” ನನ್ನನ್ನು ತುಂಬಾನೇ ಚಿಂತಿಸುವಂತೆ ಮಾಡಿತು. ಅವರು  ಹೇಳಿದ್ದು ಒಂದು ಸರಳ ವಾಕ್ಯವಾದರೂ ದಾರಿಯುದ್ದಕ್ಕೂ ಬಸ್ಸಲ್ಲಿ ನಾನು ಅದನ್ನೇ ನೆನೆಸುತಾ ಬಂದೆ.
Kerchief ತರಲು ಮರೆತು ಹೋದರೆ ನನ್ನ ಒಂದು ದಿನ ಹೇಗಿರಬಹುದು ?ಸೀನು ಬಂದರೆ ಏನು ಮಾಡುವುದು? ಕೆಮ್ಮು ಬಂದರೆ ನನ್ನ ಗತಿ ಏನು? ಕನ್ನಡಕದಲ್ಲಿ ಬಿದ್ದ ಮಳೆ ಹನಿ ಗಳನ್ನು ಒರಸುವುದಾದರೂ ಹೇಗೆ? ಅಷ್ಟಕ್ಕೂ ನನಗೂ ನನ್ನ kerchief ಗೂ ಇರುವ ಆತ್ಮ ಸಂಬಂಧವಾದರೂ ಏನು? ನನ್ನ ಅರಿವಿನಲ್ಲಿ kerchief ಮರೆತು ನಾನು ಮನೆಯಿಂದ ಆಚೆ ಹೋದ ಸಂಭವ ತುಂಬ ವಿರಳ . ನಾನು ನನ್ನ kerchief ನ್ನು ಇಷ್ಟು ಹಚ್ಚಿಕೊಳ್ಳಲು ಕಾರಣ ಏನಿರಬಹುದು? ಹಾಗೆ ಹಲವಾರು ಪ್ರಶ್ನೆಗಳು ನನ್ನ ಮನದಲ್ಲಿ ಕಾಡುತ್ತಿತ್ತು. ತುಂಬಾನೇ ಯೋಚಿಸಿದಾಗ ನನ್ನ ಸೋದರ ಮಾವ ಹೇಳಿದ ಘಟನೆಯೊಂದು ನೆನಪಿಗೆ ಬಂತು.

ನಾನು ಪುಟ್ಟ ಮಗುವಾಗಿರುವಾಗ ಅಂದರೆ ಒಂದು ವರ್ಷ ತುಂಬುವುದಕ್ಕೂ ಮುಂಚೆ ಉಸಿರಾಟದ ತೊಂದರೆಯಿಂದಾಗಿ ಸಾವಿನೊಂದಿಗೆ ಹೋರಾಡಿತ್ತಿದ್ದೆನಂತೆ. ಕೊನೆಗೆ ನನ್ನ ಕಥೆ ಮುಗಿದೇ ಹೋಯಿತೆಂದು ಎಲ್ಲರೂ ಕೂಗಾಡುತಿರುವಾಗ ನೆರೆಮನೆಯ ಅಜ್ಜಿಯೊಬ್ಬರು ಧೈರ್ಯ ತಂದು ಅವರ ಕರವಸ್ತ್ರವನ್ನು ದೀಪದ ಬತ್ತಿಯಂತೆ ಸುತ್ತಿ ನನ್ನ ಮೂಗಿಗೆ ತುರುಕಿಸಿದರಂತೆ. ಆಗ ಚಡಪಡಿಸಿ ನಾನು ಮರಳಿ ಬದುಕಿ ಬಂದೆನಂತೆ ….
ಆ ಅಜ್ಜಿ ನನ್ನ nasopharynx ನ್ನು damage ಮಾಡಿದ ಕಾರಣವೋ ಏನೋ ಅಂದಿನಿಂದ ಇಂದಿನ ವರೆಗೆ ನಾನೊಂದು allergic ವ್ಯಕ್ತಿ. ಧೂಳು ಹಾಗೂ ಹೊಗೆ ನನ್ನ ದೊಡ್ಡ ವೈರಿಗಳು . ಇವುಗಳ ಉಪಟಳದಿಂದ ಸೀನುವುದು (ಘರ್ಜಿಸುವುದು ) ನನ್ನ ಹವ್ಯಾಸವಾಗಿ ಬಿಟ್ಟಿದೆ. ಇದರಿಂದ ನನ್ನನ್ನು ರಕ್ಷಿಸಿದ /ರಕ್ಷಿಸುವ ಏಕೈಕ ವಸ್ತು ನನ್ನ ಈ ಕರವಸ್ತ್ರ .

ಅಲರ್ಜಿ ಶುರುವಾದಾಗ ಸೀನುವ ಶಬ್ದ ಎಷ್ಟು ಗಟ್ಟಿ ಎಂದರೆ ಹಿಮಾಲಯ ಪರ್ವತ ಕೂಡ ಕಂಪಿಸುವಂತಿರುತ್ತದೆ .ಹುಡುಗಿಯರು /ಹೆಂಗಸರು ಅಷ್ಟೊಂದು ಗಟ್ಟಿಯಾಗಿ ಸೀನುವುದು ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಬೇರೆ ದಾರಿಯಿಲ್ಲದೆ ಜೋರಾಗಿ ಸೀನುವ ನತದೃಷ್ಟೆ ನಾನು. ಆದುದರಿಂದಲೇ ಮನೆಯಲ್ಲಿ ಅಮ್ಮ ಮತ್ತು ನಾನು ಮಾತ್ರ ಇರುವಾಗ ನಾನೇನಾದರೂ nonstop sneezing ಶುರು ಮಾಡಿದರೆ ಅವರು immediately ಮನೆಯಿಂದ ಹೊರಗಡೆ ಹೋಗುತಿದ್ದರು. ಅದರ ಕಾರಣ ಕೂಡಾ ತುಂಬಾನೇ ಹಾಸ್ಯಮಯವಾಗಿತ್ತು .

” ನಾನು ಮನೆಯ ಒಳಗೆ ಇದ್ದರೆ ನೆರೆಹೊರೆಯವರು ಒಳಗೆ ಘರ್ಜಿಸಿದ ವ್ಯಕ್ತಿ ನಾನೆಂದು ತಪ್ಪು ತಿಳಿಯುವರು. ನನ್ನ ಮರ್ಯಾದೆ ಹೋಗ ಬಹುದು . ಹಾಗೇನಾದರೂ ಆದರೆ ನಾನು ಅವರ ಮುಖ ನೋಡುವುದಾದರೂ ಹೇಗೆ? ಮನೆಯಿಂದ ಹೊರಗಡೆ ಬಂದು ನಿಂತರೆ ಆ ಭೀಕರ ಸೀನು ನನ್ನದಲ್ಲ ಎಂದು ಎಲ್ಲರಿಗೂ ಸಾಬೀತಾಗುತ್ತದೆ ” ಎಂದರು. ಇದನ್ನು ಕೇಳಿದಾಗ ನನಗೆ ಬಂದ ಕೋಪ ಅಷ್ಟಿಷ್ಟಲ್ಲ .

ನನ್ನನ್ನು ನೋಡಿ ನನ್ನ ೮ ವಯಸ್ಸಿನ ಮಗಳು ಕೂಡಾ kerchief ಹಿಡಿಯುವುದನ್ನು ಒಂದು ಹವ್ಯಾಸವಾಗಿ ಬೆಳೆಸಿದ್ದಾಳೆ. ಆದರೆ ಹೊಸ kerchief ತಗೊಂಡು ಅವಳು school ಗೆ ಹೋದರೆ ಅವಳು ಮರಳಿ ಮನೆಗೆ ತಲುಪುವ ವರೆಗೆ ನನಗೆ ಮಗಳಿಗಿಂತ ಜಾಸ್ತಿ kerchief ನದ್ದೇ ಚಿಂತೆ. ಅವಳೇನಾದರೂ ಅದನ್ನು ಬಿಸಾಕಿ ಬಿಡುವಳೋ ಎಂಬ ಆತಂಕ.
ಕ್ಲಾಸ್ ತೆಗೆಯಲು ತರಗತಿಗೆ ತೆರಳುವಾಗ ನಾನು kerchief ನ್ನು ಮರೆಯುವಂತಿಲ್ಲ. ಹಾಗೇನಾದರೂ staff room ನಲ್ಲಿ ಬಾಕಿಯಾದರೆ ಏನಾದರೂ ಒಂದು ನೆಪ ಹೇಳಿ ಮರಳಿ ಮಹಡಿ ಇಳಿದು staff room ಗೆ ಬಂದು ಅದನ್ನು ಕೈಯಲ್ಲಿ ಎತ್ತಿ ಕೊಂಡರೇನೇ ನನಗೊಂದು ಸಮಾಧಾನ.
ಕಾಣಲು ಒಂದು ತುಂಡು ವಸ್ತ್ರವಾದರೂ kerchief ನನಗೆ ಕೊಡುವ ಆತ್ಮಸ್ಥೈರ್ಯ ಅಪಾರ. ಅದನ್ನೇನಾದರೂ ಮರೆತು ಹೋದಲ್ಲಿ ಅದನ್ನೇ ನೆನೆಸಿ ಒಂದು ಇಡೀ ದಿನದ mood ಹಾಳು ಮಾಡಿದ ಅನುಭವ ಕೂಡ ಇದೆ . ಕೊನೆಗೆ  ಈ ಸಮಸ್ಯೆಗೆ ಪರಿಹಾರವಾಗಿ ಬ್ಯಾಗ್ ನಲ್ಲಿ ಒಂದು extra kerchief ಇಡುವುದನ್ನು ರೂಡಿ ಮಾಡಿದೆ. 
ಈ ಹಿಂದೆ ನನ್ನ ಹಳೆ ವಿದ್ಯಾರ್ಥಿ ಸಿಕ್ಕಾಗ ಅವಳು ನನ್ನಲ್ಲಿ ಕೇಳಿದ ಒಂದು ಪ್ರಶ್ನೆ ” ma’am ನೀವು ಈಗಲೂ kerchief ಹಿಡಿದುಕೊಂಡೆ ಕ್ಲಾಸ್ ಮಾಡುವುದ? ನೀವು ಒಮ್ಮೆಯಾದರೂ ಅದನ್ನು ಬಿಟ್ಟು ಕ್ಲಾಸ್ ಗೆ ಬಂದದ್ದು ನಾವು ನೋಡಿಲ್ಲ ” . College ನಲ್ಲಿ ಅಷ್ಟೊಂದು ಫೇಮಸ್ ನನ್ನ kerchief ಎಂದು ನನಗೆ ಆವಾಗಲೇ ತಿಳಿದಿದ್ದು .

ಏನೇ ಆಗಲಿ ಈ kerchief ನನ್ನ ಆಪ್ತಮಿತ್ರ.ನನ್ನ ಸುಖ ಮತ್ತು ದುಃಖದಲ್ಲಿ ಜೊತೆಯಾಗಿ ನಿಂತ ಸಂಗಾತಿ , ಪ್ರಿಯ ಸಖಿ.”Stop ಬಂತು ,ಇಳಿಯುವುದಿಲ್ಲವೇ? ” ಎಂದು ನನ್ನ colleague ಕೇಳಿದಾಗ ಥಟ್ಟನೆ ಎದ್ದು ನಾನು ಬಸ್ ನಿಂದ ಇಳಿದು kerchief ನ್ನು ಸವರುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು