ಇತ್ತೀಚಿನ ಸುದ್ದಿ
1.24 ಕೋಟಿ ವೆಚ್ಚದಲ್ಲಿ ಸುರತ್ಕಲ್ ಪಶ್ಚಿಮ ವಾರ್ಡ್ 1ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ: ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
27/12/2022, 18:24
ಸುರತ್ಕಲ್(reporterkarnataka.com): ಸುಮಾರು 1.24 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪಶ್ಚಿಮ ವಾರ್ಡ್ 1ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಕೋಟ್ಯಾನ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮಹೇಶ್ ಮೂರ್ತಿ, ರಾಘವೇಂದ್ರ ಶೆಣೈ, ಪುಷ್ಪರಾಜ್ ಮುಕ್ಕ, ಯುವಮೋರ್ಚಾ ಅಧ್ಯಕ್ಷ ಭರತ್ ಕೃಷ್ಣಾಪುರ, ಶಕ್ತಿಕೇಂದ್ರ ಪ್ರಮುಖ್ ರಾಜೇಶ್ ಮುಕ್ಕ, ಬೂತ್ ಅಧ್ಯಕ್ಷರಾದ ದಿವಾಕರ್ ಪುತ್ರನ್, ಬೂತ್ ಕಾರ್ಯದರ್ಶಿ ತಿಲಕ್ ಕುಮಾರ್, ಐದು ಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಸುರೇಶ್ ಕರ್ಕೇರ, ದೊಡ್ಡಕೊಪ್ಲ ಮೊಗವೀರ ಸಭಾದ ಅಧ್ಯಕ್ಷರಾದ ಯಶವಂತ್ ಕರ್ಕೇರ, ಸಚೇಂದ್ರ ಗುರಿಕಾರ, ಶುಭಕರ ಪೂಜಾರಿ , ನರೇಶ್ ಕರ್ಕೇರ, ಸತೀಶ್ ಕರ್ಕೇರ, ಚೇತನ್, ನಿಖಿಲ್, ನವೀನ್, ಶೈಲೇಶ್ ಬಂಗೇರ, ದೀಕ್ಷಿತ್, ರೋಹಿಣಿ ಬಾಬು, ನಿರ್ಮಲ,ಹಿರಿಯರಾದ ಪದ್ಮ, ವಿಮಲಾ, ಆಶಾ ಕರ್ಕೇರ, ಅನುಪಮಾ, ದಯಾವತಿ, ಹೇಮಾವತಿ, ಯೋಗಿನಿ, ದೀಪಾ ಮತ್ತು ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.














