2:28 AM Thursday20 - January 2022
ಬ್ರೇಕಿಂಗ್ ನ್ಯೂಸ್
ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಏಕೆ ನೀಡಬೇಕಿತ್ತು: ಸಂಸದ ಪ್ರತಾಪ್ ಸಿಂಹ… ಇಬ್ಬರು ಅಂತರ್ ಜಿಲ್ಲಾ ಚೋರರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ… ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಖರಾಯಪಟ್ಟಣ ರಥೋತ್ಸವ ಆಚರಣೆ: ಅರ್ಚಕರು ಸೇರಿ 9 ಮಂದಿ ವಿರುದ್ಧ ಕೇಸ್ ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ… ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ… ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿಗೆ ನಡೆಯಿತು… ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು!; ಆದರೆ ಹೆದ್ದಾರಿ ಪ್ರಾಧಿಕಾರ 10 ಹಳ್ಳಿಗಳನ್ನೇ ಕೆಮ್ಮು… ಕಾಫಿನಾಡಿನ ಖಾಕಿಗಳಿಗೆ ಕೊರೊನಾ ಕಾಟ: 27 ಮಂದಿ ಪೊಲೀಸರಿಗೆ ಹೋಂ ಐಸೋಲೇಶನ್! ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ತುಳು ಚಿತ್ರ  ‘ಸರ್ಕಸ್’ ನ ಚಿತ್ರೀಕರಣ…

ಇತ್ತೀಚಿನ ಸುದ್ದಿ

ನಿಷ್ಕಲ್ಮಶ ಪ್ರೀತಿ ತೋರಿಸುವ ಸಾಕು ಪ್ರಾಣಿಗಳು ನಮಗೊಳ್ಳೆಯ ಸ್ನೇಹಿತ ಕೂಡ ಹೌದು !

05/07/2021, 01:00

ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಅದೆಷ್ಟೋ ಜನರಿಗೆ ಸಾಕು ಪ್ರಾಣಿಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿರುತ್ತವೆ. ಅವರ ದಿನನಿತ್ಯದ ಜೀವನದಲ್ಲಿ ಸಾಕು ಪ್ರಾಣಿಗಳು ಒಬ್ಬ ಒಳ್ಳೆಯ ಸ್ನೇಹಿತನ ರೀತಿಯಲ್ಲಿ ಅವರ ಜೀವನದ ಗುಣಮಟ್ಟವನ್ನೇ ಬದಲಿಸಬಹುದು. ಮಕ್ಕಳಿಲ್ಲದ ಅದೆಷ್ಟೋ ಜನರು ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ ತಮಗೆ ಮಕ್ಕಳು ಇಲ್ಲವೆಂಬ ನೋವನ್ನು ಮರೆತು ಬಹಳ ಸಂತೋಷದಿಂದ ಜೀವನ ನಡೆಸುತ್ತಿರುವ ಉದಾಹರಣೆಗಳಿವೆ. ತಮ್ಮ ಮುದ್ದಿನ ನಾಯಿಯ ಕಣ್ಣುಗಳಲ್ಲಿನ ಹೊಳಪಿನೊಳಗಿನಿಂದ ಇಣುಕುವ ಭಾವನೆಗಳನ್ನು ಅರ್ಥ ಮಾಡಿಕೊಂಡಾಗ ಅಥವಾ ತಮ್ಮ ಮುದ್ದಿನ ಬೆಕ್ಕು ತನ್ನ ಮೃದುವಾದ ಮೈಯನ್ನು ನನ್ನ ಕೈ ಅಥವಾ ಕಾಲಿಗೆ ಒರಸುತ್ತಾ ನಮ್ಮ ಸುತ್ತ ಬರುವಾ ನಮ್ಮೊಳಗಿದ್ದ ಯಾವುದೇ ನೋವು ತಕ್ಷಣ ಮಾಯವಾಗುತ್ತದೆ. ಸಾಕು ಪ್ರಾಣಿಗಳು ತಮ್ಮ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆಯುವುದು ಮಾತ್ರವಲ್ಲದೆ ಜವಾಬ್ದಾರಿ, ನಿಷ್ಠೆ, ಅನುಭೂತಿ,ಇದ್ದುದರಲ್ಲಿ ಹಂಚಿ ತಿನ್ನುವ ಸ್ವಭಾವವನ್ನು ಅಳವಡಿಸಿಕೊಂಡು ಬದುಕುವ ರೀತಿಯನ್ನು ತಿಳಿಸಿಕೊಡುತ್ತದೆ. ಬದುಕಲು ಬೇಕಾದ ತಿಂಡಿ ಮತ್ತು ನಮ್ಮ ಒಡನಾಟವನ್ನು ಮಾತ್ರ ಅಪೇಕ್ಷಿಸುವ ಈ ಮೂಕ ಪ್ರಾಣಿಗಳು ನಾವು ಒದಗಿಸುವ ಅತ್ಯಲ್ಪ ತಿಂಡಿ ಮತ್ತು ಪ್ರೀತಿಗೆ ಪ್ರತಿಯಾಗಿ ನಮಗೆ ಬಹಳಷ್ಟು ನೀಡುತ್ತವೆ ಅದೇನು ಮತ್ತು ಹೇಗೆ ಎಂದು ಕೇಳುತ್ತಿರಾ? ಹೇಳುತ್ತೇನೆ ಕೇಳಿ, ನಾವು ತೋರಿಸುವ ಒಂದು ಚಿಟಿಕೆ ಪ್ರೀತಿಗೆ ಅವುಗಳ ಕೊನೆಯ ಉಸಿರು ಇರುವವರೆಗೆ ನಮಗೆ ಬೆಟ್ಟದಷ್ಟು ಪ್ರೀತಿ ವಾತ್ಸಲ್ಯವನ್ನು ಒದಗಿಸುತ್ತಾ ನಮ್ಮ ಅತ್ಯುತ್ತಮ ಸ್ನೇಹಿತನಾಗಿ ನಮ್ಮ ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯದ ವೃದ್ಧಿಗಾಗಿ ಶ್ರಮಿಸುತ್ತವೆ.

ಸಾಕು ಪ್ರಾಣಿಗಳನ್ನು ಹೊಂದಿದ ಜನರು ಹೃದಯ ಸಂಬಂಧಿ ಖಾಯಿಲೆಗಳಿಂದ ದೂರ ವಿರುತ್ತಾರೆ.ಅಲ್ಲದೆ ಸಾಕು ಪ್ರಾಣಿಗಳ ಜೊತೆಗೆ ಆಟವಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ವ್ಯಾಯಾಮ ಸಿಗುವುದರ ಮೂಲಕ ರೋಗದಿಂದ ಮತ್ತು ಒತ್ತಡಗಳಿಂದ ಮುಕ್ತರಾಗಿ , ವಾಕ್ ಚಿತ್ರ, ವೃತಿ ಚಿಕಿತ್ಸೆ, ದೈಹಿಕ ಸಾರನಾಗಿ ಹಾಗೂ ರೋಗಿಗಳ ಶೀಘ್ರ ಗುಣಮುಖಕ್ಕಾಗಿ ಸಾಕುಪ್ರಾಣಿಗಳ ಒಡನಾಟವನ್ನು ಒದಗಿಸಲಾಗುತ್ತದೆ ಎಂದು ಹಲವಾರು ಸಂಶೋಧನೆಗಳಿಂದ ತಿಳಿದು ಬಂದಿದೆ.

ರೋಗದಿಂದ ಮತ್ತು ಒತ್ತಡಗಳಿಂದಲೂ ಮುಕ್ತರಾಗುತ್ತಾರೆ. ವಾಕ್ ಚಿಕಿತ್ಸೆ, ವೃತ್ತಿ ಚಿಕಿತ್ಸೆ, ದೈಹಿಕ ಪುನಃಸ್ಥಾಪನೆಗಾಗಿ ಹಾಗೂ ರೋಗಿಗಳ ಶೀಘ್ರ ಗುಣಮುಖಕ್ಕಾಗಿ ಸಾಕುಪ್ರಾಣಿಗಳ ಒಡನಾಟವನ್ನು ಒದಗಿಸಲಾಗುತ್ತದೆ ಎಂದು ಹಲವಾರು ಸಂಶೋಧನೆಗಳೇ ತಿಳಿದು ಬಂದಿದೆ.

ನಾಯಿ, ಬೆಕ್ಕು, ಹಸು ಮುಂತಾದ ಸಾಕು ಪ್ರಾಣಿಗಳನ್ನು ಸಾಕುವುದರಿಂದ ನಾವು ನಮ್ಮ ಮನೆಯ ಮಕ್ಕಳಿಗೆ ತಮ್ಮ ಜೊತೆಯಲ್ಲಿರುವವರನ್ನು ಹೇಗೆ ರಕ್ಷಿಸಬೇಕೆಂಬುದನ್ನು ಕಲಿಸಿಕೊಟ್ಟಂತಾಗುತ್ತದೆ. ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವವರು ತಮ್ಮ ಜೊತೆಯಲ್ಲಿರುವವರನ್ನೂ ಚೆನ್ನಾಗಿ ನೋಡಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ ಎಂದು ತಿಳಿಯಬಹುದು. ಸಾಕು ಪ್ರಾಣಿಗಳು ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದೇ ತೆರನಾದ ಭಾವನೆಗಳ ಮೂಲಕ ತಮ್ಮೆಲ್ಲಾ ಪ್ರೀತಿಯನ್ನು ನಮಗೆ ನೀಡುತ್ತವೆ. ಅವುಗಳು ನಮ್ಮನ್ನು ನಗಿಸುತ್ತವೆ ಮತ್ತು ಕೆಲವೊಮ್ಮೆ ಭಾವುಕರನ್ನಾಗಿಸುತ್ತವೆ. ಆ ಮೂಲಕ ಅವುಗಳು ನಮ್ಮ ಯಾವುದೇ ತೆರನಾದ ಒತ್ತಡಗಳನ್ನು ಕಡಿಮೆಗೊಳಿಸುತ್ತವೆ. ಸಾಕು ಪ್ರಾಣಿಗಳು ಉತ್ಸಮ ಜೊತೆಗಾರರಾಗುವುದರ ಮೂಲಕ ನಮ್ಮ ಏಕಾಂಗಿತನವನ್ನು ಹೋಗಲಾಡಿಸಿ ಬಹಳಷ್ಟು ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ. ನಮ್ಮ ಗಮನವನ್ನು ಅದರತ್ತ ಸೆಳೆದುಕೊಳ್ಳುವುದರ ಮೂಲಕ ನಮ್ಮನ್ನು ಇಡೀ ದಿನ ಟಿ.ವಿ, ನೋಡಿಕೊಂಡು ಅಥವಾ ಸುಮ್ಮನೆ ಕುಳಿತುಕೊಳ್ಳಲು ಬಿಡದೆ ಆದರೊಂದಿಗೆ ಬೆರೆತು ಆಟವಾಡುವಂತೆ ಮಾಡುತ್ತವೆ. ನಮ್ಮ ಮನೆಯಲ್ಲಿ ನಾಯಿ, ಬೆಕ್ಕು ಅಥವಾ ಇನ್ನಾವುದೇ ಸಾಕು ಪ್ರಾಣಿಗಳಿದ್ದರೆ ಅವುಗಳ ತುಂಟತನದಿಂದ ನಮ್ಮನ್ನು ನಗಿಸುತ್ತವೆ. ನಗು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ ಎಂಬುವುದು ಸಶೋಧನೆಗಳಿಂದ ಸಾಬೀತಾಗಿದೆ. ನಗುವುದರಿಂದಾಗಿ ನಮ್ಮ ಚಿಂತೆ ಕಡಿಮೆಯಾಗುತ್ತದೆ. ರಕ್ತದೊತ್ತಡವನ್ನು ಸರಿತೂಗಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ನಾವು ಸದಾ ಆರೋಗ್ಯವಾಗಿರಲು ಬೇಕಾದಂತಹ ವ್ಯಾಯಾಮವನ್ನು ಮಾಡಲು ಸ್ಫೂರ್ತಿಯನ್ನು ನೀಡುತ್ತದೆ

ತರಬೇತಿ ಪಡೆದ ಸಾಕುನಾಯಿ ಅದರ ಯಜಮಾನನಿಗೆ ಸಹಾಯಕನಾಗಿ ಹಲವಾರು ಕೆಲಸಗಳನ್ನು ಮಾಡಿಕೊಡುತ್ತದೆ.ಕಣ್ಣು ಕಾಣದವರಿಗೆ ಕಣ್ಣಾಗಿ, ಕಿವಿಕೇಳದವರಿಗೆ ಕಿವಿಯಾಗಿ, ಕೈ-ಕಾಲು ಇಲ್ಲದವರಿಗೆ ಊರುಗೋಲಾಗಿ ಪಾತ್ರ ವಹಿಸಿ ಯಜಮಾನ ತನ್ನ ದಿನನಿತ್ಯದ ಚಟುವಟಿಕೆಗಳನ್ನು ಸ್ವತಃ ಮಾಡಿಕೊಳ್ಳಲು ಸಹಕರಿಸುತ್ತದೆ. ಏಕಾಂಗಿಯಾಗಿ ಬದುಕುತ್ತಿರುವವರಿಗಂತೂ ಸಾಕು ಪ್ರಾಣಿಗಳೇ ಒಳ್ಳೆಯ ಸ್ನೇಹಿತ, ಜೊತೆಗಾರ, ಸಂಬಂಧಿ ಎಲ್ಲವೂ.

ಒತ್ತಡ ಯಾವುದೇ ಕಾರಣಗಳಿಂದ ಆಗಿರಲಿ- ಕೆಲವರಿಗೆ ಉದ್ಯೋಗ ಇಲ್ಲದ ಕಾರಣ, ಇನ್ನು ಕೆಲವರು ಉದ್ಯೋಗದಲ್ಲಿದ್ದರೂ ಆ ಸಂಸ್ಥೆಯೊಳಗಿನ (ಅ)ವ್ಯವಸ್ಥೆಗಳಿಂದ ಉಂಟಾದ ಅಸಮಾಧಾನದ ಕಾರಣ, ಇನ್ನು ಕೆಲವರಿಗೆ ಕಳೆದ ವರ್ಷದಿಂದ ಬಂದ ಕೊರೋಣದ ಕಾರಣ, ಇನ್ನು ಕೆಲವರಿಗೆ ಲಾಕ್ ಡೌನ್ ನಿಂದಾದ ನಷ್ಟದ ಕಾರಣ, ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರಿಗೆ ಅರ್ಧ/ಪೂರ್ತಿ ಸಂಬಳ ಅಥವಾ ಕೆಲಸವೇ ಇಲ್ಲದಿರುವ ಕಾರಣ, ಬಸ್ ಮಾಲೀಕರಿಗೆ ಬಸ್ ಓಡದೇ ಇರುವುದರಿಂದಾದ ನಷ್ಟ ಮಾತ್ರವಲ್ಲದೆ ಸುಮಾರು ಸಮಯದಿಂದ ಬದಲಾವಣೆ ಮಾಡದೇ ಇರುವುದರಿಂದ ಬಸ್‌ನ ರಿಪೇರಿ ಖರ್ಚಿನ ಕಾರಣ, ಸಣ್ಣ ಅಂಗಡಿ/ಹೋಟೇಲ್ ಮಾಲೀಕರಿಗಂತೂ ತಮ್ಮ ಮನೆಯ ದಿನನಿತ್ಯದ ಖರ್ಚನ್ನೂ ನಿಭಾಯಿಸಲು ಪರದಾಡುವಂತ ಪರಿಸ್ಥಿತಿಯ ಕಾರಣ- ಹೀಗೆ ಹತ್ತು ಹಲವಾರು ಕಾರಣಗಳಿಂದ ಪ್ರತಿಯೊಬ್ಬರೂ ಒಂದಲ್ಲ ರೀತಿಯಲ್ಲಿ. ಒತ್ತಡದಲ್ಲಿದ್ದೇವೆ. ಹಾಗಾಗಿ ಈ ಒತ್ತಡದಿಂದ ಸ್ವಲ್ಪವಾದರೂ ಹೊರಬರಬೇಕಾದರೆ ಸಾಧ್ಯವಾದಷ್ಟು ನಮ್ಮನ್ನು ನಾವು ಕಾರ್ಯೋನ್ಮುಖರನ್ನಾಗಿಸಬೇಕಾಗಿದೆ. ಅದಕ್ಕಾಗಿ ಕೆಲವರು ದೇವರ ಮೊರೆ ಹೋದರೆ, ಇನ್ನು ಕೆಲವರು ಆಟ, ಸಂಗೀತದ ಮೊರೆ ಹೋಗಬಹುದು, ಮತ್ತೆ ಹಲವರು ತಮ್ಮ ಸಾಕುಪಾಣಿಗಳ ಒಡನಾಟದಿಂದ ತಮ್ಮ ಚಿಂತೆಯನ್ನು,ಒತ್ತಡವನ್ನೂ ಪರಿಹರಿಸಲು ಪ್ರಯತ್ನಿಸುತ್ತಾರೆ.


ನಾವು ನಮ್ಮ ಸಾಕು ಪ್ರಾಣಿಗಳೊಂದಿಗೆ ಮುದ್ದಾಡುತ್ತಾ ಬೆರೆಯುವುದರಿಂದ ಅದರ ಸ್ಪರ್ಷದಿಂದಾಗಿ ನಮ್ಮಲ್ಲಿ ನಂಬಿಕೆ, ಆತ್ಮವಿಶ್ವಾಸ ಹೆಚ್ಚಾಗುವುದರೊಂದಿಗೆ ನಮ್ಮೊಳಗಿನ ದೈಹಿಕ ಹಾಗೂ ಮಾನಸಿಕ ಶಕ್ತಿಯು ವೃದ್ಧಿಸುತ್ತದೆ.ಅವುಗಳ ಒಡನಾಟವು ಏಕಾಂಗಿತನವನ್ನು ಸವಾರಿಸಿ ನಮ್ಮನ್ನು ಸ್ವಾವಲಂಬಿಯನ್ನಾಗಿಸುತ್ತದೆ.ನಮ್ಮಲ್ಲಿರುವ ಋಣಾತ್ಮಕ ಚಿಂತನೆಯನ್ನು ಕಡಿಮೆ ಮಾಡಿ ಧನಾತ್ಮಕ ಚಿಂತಕರಾಗುವಂತೆ ನಮ್ಮ ವರ್ತನೆ. ಹಾ ವಾಭಾವ ಪರಿಮಳ ಇತ್ಯಾದಿಗಳಲ್ಲಿನ ಬದಲಾವಣೆಗಳನ್ನು ಗುರುತಿಸುವ ಸಾಮರ್ಥ್ಯ ಪ್ರಾಣಿಗಳಿಗಿರುವುದರಿಂದ ಏನಾದರೂ ಅಪಾಯವಾಗುವಂತಹ ಸಂದರ್ಭ ಬರುವುದನ್ನು ಮೊದಲೇ ಗ್ರಹಿಸಿ ನಮಗೆ ತಿಳಿಸುವ ಮೂಲಕ ತೊರೆಗಳಿಂದ ತಪ್ಪಿಸಲು ಸಹಕಾರಿಯಾಗಿವೆ. ಅವುಗಳ ಸಹವಾಸ ನಮ್ಮ ಜೀವನದಲ್ಲಿ ಸಾರ್ಥಕತೆಯನ್ನು ತುಂಬುತ್ತವೆ.ಹೀಗೆ ಸಾಕುಪ್ರಾಣಿಗಳು ನಾವು ನಮ್ಮ ಜೀವನದ ಪ್ರತಿ ಕ್ಷಣವನ್ನು ಆನಂದಿಸುವಂತೆ ಮಾಡಿ ನಮ್ಮನ್ನು ಆರೋಗ್ಯವಂತರನ್ನಾಗಿಸುತ್ತವೆ,

ಇತ್ತೀಚಿನ ಸುದ್ದಿ

ಜಾಹೀರಾತು