6:52 AM Wednesday30 - October 2024
ಬ್ರೇಕಿಂಗ್ ನ್ಯೂಸ್
ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು… ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ‘ಉಡುಗೊರೆ’: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಇತ್ತೀಚಿನ ಸುದ್ದಿ

108 ಆಂಬುಲೆನ್ಸ್ ಸಿಬ್ಬಂದಿಗಳ ಬೇಜವಾಬ್ದಾರಿತನ: ಅತಿವೃಷ್ಟಿ ನಿರಾಶ್ರಿತರ ಆಕ್ರೋಶ: ಮಾನವಿಯತೆ ಮೆರೆದ ಕಂದಾಯ ಅಧಿಕಾರಿ ಸುಧೀರ್..!

02/08/2024, 00:19

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಜೀವ ಉಳಿಸಲು ವೈದ್ಯರು ಎಷ್ಟು ಮುಖ್ಯವೋ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವ ಆಂಬುಲೆನ್ಸ್ ವಾಹನ ಕೂಡ ಅಷ್ಟೇ ಮುಖ್ಯ. ಆದರೆ ಬೆಂಗಳೂರು 108 ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತವಾದ ಘಟನೆ ಗುರುವಾರ ಸಂಜೆ ನಡೆದಿದೆ.
ಪುಷ್ಯ ಮಳೆ ಅಬ್ಬರಕ್ಕೆ ತಾಲೂಕಿನಾದ್ಯಂತ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಪ್ರವಾಹ ಬಂದ ಹಿನ್ನಲೆಯಲ್ಲಿ ಕುರುವಳ್ಳಿಯ ಜಯಚಾಮರಾಜೇಂದ್ರ ತುಂಗಾ ಸೇತುವೆ ಪಕ್ಕ ವಾಸಿಸುವ ಟೆಂಟ್ ತುಂಗಾ ಕಾಲೋನಿ ನಿವಾಸಿಗಳನ್ನು ಪಟ್ಟಣದ ಕೆ ಟಿ ಕೆ ಕಲ್ಯಾಣ ಮಂಟಪ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಈ ಕಾಳಜಿ ಕೇಂದ್ರದ ನಿರಾಶ್ರಿತರಲ್ಲಿ 9 ತಿಂಗಳು ತುಂಬಿದ ತುಂಬು ಗರ್ಭಿಣಿ ಮಹಿಳೆ ಇದ್ದು ಅವರಿಗೆ ತಿವ್ರ ತರದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ಆಂಬುಲೆನ್ಸ್ ಗೆ ಅಲ್ಲೇ ಇದ್ದ ನಿರಾಶ್ರಿತರಲ್ಲಿ ಒಬ್ಬರು ಕರೆ ಕೂಡ ಮಾಡಿದ್ದಾರೆ. ಕರೆ ಮಾಡಿ 45 ನಿಮೀಷ ವಾದರೂ ಆಂಬುಲೆನ್ಸ್ ಬಂದಿಲ್ಲ .ಮಳೆ ಇದ್ದುದರಿಂದ ರಸ್ತೆಯಲ್ಲಿ ಯಾವುದೇ ವಾಹನ ಕೂಡ ಇರಲಿಲ್ಲ. ನಂತರ ಪುನಃ ಮತ್ತೆ 108 ಆಂಬುಲೆನ್ಸ್ ಗೆ ಕರೆ ಮಾಡಿದರೆ ತೀರ್ಥಹಳ್ಳಿ ಎಲ್ಲಿ ಬರುತ್ತೆ,ಕೆ.ಟಿ.ಕೆ ಎಲ್ಲಿ ಬರುತ್ತೆ… ? ಯಾವ ಊರು ನೀವು ಹೇಳಿದಲ್ಲಿಗೆ ಬರಲು ಆಗುವುದಿಲ್ಲ. ಒಂದು ಘಂಟೆ ಕಾಯಿರಿ ಎಂದು ಬೇಜವಾಬ್ದಾರಿ ಮಾತನ್ನು ಬೆಂಗಳೂರು108ಆಂಬುಲೆನ್ಸ್ ಸಿಬ್ಬಂದಿಗಳು ಹೇಳಿದ್ದಾರೆ. ಆಂಬುಲೆನ್ಸ್ ಬಾರದ ಕಾರಣ ಮಹಿಳೆಗೆ ಹೊಟ್ಟೆ ತುಂಬಾ ನೋವಾಗಿ ಒದ್ದಾಡುತ್ತಾ ಇರುವಾಗ ಅಲ್ಲಿನ ನಿರಾಶ್ರಿತರು ಏನಾದರೂ ಅವಘಢ ಆದ ಮೇಲೆ ಅಂಬುಲೆನ್ಸ್ ನವರು ಬರ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಬಗ್ಗೆ ಜಯಚಾಮರಾಜೇಂದ್ರ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳು ಗಮನಿಸಿ ಮುಂದೆ ಈ ರೀತಿ ಆಗದಂತೆ ಜನರ ಕಷ್ಟಕ್ಕೆ ಸ್ಪಂದನೆ ಮಾಡುವಂತೆ 108 ಬೆಂಗಳೂರು ಆಂಬುಲೆನ್ಸ್ ಸಿಬ್ಬಂದಿಗಳಿಗೆ ತಿಳಿ ಹೇಳಬೇಕಿದೆ.
*ಮಾನವೀಯತೆ ಮೆರೆದ ಕಂದಾಯ ಅಧಿಕಾರಿ ಸುಧೀರ್:*
ಈ ವೇಳೆ ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅದಿಕಾರಿ ನಿರಾಶ್ರಿತರಿಗೆ ಕಾಫಿ, ಟೀ ಕೊಡಲು ತಾವೇ ಖುದ್ದಾಗಿ ಕೆ ಟಿ ಕೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ರವರು ಮಹಿಳೆ ಹೊಟ್ಟೆ ನೋವೂ ತಾಳಲಾರದೆ ಒದ್ದಾಡುವುದನ್ನು ನೊಡಿ ತಕ್ಷಣ ತಡಮಾಡದೇ 108 ವಾಹನ ಕಾಯದೆ ತಮ್ಮ ಕಾರಿನಲ್ಲಿ ಗರ್ಭಿಣಿ ಮಹಿಳೆಯನ್ನು ಕುರಿಸಿಕೊಂಡು ಹೋಗಿ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ಬಿಟ್ಟಿದ್ದಾರೆ.
ತಕ್ಷಣ ಸ್ಪಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ಅವರ ಮಾನವೀಯತೆಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಎಲ್ಲಾ ನಿರಾಶ್ರಿತರು ಸಂತಸ ಪಟ್ಟು ಕಂದಾಯ ಇಲಾಖೆ ಅಧಿಕಾರಿ ಸುಧೀರ್ ಮತ್ತು ಮೋಹನೇಶ್, ಲೋಕೇಶ್ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು