ಇತ್ತೀಚಿನ ಸುದ್ದಿ
ಸಿಹಿ ಸುದ್ದಿ; ಜೂನ್ 4ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕೋವಿಡ್ ಶೀಲ್ಡ್ ಲಸಿಕೆ ಲಭ್ಯ
03/06/2021, 20:40
ಮಂಗಳೂರು (reporterkarnataka news): ಜಿಲ್ಲೆಯ ಕೋವಿಡ್ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ ಕೋವಿಡ್ ಶೀಲ್ಡ್ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಜೂನ್ 4 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಸಮುದಾಯ ಕೇಂದ್ರಗಳಲ್ಲಿ ನೀಡಲಾಗುವುದು.
ಮಂಗಳೂರಿನಲ್ಲಿರುವ 10 ನಗರ ಆರೋಗ್ಯ ಕೇಂದ್ರಗಳಾದ ಜೆಪ್ಪು, ಎಕ್ಕೂರು, ಪಡೀಲ್, ಶಕ್ತಿನಗರ, ಕುಂಜತ್ತಬೈಲು, ಬಿಜೈ ಕಾಪಿಕಾಡ್(ಲೇಡಿಹಿಲ್), ಕುಳಾಯಿ, ಕಸಬ ಬೆಂಗ್ರೆ, ಬಂದರ್, ಸುರತ್ಕಲ್ ಮತ್ತು ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರಿನಲ್ಲಿರುವ ನಗರ ಆರೋಗ್ಯ ಕೇಂದ್ರಕ್ಕೆ ಬರುವ ಫಲಾನುಭವಿಗಳು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿ ನೋಂದಾವಣೆ (ಔಟಿಟiಟಿe ಖegisಣಡಿಚಿಣioಟಿ) ತಿತಿತಿ.ಛಿoತಿiಟಿ.gov.iಟಿ ಮಾಡಿ ಂಠಿಠಿoiಟಿಣmeಟಿಣ Sheಜuಟe ಮಾಡಿಕೊಂಡು ಬಂದು ಲಸಿಕೆಯನ್ನು ಪಡೆಯಬೇಕು.