ಇತ್ತೀಚಿನ ಸುದ್ದಿ
1 ಕೋಟಿ ವೆಚ್ಚದಲ್ಲಿ ಮುಂಚೂರು ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಡಾ ಭರತ್ ಶೆಟ್ಟಿ ಚಾಲನೆ
27/12/2022, 18:18

ಸುರತ್ಕಲ್(reporterkarnataka.com): ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪೂರ್ವ 2ನೇ ಮುಂಚೂರು ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕರಾದ ಡಾ.ವೈ. ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಮೇಯರ್ ಜಯಾನಂದ ಅಂಚನ್,ಸ್ಥಳೀಯ ಮನಪಾ ಸದಸ್ಯೆ ಶ್ವೇತಾ ಪೂಜಾರಿ,ಶಕ್ತಿಕೇಂದ್ರ ಪ್ರಮುಖ್ ಸುರೇಂದ್ರ ಸುವರ್ಣ ,ಜಯಂತ್,
ಶಕ್ತಿಕೇಂದ್ರ ಸಹ ಪ್ರಮುಖ್ ಆದ ರಾಕೇಶ್ ಬಂಗೇರ, ಬೂತ್ ಅಧ್ಯಕ್ಷರಾದ ಪದ್ಮಾವತಿ ಕೊಡಿಪಾಡಿ ರೇಖಾ, ಸಂತೋಷ್ ತಡಂಬೈಲ್, ಸಜಿತ್ ರಾಜ್ , ವಿಠಲ್ ದಾಸ್ , ಬೂತ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಕೊಡಿಪಾಡಿ, ಪ್ರಮುಖರಾದ ಕೈಲಾಸ್ ತಡಂಬೈಲ್ , ಸತೀಶ್ ಮುಂಚೂರು, ವಿನೋದ್ ಬಂಗೇರ, ಬಾಲಕೃಷ್ಣ ಮುಂಚೂರು, ಸುಧಾಕರ್ , ಶೋಧನ್, ಸಂತೋಷ್, ಸುರೇಂದ್ರ ಶೆಟ್ಟಿ , ರಾಮಣ್ಣ, ಶರ್ಮಿಲ, ಶೇಖರ್, ಸುನೀತ, ಯಶೋಧ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.