4:09 PM Friday17 - September 2021
ಬ್ರೇಕಿಂಗ್ ನ್ಯೂಸ್
ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:… ದಾವೂದ್ ಗ್ಯಾಂಗ್ ನಿಂದ ಹಲವು ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು: 6 ಮಂದಿ… ಇನ್ನು ಕೇವಲ 24 ತಾಸಿನಲ್ಲಿ ಭೂ ಪರಿವರ್ತನೆ: ಕಂದಾಯ ಸಚಿವ ಆರ್. ಅಶೋಕ್… ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧ: ತೆರವು ಲಿಸ್ಟ್… ಮಾಜಿ ಸಚಿವ ಆಸ್ಕರ್ ಪಾರ್ಥಿವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುಷ್ಪನಮನ:… ಸಿನಿಮಾ ಸಂಭಾಷಣೆಕಾರ ಗುರು ಕಶ್ಯಪ್ ವಿಧಿವಶ: ಹೃದಯಾಘಾತದಿಂದ ಸಾವು

ಇತ್ತೀಚಿನ ಸುದ್ದಿ

Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್ ವಿರುದ್ಧ 3-2 ಅಂತರದ ಗೆಲುವು

24/07/2021, 11:23

ReporterKarnataka.com

ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲು ಹಾಗೂ ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ಮನೋಜ್ಞ ಪ್ರದರ್ಶನದ ನೆರವಿನಿಂದ ಭಾರತ ಹಾಕಿ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಒಲಿಂಪಿಕ್ ಪಯಣವನ್ನು ಗೆಲುವಿನೊಂದಿಗೆ ಆರಂಭಿಸಿದೆ.

ನಾಲ್ಕನೇ ಶ್ರೇಯಾಂಕಿತ ಮನ್‌ಪ್ರೀತ್‌ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ ಮೊದಲಿಗೆ ಹಿನ್ನೆಡೆಗೆ ಗುರಿಯಾದರು ಬಳಿಕ ದಿಟ್ಟ ಪ್ರದರ್ಶನದಿಂದ ಗೆಲುವಿನ ನಗೆ ಬೀರಿತು. ಪಂದ್ಯದ ಆರನೇ ನಿಮಿಷದಲ್ಲಿ ಕೀವಿಸ್‌ನ ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ನ್ಯೂಜಿಲೆಂಡ್ ಹಾಕಿ ತಂಡವು ಮೊದಲ ಕ್ವಾರ್ಟರ್‌ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. ಇದಾಗಿ ಕೆಲ ಹೊತ್ತಿನಲ್ಲೇ, ಅಂದರೆ ಪಂದ್ಯದ 10ನೇ ನಿಮಿಷದಲ್ಲಿ ರೂಪಿಂದರ್ ಪಾಲ್‌ ಗೋಲು ಬಾರಿಸುವ ಭಾರತದ ಗೋಲುಗಳ ಖಾತೆ ತೆರೆದರು. ಭಾನುವಾರ ಆಸ್ಟ್ರೇಲಿಯಾ ಜೊತೆ ಭಾರತ ತಂಡ ಪಂದ್ಯವಾಡುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು