1:07 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ…

ಇತ್ತೀಚಿನ ಸುದ್ದಿ

1.48 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ

01/03/2023, 21:46

ಸುರತ್ಕಲ್(reporterkarnataka.com):
ಪಕ್ಷಾತೀತ ನೆಲೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕ ಡಾ ಭರತ್ ಶೆಟ್ಟಿ ವೈ ಹೇಳಿದ್ದಾರೆ.

ಅವರು ಮಹಾನಗರ ವ್ಯಾಪ್ತಿಯ ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ
6ನೇ ವಿಭಾಗದ ರಸ್ತೆ ಅಭಿವೃದ್ಧಿಗೆ 30 ಲಕ್ಷ, ಕೃಷ್ಣ ಮಠ ರಸ್ತೆ ಸಮಗ್ರ ಅಭಿವೃದ್ಧಿಗೆ 19 ಲಕ್ಷ, 6ನೇ ವಿಭಾಗದ ಮುಂದುವರಿದ ಕಾಮಗಾರಿಗೆ 19 ಲಕ್ಷ, ಮತ್ತು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾತಿಗೊಂಡ
ರಸ್ತೆ ಕಾಂಕ್ರಿಟೀಕರಣಕ್ಕೆ ಮತ್ತು ಚರಂಡಿ ರಚನೆಗೆ 80. ಲಕ್ಷ ಒಟ್ಟು ಸೇರಿ 1.48 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ‌ ನೆರವೇರಿಸಿ ಮಾತನಾಡಿದರು.

ಬಾಕಿಯುಳಿದ ಕೃಷ್ಣಾಪುರ ಮಾರುಕಟ್ಟೆ ಯೋಜನೆಗೆ ಈಗಾಗಲೇ ಅನುದಾನ ಇರಿಸಿ ಕಾಮಗಾರಿ ಪ್ರಾರಂಭಗೊಂಡಿದೆ ಎಂದರು.
ಅನುದಾನ ಒದಗಿಸಿದ ನೆಲೆಯಲ್ಲಿ ಶಾಸಕರನ್ನು‌ ಗ್ರಾಮಸ್ಥರ‌ ನೆಲೆಯಲ್ಲಿ ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ
ಭರತ್‌ರಾಜ್ ಕೃಷ್ಣಾಪುರ ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಮುಖ್ ಹರಿಪ್ರಸಾದ್, ಸಹ ಪ್ರಮುಖ್ ರಾಕೇಶ್, ಬೂತ್ ಅಧ್ಯಕ್ಷ ರವಿ ಪೂಜಾರಿ, ಜಯಚಂದ್ರ, ಮಂಡಲ ಕೋಶಾಧಿಕಾರಿ ಪುಷ್ಪರಾಜ್, ಪ್ರಜ್ವಲ್ ಬೂತ್ ಯುವ ಮೋರ್ಚಾ ಕಾರ್ಯದರ್ಶಿ ದೀಪಕ್ ದೇವಾಡಿಗ, ಸುಕೇಶ್ ಭಟ್, ದಾವೂದ್ ಬಿಎಂಆರ್, ರಮೇಶ್ ಆಚಾರ್ಯ, ಭಾಸ್ಕರ ಸನಿಲ್, ಸುಮಿತ್ರಾ ಆನಂದ, ನಾಗೇಶ್ ಮನೋಜ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು