6:10 AM Monday24 - January 2022
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ: ನಕಲಿ ವೈದ್ಯರ ಹಾವಳಿ; ನಾಯಿಕೊಡೆ ತರಹ ತಲೆ ಎತ್ತುತ್ತಿರುವ ಖಾಸಗಿ ಕ್ಲಿನಿಕ್… ರಾಜ್ಯದಲ್ಲಿ ಇಂಧನ ಬೆಲೆ ಅತಿ ಅಲ್ಪ ಇಳಿಕೆ: ಪೆಟ್ರೋಲ್ ದರ ಲೀಟರಿಗೆ 6… ಶೃಂಗೇರಿ ಶಾರದಾಂಬೆ ದೇಗುಲದಲ್ಲಿ 10 ಅಡಿ ಉದ್ದದ ಕಾಳಿಂಗ ಪ್ರತ್ಯಕ್ಷ: ಕಂಗಾಲಾದ ಭಕ್ತ… ಚಿಕ್ಕಮಗಳೂರು: ರಸ್ತೆ ಇಲ್ಲದ ಹೊಳೆಕೂಡಿಗೆ ಗ್ರಾಮಕ್ಕೆ ತೆಪ್ಪದಲ್ಲೇ ಶವ ಸಾಗಾಟ!; ಸಿ.ಟಿ. ರವಿ, ಕರಂದ್ಲಾಜೆ ಎಲ್ಲಿದ್ದೀರಾ? ಕಾರ್ಕಳ: ಅರಣ್ಯ ಇಲಾಖೆ ಅರೆಕಾಲಿಕ ನೌಕರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ;… ಅಥಣಿಯ ಶೇಗುಣಿಸಿ ಗ್ರಾಮದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ: ಕೊಲೆ ಶಂಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ; ಕಳೆದ ವರ್ಷದಂತೆ ಈ ಬಾರಿ ‘ಕೊರೊನಾ ಪಾಸ್’ ಇಲ್ಲ: ಶಿಕ್ಷಣ… ರಾಜ್ಯದಲ್ಲಿ 6ರಿಂದ 8ನೇ ತರಗತಿ ಶಿಕ್ಷಕ ಹುದ್ದೆಗೆ ಪದವಿ ಕಡ್ಡಾಯ: ಸರಕಾರದ ಕರಡು… ಕೋವಿನ್ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಆರೋಗ್ಯ ಸಚಿವಾಲಯ ಸ್ಪಷ್ಟನೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಮತ್ತೊಂದು ಹಗರಣ ಬೆಳಕಿಗೆ: ಹಾಲಿಗೆ ನೀರಾಯ್ತು, ಈಗ ರಾಸಾಯನಿಕ…

ಇತ್ತೀಚಿನ ಸುದ್ದಿ

ಜಲಾವೃತಗೊಂಡ ಮನೆಯಿಂದ ಸಾಮಗ್ರಿ ಸ್ಥಳಾಂತರ ವೇಳೆ ದುರ್ಘಟನೆ: ಪ್ರವಾಹಕ್ಕೆ ಕೊಚ್ಚಿ ಹೋದ ರೈತ

27/07/2021, 13:19

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಸವದಿ ಗ್ರಾಮದ ವಾಡಾ ಬಸವೇಶ್ವರ ದೇವಸ್ಥಾನ ಸಮೀಪ ಮನೆಯ ಸಾಮಗ್ರಿ, ದನಕರು ಸ್ಥಳಾಂತರ ವೇಳೆ ನದಿಯ ನೀರಿನಲ್ಲಿ ಸವದಿ ಗ್ರಾಮದ ರಾಮಗೌಡ ಸಿದಗೌಡ ಪಾಟೀಲ(55) ಕೊಚ್ಚಿ ಹೋದ ದುರ್ಘಟನೆ ಭಾನುವಾರ ಸಂಜೆ ನಡೆದಿದೆ.

ಘಟನಾ ಸ್ಥಳಕ್ಕೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ಚಿಕ್ಕೋಡಿ ಸಹಾಯಕ ಕಮಿಷರ್ ಯುಕೇಶ ಕುಮಾರ ಬೇಟಿ ನೀಡಿ ಘಟನೆಯ ಮಾಹಿತಿ ಪಡೆದರು.ಕುಟುಂಬದ ಸದಸ್ಯರಿಗೆ ದೈರ್ಯ ತುಂಬಿದರು.


ಅನಂತರ ಮಾತನಾಡಿದ ಶಾಸಕ ಮಹೇಶ ಕುಮಟಳ್ಳಿ, ಹೆಚ್ಚಾದ ನೀರಿನ ಸೆಳೆತದಿಂದ ಎಲ್ಲೆಲ್ಲಿ ಕಬ್ಬು ಬೆಳೆಯಲಾಗಿದೆಯೋ ಅಲ್ಲೆಲ್ಲಾ ಕೆಸರು ಬಂದಿದ್ದು, ಸಾರ್ವಜನಿಕರು ವಿನಾಃ ಕಾರಣ ನೀರಿಗೆ ಇಳಿಯಬಾರದು. ಹಾಗೆ ಪ್ರವಾಹದ ಬಗ್ಗೆ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕಿನ ಅಧಿಕಾರಿಗಳಿಗೆ ತಿಳಿಸಿದರು.


ಈ ವೇಳೆ ಮಲಗೌಡ ಪಾಟೀಲ, ತಹಶೀಲ್ದಾರ ದುಂಡಪ್ಪಾ ಕೋಮಾರ, ತಾಪಂ ಅಧಿಕಾರಿ ಶೇಖರ ಕರಬಸಪ್ಪಗೋಳ, ಡಿವೈಎಸ್ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಉಪತಹಶಿಲ್ದಾರ ಮಹಾದೇವ ಬಿರಾದಾರಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು