7:32 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಖಾಸಗಿ ಬಸ್ ದರ ಏರಿಕೆ ವಾಪಸ್ : ಹಳೆಯ ದರ ವಸೂಲಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ

06/07/2021, 18:02

ಮಂಗಳೂರು(reporterkarnataka news):

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಪ್ರಯಾಣಿಕರ ಒಯ್ಯುವ ಹಾಗೂ ತೈಲ ಬೆಲೆಯೇರಿಕೆ ನೆಪವೊಡ್ಡಿ ಹೆಚ್ಚಿಸಲಾದ ಖಾಸಗಿ ಬಸ್ ದರವನ್ನು ಹಿಂಪಡೆಲಾಗಿದೆ.

ಆರ್ ಟಿಎ ಸಭೆ ನಡೆಯುವ ವರೆಗೆ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ ತಡೆಯಲಾಗಿದೆ ಎಂದು  ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಹೇಳಿದ್ದಾರೆ.

ಲಾಕ್ ಡೌನ್ ಮಾರ್ಗಸೂಚಿ ಸಡಿಲಿಕೆಗೊಂಡು ಶೇ. 100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ ದರ ಏರಿಕೆ ಪ್ರಸ್ತಾಪ ಹಿಂಪಡೆಯಲಾಗಿದೆ. ಶೇ. 50ರಷ್ಟು ಪ್ರಯಾಣಿಕರನ್ನು ಕರೆದೊಯ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಖಾಸಗಿ ಬಸ್ ಗಳ ಪ್ರಯಾಣ ದರವನ್ನು ಜು. 1ರಿಂದ ಅನ್ವಯವಾಗುವಂತೆ ಶೇ. 20ರಷ್ಟು ಹೆಚ್ಚಿಸಲಾಗಿತ್ತು. ಲಾಕ್ ಡೌನ್ ಅವಧಿ ವರೆಗೆ ಈ ದರ ಪಡೆಯುವಂತೆ ಬಸ್ ಮಾಲಕರಿಗೆ ಸೂಚಿಸಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಆಗಿರುವ ಕಾರಣ ಬಸ್ ಗಳಲ್ಲಿ ಹಳೆಯ ದರವನ್ನೇ ಪಡೆಯಬೇಕು ಎಂದು ಜಿಲ್ಲಾಧಿಕಾರ ತಿಳಿಸಿದ್ದಾರೆ.

ಮುಂದಿನ ಒಂದು ವಾರದೊಳಗೆ ಆರ್.ಟಿ.ಎ ಸಭೆ ನಡೆಸಲಾಗುವುದು. ಸಭೆಯಲ್ಲಿ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಖಾಸಗಿ ಬಸ್ ಮಾಲಕರೊಂದಿಗೆ ಈ ಕುರಿತು ಸಭೆ ನಡೆಸಲಾಗಿದ್ದು, ದರ ಏರಿಕೆ ಹಿಂಪಡೆಯಲು ಬಸ್ ಮಾಲಕರು ಒಪ್ಪಿಕೊಂಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆ ಮಾಡಬೇಕು ಎಂಬುದು ಬಸ್ ಮಾಲಕರ ಬೇಡಿಕೆಯಾಗಿದೆ ಎಂದು ತಿಳಿದು ಬಂದಿದೆ

ಇತ್ತೀಚಿನ ಸುದ್ದಿ

ಜಾಹೀರಾತು