5:03 PM Sunday1 - August 2021
ಬ್ರೇಕಿಂಗ್ ನ್ಯೂಸ್
ಜಿಲ್ಲಾಧಿಕಾರಿಯರೇ, ತೈಲ ಬೆಲೆ ಏರಿದ್ದು ಬಸ್ ಮಾಲಿಕರಿಗೆ ಮಾತ್ರವಲ್ಲ: ಪ್ರಯಾಣ ದರ ಹೆಚ್ಚಳ… ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ… ಕೊರೊನಾ: ಕಾಸರಗೋಡಿಗೆ ಸರಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳಿನ್ ಕುಮಾರ್ ಕಟೀಲ್ ಕೋಲಾರ: ಜನತಾ ನ್ಯಾಯಾಲಯದಲ್ಲಿ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ: ಆಗಸ್ಟ್ 14ರಂದು ಮೆಗಾ ಅದಾಲತ್ ಸಜ್ಜನ ರಾಜಕಾರಣಿ ದಿವಂಗತ ಅನಂತ ಕುಮಾರ್ ಪುತ್ರಿ ಏನು ಟ್ವೀಟ್ ಮಾಡಿದರು ಗೊತ್ತೇ?:… ಕರ್ನಾಟಕದಲ್ಲಿ ನಿರೀಕ್ಷೆ ಇರದ ರಾಜಕಾರಣಿ ಯಾರಾದರೂ ಇದ್ದಾರ ? : ನನಗೂ ಮತ್ತೆ… Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ… Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು:… “ಯಾನ್ ರೌಂಡ್ಸ್ ಪೋನಗ ನಿನ್ನ ಇಲ್ಲದಲ್ಪ ತಿಕ್ಕುವೆ ಓಕೆ ನಾ” ಎಂದ ಹೆಡ್‌ಕಾನ್ಸ್ಟೇಬಲ್… ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ…

ಇತ್ತೀಚಿನ ಸುದ್ದಿ

ಬುಟ್ಟಿ ಮೀನು ಬದುಕು ಕಟ್ಟಿಕೊಟ್ಟಿತು!: ಇಂದು ಇಬ್ಬರು ಆಳುಗಳೊಂದಿಗೆ ಭರ್ಜರಿ ವ್ಯಾಪಾರ!!

24/06/2021, 21:10

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಸುಮಾರು 200 ರೂಪಾಯಿ ಬಂಡವಾಳದಿಂದ ಆರಂಭಿಸಿದ ಆ ಮೀನಿನ ವ್ಯಾಪಾರ ಇಂದು ಸಣ್ಣ ಫಿಶ್ ಶಾಪ್ ಇಡುವವರೆಗೆ ಸಾಗಿದೆ. ಬುಟ್ಟಿಯನ್ನು ತಲೆಯಲ್ಲಿಟ್ಟು ಮೀನು ಮಾರಾಟ ಮಾಡುತ್ತಿದ್ದ. ಇಂದು ಟೆಂಪೋದಲ್ಲಿ ನಡೆಯುತ್ತಿದೆ. ಛಲವೊಂದಿದ್ದರೆ ಬದುಕುವ ಕಲೆ ತನ್ನಿಂದ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಮೀನಿನಂತಹ ತಾಜಾ ನಿದರ್ಶನ.

ಇದೇನು ಪರವೂರಿನ ಕತೆಯಲ್ಲ. ನಮ್ಮ ಕಡಲನಗರಿಯ ಮಡಿಲಿನಲ್ಲಿರುವ ಮೀನು ವ್ಯಾಪಾರಿಯ ರೋಚಕ ಕಥೆ. ಝಯಿನುದ್ದೀನ್ ಎಂ.ಬಿ. ಅವರ ಜೀವನ ಕಥೆ.

Click Here To Visit Our FB Page

ಝಯಿನುದ್ದೀನ್ ಅವರು ಕಲಿತದ್ದು ಬರೇ ನಾಲ್ಕನೆ ಕ್ಲಾಸ್. ನಂತರ ಜೀವನ ಪಯಣ ಕೆಲಸದತ್ತ ಸಾಗಿತು. ನಾಲ್ಕನೇ ತರಗತಿಯ ಹುಡ್ಗ ಏನು ಕೆಲಸ ಮಾಡಿಯಾನು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಎಲ್ಲ ಮಕ್ಕಳು ಆಟವಾಡುತ್ತಾ ಶಾಲೆಗೆ ಹೋಗುತ್ತಿದ್ದರೆ ಬಾಲಕ ಝಯಿನುದ್ದೀನ್ ಮನೆ ಮನೆಗೆ ಹಾಲು ವಿತರಿಸುತ್ತಿದ್ದರು. ಬಾಲ್ಯದ ದಿನಗಳಲ್ಲಿ ಅವರ ಮನೆಯಲ್ಲಿ 15 ದನಗಳಿದ್ದವು. ಹಾಲು ಮಾರಿ ಜೀವನ ನಡೆಸಬೇಕಿತ್ತು. ದಿನಕ್ಕೆ 40 ಲೀಟರ್ ಹಾಲು ಬರುತ್ತಿತ್ತು. ಹಾಗೆ ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಝಯಿನುದ್ದೀನ್ ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದ ಮೇಸ್ತ್ರಿಯಾಗಿ ಪರಿವರ್ತನೆಗೊಂಡರು. ಆದರೆ ಮೇಸ್ತ್ರಿ ಕೆಲಸ ಅವರ ಕೈಹಿಡಿಯಲಿಲ್ಲ. ಈ ನಡುವೆ ದುಬೈಯಿಂದ ಅವಕಾಶಗಳು ಬಂದವು. ಆದರೆ ಊರು ಬಿಟ್ಟು ಹೊರದೇಶಕ್ಕೆ ಹೋಗಲು ಇಚ್ಚಿಸದ ಅವರು ಊರಲ್ಲೇ ಇದ್ದುಕೊಂಡು ಸಾಧಿಸಬೇಕೆಂದು ತೀರ್ಮಾನಿಸಿದರು. ಇವೆಲ್ಲದರ ಫಲಶ್ರುತಿ ಎನ್ನುವಂತೆ ಮತ್ತೆ ವೃತ್ತಿ ಬದಲಾಯಿಸಿದ ಝಯಿನುದ್ದೀನ್ ಮೀನು ಮಾರುವ ವೃತ್ತಿಯನ್ನು ಆರಿಸಿಕೊಂಡರು.

ಆರಂಭದಲ್ಲಿ ದಿನಕ್ಕೆ 200 ರೂ. ಬಂಡವಾಳ ಹಾಕಿ ಬುಟ್ಟಿಯನ್ನು ತಲೆಯಲ್ಲಿಟ್ಟುಕೊಂಡು ಮನೆ ಮನೆ ಸುತ್ತಿ ಮೀನು ಮಾರುತ್ತಿದ್ದರು. ಇಡೀ ದಿನ ಮೀನು ಮಾರಿದರೆ ಬರೇ 30 ರೂ. ಲಾಭ ಬರುತ್ತಿತ್ತು.

ಮೊಯಿದಿನಬ್ಬ- ಖತೀಜಾ ದಂಪತಿಯ ಪುತ್ರನಾದ ಝಯಿನುದ್ದೀನ್ ಅವರಿಗೆ ಒಟ್ಟು 10 ಮಂದಿ ಸಹೋದರ ಹಾಗೂ ಸಹೋದರಿಯರಿದ್ದರು.


ಝಯಿನುದ್ದೀನ್ ಸುಮಾರು 10 ವರ್ಷಗಳ ಕಾಲ ಬುಟ್ಟಿಯನ್ನು ತಲೆಯಲ್ಲಿಟ್ಟು ಬೀದಿ ಬೀದಿ ಅಲೆದಾಡಿ ಮೀನು ಮಾರುತ್ತಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ವ್ಯಾಪಾರದಲ್ಲಿ ವೃದ್ಧಿ ಕಾಣಲಾರಂಭಿಸಿತು. ಸಣ್ಣ ಟೆಂಪೊ ತೆಗೆದುಕೊಂಡು ಅದರಲ್ಲಿ ವ್ಯಾಪಾರ ಮಾಡಲು ಶುರು ಮಾಡಿದರು. ಜತೆಗೆ ಸಣ್ಣ ಮೀನಿನ ಅಂಗಡಿಯನ್ನೂ ನಗರದ ಬಜಾಲ್ ಪಕಲಡ್ಕ ದಲ್ಲಿ ತೆರೆದರು. ಈಗ ಇಬ್ಬರನ್ನು ಕೆಲಸಕ್ಕಿಟ್ಟುಕೊಂಡು ಝಯಿನುದ್ದೀನ್ ಮೀನಿನ ವ್ಯಾಪಾರ ಮಾಡುತ್ತಾರೆ. ಹೆಂಡತಿ ಅತಿಕಾ ಮತ್ತು ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರೊಂದಿಗೆ ತುಂಬು ಸಂಸಾರದ ಜೀವನ ನಡೆಸುತ್ತಿದ್ದಾರೆ.

ನಾನು ಶಿಕ್ಷಣದಿಂದ ವಂಚಿತನಾಗಿದ್ದೇನೆ. ನನ್ನಂತೆ ನನ್ನ ಮಕ್ಕಳು ಕಷ್ಟಪಡಬಾರದು. ನನ್ನ ಮಕ್ಕಳು ಎಷ್ಟು ಕಲಿಯಬೇಕು ಅಂತ ಇಷ್ಟಪಡುತ್ತಾರೋ ಅಷ್ಟು ಕಲಿಸಬೇಕೆಂಬ ಆಸೆ. ಒಳ್ಳೆಯ ಶಿಕ್ಷಣ ಜೋಡಿಸಬೇಕು.

-ಝಯಿನುದ್ದೀನ್ ಎಂ.ಬಿ. ಮೀನಿನ ವ್ಯಾಪಾರಿ, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು