5:21 PM Thursday24 - June 2021
ಬ್ರೇಕಿಂಗ್ ನ್ಯೂಸ್
ಚಲನಚಿತ್ರ, ಕಿರುತೆರೆ ರಂಗದ ಕಲಾವಿದರಿಗೆ, ಕಾರ್ಮಿಕರಿಗೆ 3 ಸಾವಿರ ರೂ. ಆರ್ಥಿಕ ನೆರವು  ಪುಂಜಾಲಕಟ್ಟೆ; ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕತ್ತಿಯಿಂದ ಕಡಿದು ಕೊಂದ ತಂದೆ; ಕೊನೆಗೆ ತಾನೂ… ಅನ್ ಲಾಕ್: ಮಕ್ಕಳ ಜತೆ ಮಂಗಳೂರು ಸುತ್ತಿದ ಹೆತ್ತವರು: ಮಧ್ಯಾಹ್ನ 2.45 ಕಳೆದರೂ ತೆರವಾಗದ… ಮುಂಬರುವ ವಿಧಾನಸಭೆ ಚುನಾವಣೆ:ಕಾಂಗ್ರೆಸ್ ಗೆ ಕಾಯಕಲ್ಪ ನೀಡಲು ಡಿಕೆಶಿ ಚಿಂತನೆ; ಜಿಲ್ಲಾಧ್ಯಕ್ಷರುಗಳ ಬದಲಾವಣೆ? ಬಸವಣ್ಣನ ನಾಡು ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಅಪ್ರಾಪ್ತ ಪುತ್ರಿ ಮತ್ತು ಆಕೆಯ… ಸೆಮಿ ಲಾಕ್ ಡೌನ್: ಮಂಗಳೂರಿನಲ್ಲಿ ಹೆಚ್ಚಿದ ವಾಹನ ದಟ್ಟಣೆ; ಸ್ವತಃ ಫೀಲ್ಡಿಗಿಳಿದ ಪೊಲೀಸ್… ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ: ಖಾಸಗಿ ಶಾಲೆಗಳ ಫೀಸ್ ಮಾಫಿಯಾಕ್ಕೆ ಕುಮ್ಮಕ್ಕು? ಸುಕ್ಷೇತ್ರ ಮೈಲಾರ ಲಿಂಗೇಶ್ವರದಲ್ಲಿ ಭವಿಷ್ಯ ಹೇಳುವ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ ದ.ಕ.: ವಿದ್ಯುತ್ ದರ ಏರಿಕೆ ವಿರುದ್ಧ ಚಿಮಿನಿ, ದೊಂದಿ, ಲಾಟೀನು ಪ್ರದರ್ಶಿಸಿ ಪ್ರತಿಭಟನೆ. ಬ್ರಹ್ಮಾವರ ಸಮೀಪದ ಕ್ಯಾಶ್ಯು ಇಂಡಸ್ಟ್ರೀಸ್ ಗೆ ಗುಜರಾತ್ ವ್ಯಾಪಾರಿಯಿಂದ 40 ಲಕ್ಷ ರೂ.…

ಇತ್ತೀಚಿನ ಸುದ್ದಿ

‘ಯಾಸ್’ ಚಂಡಮಾರುತದ ಭೀತಿ :  ಮೇ 29 ರವರೆಗೆ 25 ರೈಲುಗಳ ಸಂಚಾರ ರದ್ದು

25/05/2021, 07:27

ನವದೆಹಲಿ(reporterkarnataka news) : 

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ‘ಯಾಸ್’ ಚಂಡಮಾರುತವಾಗಿ ಪರಿವರ್ತನೆಗೊಂಡು ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಮೇ 24 ರಿಂದ ಮೇ 29ರ ನಡುವೆ 25 ರೈಲುಗಳನ್ನು ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ  ತಿಳಿಸಿದೆ.

ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶವು

ವಾಯುಭಾರ ಕುಸಿತಕ್ಕೆ ತೀವ್ರಗೊಂಡಿದೆ.

ಸೋಮವಾರ ಅದು ಯಾಸ್  ಚಂಡಮಾರುತವಾಗಿ ರೂಪುಗೊಂಡಿದೆ.

ಚಂಡಮಾರುತ ಮೇ 26ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ

ಡಾ. ಮೊಹಾಪಾತ್ರ ಮಾಹಿತಿ ನೀಡಿದ್ದಾರೆ.

ಚಂಡಮಾರುತದ ಗಾಳಿಯ ವೇಗವು ಗಂಟೆಗೆ ಸುಮಾರು 155-165 ಕಿ.ಮೀ. ಎಂದು ಐಎಂಡಿ ಊಹಿಸಿತ್ತು, ಇದು ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು