8:02 PM Friday28 - February 2025
ಬ್ರೇಕಿಂಗ್ ನ್ಯೂಸ್
Agriculture | ರಾಜ್ಯದಲ್ಲಿ ಎಫ್ ಪಿಒಗಳಿಂದ 1073 ಕೋಟಿ ರೂ.ಗಳ ವಹಿವಾಟು: ಕೃಷಿ… ಕಪಿಲೆಯಲ್ಲಿ ಮುಳುಗಿದ ಇಬ್ಬರು ವ್ಯಕ್ತಿಗಳು: ಎಲ್ಲರಲ್ಲೂ ಭಯ, ಆತಂಕ; ದೌಡಾಯಿಸಿದ ಎನ್ ಡಿಆರ್… BSY B’day | ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರ: ಮಾಜಿ… PU Exams | ಸಿಸಿ ಟಿವಿ ಕಣ್ಗಾವಲಿನಲ್ಲಿ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ Travel Expo | ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಬೆಳೆಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಸಂಭ್ರಮ: ಕಪಿಲೆಯಲ್ಲಿ ಮಿಂದ ಭಕ್ತ… ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮೇಳ: ಸಿದ್ಧತಾ ಕಾರ್ಯ ಪರಿಶೀಲಿಸಿದ ಸ್ಪೀಕರ್ ಖಾದರ್ Forest Fire | ಚಿಕ್ಕಮಗಳೂರು: ದೇವರು ಮನೆಗುಡ್ಡದಲ್ಲಿ ಕಾಡ್ಗಿಚ್ಚು; ಅರಣ್ಯ ಇಲಾಖೆ ಪರಿಶ್ರಮದಿಂದ… Pocso | ಬೆಂಗಳೂರು: ನಿರಂತರ ಅತ್ಯಾಚಾರಕ್ಕೊಳಗಾದ ಬಾಲಕಿಯ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ನಿಂದ… Exams | ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉಚಿತ…

ಇತ್ತೀಚಿನ ಸುದ್ದಿ

ಎಂಸಿಸಿ ಬ್ಯಾಂಕಿನ 19ನೇ ಶಾಖೆ ಬೆಳ್ಮಣ್‌ನಲ್ಲಿ ಮಾ.2ರಂದು ಉದ್ಘಾಟನೆ: 1200 ಕೋಟಿ ರೂ. ವ್ಯವಹಾರ;113 ವರ್ಷಗಳ ಇತಿಹಾಸ

28/02/2025, 19:52

ಮಂಗಳೂರು(reporterkarnataka.com): ಸುಮಾರು 113 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿದ್ದು 2023-24ನೇ ವಿತ್ತೀಯ ವರ್ಷದಲ್ಲಿ ಶೇಕಡಾ 10% ಲಾಭಾಂಶ ಘೋಷಿಸಿರುತ್ತದೆ. ಬ್ಯಾಂಕ್ ಸತತವಾಗಿ ಲಾಭ ಗಳಿಸುತ್ತಿದ್ದು. 2023-24ನೇ ವಿತ್ತೀಯ ವರ್ಷದಲ್ಲಿ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು ರೂ.10.45 ಕೋಟಿಯಾಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭವಾಗಿರುತ್ತದೆ. ಕಳೆದ 6 ವರ್ಷಗಳಿಂದ ಪ್ರಸ್ತುತ ಆಡಳಿತ ಮಂಡಳಿಯು ಸಹಕಾರ ರತ್ನ ಅನಿಲ್ ಲೋಬೊ ಅವರ ಮುಂದಾಳತ್ವದಲ್ಲಿ ಬ್ಯಾಂಕ್ ಪ್ರಗತ್ತಿಯತ್ತ ದಾಪುಗಾಲು ಇಡುತ್ತಿದೆ.
ಬ್ಯಾಂಕಿನ ಕಾರ್ಯವ್ಯಾಪ್ತಿಯು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಂಕಿಂಗ್ ಮುಖಾಂತರ ಕಾರ್ಯ ನಡೆಸುತ್ತಿದ್ದು, ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ನಮ್ಮ ಬ್ಯಾಂಕಿನಲ್ಲಿ ದೊರೆಯುತ್ತವೆ. ಡಿಜಿಟಲ್ ಸೇವೆಯಂತಹ ಗೂಗಲ್ ಪೇ, ಫೊನ್ ಪೇ, ಯುಪಿಎ, ಇತರ ಸೌಲಭ್ಯಗಳನ್ನು ಸದ್ಯದಲ್ಲಿಯೇ ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ಕೈಗೊಂಡಿದ್ದು ಬ್ಯಾಂಕಿನ ಶಾಖೆಗಳನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ಕಡಿಮೆ ಬಾಡಿಗೆಯಲ್ಲಿ ಲಾಕರ್ ಸೌಲಭ್ಯ, ಕಡಿಮೆ ದರದಲ್ಲಿ ದೇಶ ವಿದೇಶ ವಿದ್ಯಾ ಭವಿಷ್ಯ ಶಿಕ್ಷಣ ಸಾಲ, ಎಮ್.ಎಸ್.ಎಮ್.ಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗ್ರಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಕರ್ನಾಟಕದಲ್ಲಿ ಎನ್‌ಆರ್‌ಐ ಸೌಲಭ್ಯವಿರುವ ಎಕೈಕ ಪಟ್ಟಣ ಸಹಕಾರ ಬ್ಯಾಂಕ್ ಆಗಿರುತ್ತದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ
ವಿಮಾ ಸೌಲಭ್ಯವಿದೆ.
ಎಂ.ಸಿ.ಸಿ.ಬ್ಯಾಂಕ್ ಒಟ್ಟು ಠೇವಣಿಯು ರೂ.676.00 ಕೋಟಿ, ಒಟ್ಟು ಸಾಲ ಮತ್ತು ಮುಂಗಡ ರೂ.532.00 ಕೋಟಿ ತಲುಪಿದ್ದು, ಒಟ್ಟು ವ್ಯವಹಾರವು ರೂ. 1208 ಕೋಟಿ ಆಗಿರುತ್ತದೆ. ಮಾರ್ಚ್ ಅಂತ್ಯಕ್ಕೆ ದುಡಿಯುವ ಬಂಡವಾಳ ರೂ.752.95 ಕೋಟಿ ಮತ್ತು ಶೇರು ಬಂಡವಾಳ ರೂ.31.21 ಕೋಟಿ ಇರುತ್ತದೆ. ಜೊತೆಗೆ ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು 1.12%ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅಖಂಖ ಪ್ರಮಾಣವು ಆರ್‌ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇಕಡಾ 9%ಕ್ಕಿಂತ ಹೆಚ್ಚಿದ್ದು ಅಂದರೆ 23.06% ಆಗಿದ್ದು, ಬ್ಯಾಂಕ್ ಆರೋಗ್ಯಕರವಾಗಿರುವುದನ್ನು ತೋರಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ ಲೆಕ್ಕಪರಿಶೋಧಕರು ನಡೆಸಿದ ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಶ್ರೇಣಿಯ ಬ್ಯಾಂಕಾಗಿ ಗುರುತಿಸಲ್ಪಟ್ಟಿದ್ದು ಬ್ಯಾಂಕ್ ಆರ್ಥಿಕವಾಗಿ ಸುಧ್ರಡವಾಗಿದೆ ಎಂಬುದನ್ನು÷ತೋರಿಸುತ್ತದೆ.


ಬ್ಯಾಂಕಿನ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಮರ್ಥ ಆಡಳಿತ ಮಂಡಳಿ, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಶ್ರಮ ಹಾಗೂ ಬ್ಯಾಂಕಿನ ಪ್ರಗತಿಯತ್ತ ಗಮನಹರಿಸಿ ಕಾರ್ಯಯೋಜನೆಯನ್ನು ಹಮ್ಮಿಕೊಂಡಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸಿ 22 ವರ್ಷಗಳ ನಂತರ ಪ್ರಸ್ತುತ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ ಬ್ರಹ್ಮಾವರದಲ್ಲಿ 2024ನೇ ಮಾರ್ಚ್ ತಿಂಗಳಲ್ಲಿ 17ನೇ ಶಾಖೆಯನ್ನು ಮತ್ತು ನವಂಬರ್ ತಿಂಗಳಲ್ಲಿ 18ನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ಪ್ರಾರಂಭಿಸಲಾಗಿದೆ. ಪ್ರಸ್ತುತ ಎಂಸಿಸಿ ಬ್ಯಾಂಕ್ ಸುಸಜ್ಜಿತ ಆಡಳಿತ ಕಚೇರಿ ಮತ್ತು ಸಂಸ್ಥಾಪಕರ ಶಾಖೆ ಹಂಪನಕಟ್ಟ, ಅಶೋಕನಗರ, ಕಂಕನಾಡಿ, ಕುಲಶೇಕರ, ಮೋರ್ಗನ್ಸ್ಗೇಟ್, ಮೂಡಬಿದ್ರಿ, ಶಿರ್ವ, ಬಜಪೆ, ಕಿನ್ನಿಗೋಳಿ, ಸುರತ್ಕಲ್, ಉಳ್ಳಾಲ, ಉಡುಪಿ, ಕುಂದಾಪುರ, ಪುತ್ತೂರು, ಬಿ.ಸಿ.ರೋಡ್, ಕಾರ್ಕಳ, ಬ್ರಹ್ಮಾವರ ಮತ್ತು ಬೆಳ್ತಂಗಡಿ ಹೀಗೆ 18 ಶಾಖೆಗಳನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕ್ ತನ್ನ 19ನೇ ಶಾಖೆಯನ್ನು ದಿನಾಂಕ 02.03.2025ರಂದು ಬೆಳ್ಮಣ್‌ನಲ್ಲಿ ಉದ್ಘಾಟಿಸಲಿದೆ.
ಶಾಖೆಯ ಉದ್ಘಾಟನೆಯ ಕಾರ್ಯಕ್ರಮವು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ನಡೆಸಿಯಲಿದೆ. ಶಾಖೆಯ ಉದ್ಘಾಟನೆಯನ್ನು ಐವನ್ ಡಿಸೋಜ, ಶಾಸಕರು, ಕರ್ನಾಟಕ ವಿಧಾನ ಪರಿಷತ್ ಇವರು ನಡೆಸಿಕೊಡಲಿರುವರು. ಸಂತ ಜೋಸೆಪ್ಸ್ ಚರ್ಚ್, ಬೆಳ್ಮಣ್ ಇದರ ಧರ್ಮಗುರುಗಳಾದ ವಂ. ಫಾ| ಫ್ರೆಡ್ರಿಕ್ ಮಸ್ಕರೇನ್ಹಸ್ ಇವರು ಆಶಿರ್ವಚನ ಕೈಗೊಳ್ಳುವರು. ದಾಯ್ಜಿವಲ್ಡ್ ಮೀಡಿಯಾ ಪ್ರೈ
ಲಿ. ಇದರ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಯಾಗಿದ್ದು, ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮೇಶ್ವರಿ ಎಂ. ಶೆಟ್ಟಿ ಗೌರವಾನ್ವಿತ ಅತಿಥಿಗಳಾಗಿರುವರು.
ಹಾಗೆಯೇ ಬ್ರಹ್ಮಾವರ ಶಾಖೆಯ ಎಟಿಎಂ ಉದ್ಘಾಟನೆ: ನೆಲಮಹಡಿ, ಶೇಷಗೋಪಿ ಪ್ಯಾರಡೈಸ್, ರಾ.ಹೆ.66, ಆಕಾಶವಾಣಿ ವೃತ್ತದ ಬಳಿ, ವಾರಂಬಳ್ಳಿ, ಬ್ರಹ್ಮಾವರದಲ್ಲಿರುವ ಎಮ್‌ಸಿಸಿ ಬ್ಯಾಂಕಿನ ಶಾಖೆಯ ಎಟಿಎಮ್ ಉದ್ಘಾಟನೆ ಸೋಮವಾರ ಮಾರ್ಚ್ 3 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

*ಬ್ಯಾಂಕಿನ ಆಡಳಿತ ಮಂಡಳಿ*
ಪ್ರಸ್ತುತ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷ ಹಾಗೂ ಜೆರಾಲ್ಡ್ ಡಿಸಿಲ್ವಾ ಉಪಾಧಕ್ಷರಾಗಿದ್ದು, ಶ್ರೀ ಅಂಡ್ರೂ÷್ಯ ಡಿಸೋಜ, ಶ್ರೀ ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಶ್ರೀ ಡೇವಿಡ್ ಡಿಸೋಜ, ಶ್ರೀ ಎಲ್‌ರೊಯ್ ಕ್ರಾಸ್ಟೊ, ರೋಶನ್ ಡಿ’ಸೋಜ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ನಿರ್ದೇಶಕರಾಗಿದ್ದು, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ ವೃತ್ತಿಪರ ನಿರ್ದೇಶಕರಾಗಿರುತ್ತರೆ. ಫೆಲಿಕ್ಸ್‌ ಡಿಕ್ರುಜ್, ಆಲ್ವಿನ್ ಮೊಂತೇರೊ ಹಾಗೂ ಶರ್ಮಿಳಾ ಮಿನೇಜಸ್ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿರುತ್ತಾರೆ. ಪ್ರಸ್ತುತ ಸುನಿಲ್ ಮಿನೇಜಸ್ ಮಹಾಪ್ರಬಂಧಕರಾಗಿ, ಒಟ್ಟು, 185 ಸಿಬ್ಬಂದಿಗಳು ಆಡಳಿತ ಕಛೇರಿ ಮತ್ತು ಶಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು