8:28 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ದುರಂತ ನಡೆದು 4 ದಿನಗಳ ಬಳಿಕ ಶಾಸಕರ ಭೇಟಿ !: ನಾಲ್ವರು ಸಹೋದರರ ಚಿತೆಯ ಬೆಂಕಿ ಆರಿದ ಬಳಿಕ ಆಗಮಿಸಿದ ಕುಮಟಳ್ಳಿ!!

01/07/2021, 15:24

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಒಂದೇ ಕುಟುಂಬದ ನಾಲ್ವರು ಸಹೋದರರ ಅಂತ್ಯಸಂಸ್ಕಾರ ನಡೆದು ಚಿತೆಯ ಬೆಂಕಿ ನಂದಿದ ಬಳಿಕ ಇಲ್ಲಿನ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ದುಃಖತಪ್ತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.


ದುರ್ಘಟನೆ ನಡೆದು ಸುಮಾರು 4 ದಿನಗಳ ಬಳಿಕ ಶಾಸಕರು ಭೇಟಿ ನೀಡಿರುವ ಕುರಿತು ಗ್ರಾಮಸ್ಥರು ‘ರಿಪೋರ್ಟರ್ ಕರ್ನಾಟಕ’ ಜತೆ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಟೈಮ್ ಮಾಡಿಕೊಂಡು ಬಂದು ಮತ ಕೇಳುವ ಶಾಸಕರಿಗೆ ಗೆದ್ದ ಬಳಿಕ ಅವರ ಕ್ಷೇತ್ರದಲ್ಲಿ ಬಲು ದೊಡ್ಡ ದುರ್ಘಟನೆಯೇ ನಡೆದರೂ ಇಲ್ಲಿಗೆ ಭೇಟಿ ನೀಡಲು  ಸಮಯಾವಕಾಶವಿಲ್ಲ. ಮೃತರ ಅಂತ್ಯಕ್ರಿಯೆ ನಡೆದು ಚಿತೆಯ ಬೆಂಕಿ ನಂದಿದ ಬಳಿಕ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂದು ಹಲ್ಯಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗುರುವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ್ ಕುಮಟಳ್ಳಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಶೀಘ್ರವೇ ಪರಿಹಾರ ಘೋಷಿಸುವ ಭರವಸೆ ನೀಡಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಕುಮಟಳ್ಳಿ, ಮುಖ್ಯಮಂತ್ರಿಗಳ ವಿಪತ್ತು ನಿಧಿ ಯಾವುದಾದರೂ ಯೋಜನೆಯಲ್ಲಿ ಮೃತರ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನು ಆದಷ್ಟು ಬೇಗ ಕೊಡಿಸಲಾಗುವುದು. 

ಪುತ್ರ ವಿಯೋಗ ಬಹಳ ಕೆಟ್ಟದ್ದು. ದೇವರು ಆ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ. ಈ ದುರಂತದಲ್ಲಿ ಶವ ಹೊರತೆಗೆಯಲು ಡಿಸಿ, ಎಸಿ, ಡಿವೈಎಸ್ ಪಿ, ಸಿಪಿಐ, ತಹಶಿಲ್ದಾರ, ಸಾರ್ವಜನಿಕರು, ಎನ್ ಡಿ ಆರ್ ಎಫ್ ಸೇರಿದಂತೆ ಹಲವರು ಸೇರಿ ಅವಿರತವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುದುಕನ ಸೇಗುಣಸಿ, ತಾಲೂಕು ದಂಡಾಧಿಕಾರಿ ದುಂಡಪ್ಪ ಕುಮಾರ್. ಡಿವೈಎಸ್ಪಿ  ಎಸ್ .ವಿ. ಗಿರೀಶ್.  ಸಿಪಿಐ ಶಂಕರಗೌಡ ಬಸನಗೌಡ, ಯಲ್ಲಾಲಿಂಗ ಪಾಟೀಲ್, ಸುರೇಶ ವಾಡೇದ, ಬಾಳಪ್ಪ ಬಾಗಿ, ಅಜಿತ್ ಸಿಂದೆ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಅಥಣಿ ತಾಲೂಕಿನ ಕೃಷ್ಣಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬದ ನಾಲ್ವರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು