5:08 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ: ತುಂಬಿ ಹರಿದ ನೇತ್ರಾವತಿ, ಕುಮಾರಧಾರಾ; ಚೇಳ್ಯಡ್ಕ ಸೇತುವೆ ಮುಳುಗಡೆ, ಕುಕ್ಕೆ ಸ್ನಾನಘಟ್ಟ 2ನೇ ದಿನವೂ ಜಲಾವೃತ

15/07/2021, 18:06

ಮಂಗಳೂರು(reporterkarnataka news); ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು, ಜಿಲ್ಲೆಯ ಪ್ರಮುಖ ನದಿಗಳು, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದೆ. ಪವಿತ್ರಾ ಯಾತ್ರಾ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಎರಡನೇ ದಿನವಾದ ಇಂದು ಕೂಡ ಮುಳುಗಿದೆ. ಪುತ್ತೂರು- ಪಾಣಾಜೆ ಸಂಪರ್ಕಿಸುವ ಚೇಳ್ಯಡ್ಕ ಸೇತುವೆ ಭಾರಿ ಮಳೆಗೆ ಮುಳುಗಡೆಯಾಗಿ ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ನಂದಿನಿ, ಶಾಂಭವಿ ಹಾಗೂ ಪಯಸ್ವಿನಿ ತುಂಬಿ ಹರಿಯುತ್ತದೆ. ಹಳ್ಳ-ಕೊಳ್ಳಗಳು ಕೂಡ ನೀರಿನಿಂದ ತುಂಬಿವೆ. ಧರ್ಮಸ್ಥಳದಲ್ಲಿ ನಿನ್ನೆ ನೇತ್ರಾವತಿ ರುದ್ರರೂಪ ತಾಳಿತ್ತು. ಆದರೆ ಯಾವುದೇ ಅನಾಹುತ ಉಂಟು ಮಾಡದೆ ನಂತರ ಶಾಂತವಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸ್ನಾನಘಟ್ಟ ಎರಡನೇ ದಿನವಾದ ಇಂದು ಕೂಡ ಮುಳುಗಿದೆ. ಜಿಲ್ಲೆಯ ಹಲವೆಡೆ ಗುಡ್ಡ ಕುಸಿದ ಬಗ್ಗೆ ವರದಿಯಾಗಿದೆ. ಪುತ್ತೂರು ನಗರದಲ್ಲಿ ಗುರುವಾರ ಧರೆ ಕುಸಿದು ಎರಡು ಮನೆಗಳಿಗೆ ಅಪಾಯ ಉಂಟಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ಸಂಗಮ ಸ್ಥಳವಾದ ಉಪ್ಪಿನಂಗಡಿಯಲ್ಲಿ ನದಿ ನೀರಿನ ಮಟ್ಟ ಅಪಾಯದ ಮಟ್ಟದತ್ತ ಸಾಗುತ್ತಿದೆ. ಈಗಾಗಲೇ ನದಿ ನೀರಿನ ಮಟ್ಟ 27.5. ಅಡಿಗೆ ತಲುಪಿದೆ. 30 ಅಡಿ ಅಪಾಯದ ಮಟ್ಟವಾಗಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗಳು ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎರಡು ಬೋಟು ಹಾಗೂ ಮೂವರು ನುರಿತ ಈಜುಗಾರರ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು