8:39 PM Sunday17 - October 2021
ಬ್ರೇಕಿಂಗ್ ನ್ಯೂಸ್
ಕೋವಿಡ್ ನಿಯಮ ಉಲ್ಲಂಘನೆ: ಉಡುಪಿ ಹಿಂದೂ ಜಾಗರಣ ವೇದಿಕೆ ಪ್ರಮುಖರ ವಿರುದ್ಧ ದೂರು… ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ… ಇನ್ನು ಮುಂದೆ ಭಾನುವಾರವೂ ಶಾಲೆ? : ಇದೆಲ್ಲ ಯಾಕೆ ಗೊತ್ತೇ?  ಶಿಕ್ಷಣ ಸಚಿವರು ಏನು… ಕೇರಳದಲ್ಲಿ ಭಾರಿ ಮಳೆಗೆ ಭೂಕುಸಿತ: 3 ಮಂದಿ ಸಾವು; 13ಕ್ಕೂ ಹೆಚ್ಚು ಜನರು… ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ ಆರೋಪ: ಪುತ್ತೂರು ನಗರ ಠಾಣೆ ಪೊಲೀಸರಿಂದ… ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಅಪಘಾತ: ಇಬ್ಬರ ದಾರುಣ ಸಾವು;… ಕಾರ್ಕಳ: ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ; ತಮ್ಮನಿಗೆ ಕರೆ ಮಾಡಿದ್ದ ಆಕೆ… ಅಥಣಿ: ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಈಗ ಮೊಸಳೆ, ವಿಷ ಜಂತುಗಳ ಕಾಟ: ಇನ್ನೂ… ವಸತಿ ಶಾಲೆಯ ಗಣಿತ ಶಿಕ್ಷಕನ ಕಾಮದಾಟ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ;… ಮಂಗಳೂರು ದಸರಾ ಮಹೋತ್ಸವ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ; ಶಾರದೆ,…

ಇತ್ತೀಚಿನ ಸುದ್ದಿ

ಜಕ್ಕಲದಿನ್ನಿ ಗ್ರಾಮದ ದಿಟ್ಟ ರೈತ ವಿದ್ಯಾರ್ಥಿನಿ ಹುಲಿಗೆಮ್ಮಗೆ ಸನ್ಮಾನ,  ಓದಿಗೆ ನೆರವು: ಶ್ರೀದೇವಿ ನಾಯಕ್ ಭರವಸೆ

09/07/2021, 08:01

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ದಿಟ್ಟ ರೈತ ವಿದ್ಯಾರ್ಥಿನಿ ಹುಲಿಗೆಮ್ಮ ಅವರನ್ನು ಭೇಟಿಯಾದ ಸಾಮಾಜಿಕ ಕಾರ್ಯಕರ್ತೆ ಶ್ರೀದೇವಿ ನಾಯಕ್ ಅವರು ಆಕೆಯನ್ನು ಸನ್ಮಾನಿಸಿ ಓದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಹುಲ್ಲಿಗೆಮ್ಮ ತನ್ನ ತಂದೆ ಭೀಮಣ್ಣ ನಿಧನದ ನಂತರ ಇಡಿ ಕುಟುಂಬವನ್ನು ನಿರ್ವಹಿಸುತ್ತಾಳೆ. ಈಕೆ ಕಾಲೇಜಿನಲ್ಲಿ ಓದಿಕೊಂಡು ಮತ್ತು ಹೊಲದಲ್ಲಿ
ಟ್ರಾಕ್ಟರು ಹೊಡಿಯುವದು, ಕುಂಟೆ ಹೊಡಿಯುವದು, ರಸಾಯನಿಕ ಎಣ್ಣೆ ಸಿಂಪರಣೆ ಮಾಡುವದು, ಇನ್ನೂ  ಆನೇಕ  ಕೆಲಸಗಳನ್ನು ನಿರ್ವಹಿಸುತ್ತಾಳೆ.  ಇಂತಹ  ದಿಟ್ಟ ರೈತ ವಿದ್ಯಾರ್ಥಿನಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾಳೆ. ಇಂತಹ ಸಾಧನೆ  ಮಾಡಿದ ರೈತ ವಿದ್ಯಾರ್ಥಿಯನ್ನು  ಮನೆಗೆ ಭೇಟಿ ನೀಡಿ ಮುಂದಿನ ಓದಿಗಾಗಿ ಏನೇ  ಸಹಾಯ ಬೇಕಾದರೂ ನಾನು ಮಾಡುತ್ತೇನೆ ಎಂದು ಶ್ರೀದೇವಿ ನಾಯಕ್ ನುಡಿದರು.

ಮುಂದೆ ಯಾವುದೇ ಕಷ್ಟ ಬಂದರೂ ನಿನ್ನ ಜೊತೆ ನಾನು ಯಾವಾಗಲೂ ಇರುತ್ತೇನೆ ಎಂದು ಶ್ರೀದೇವಿ ನಾಯಕ್ ಧೈರ್ಯ ತುಂಬಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು