ಇತ್ತೀಚಿನ ಸುದ್ದಿ
1.34 ಕೋಟಿ ವೆಚ್ಚದಲ್ಲಿ ಕೃಷ್ಣಾಪುರ ವಾರ್ಡ್ 4ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ: ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
05/03/2023, 14:10

ಸುರತ್ಕಲ್(reporterkarnataka.com): ಸುಮಾರು 1.34 ಕೋಟಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕೃಷ್ಣಾಪುರ ವಾರ್ಡ್ ನಾಲ್ಕರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಲಕ್ಷ್ಮಿ ಶೇಖರ್ ದೇವಾಡಿಗ, ಶಕ್ತಿ ಕೇಂದ್ರ ಪ್ರಮುಖರಾದ ಲಕ್ಷ್ಮೀಶ ದೇವಾಡಿಗ ಗಿರೀಶ್ ಕುಮಾರ್ ಸಹ ಪ್ರಮುಖರಾದ ಮುಕೇಶ್ , ಜಗದೀಶ್, ಪಕ್ಷದ ಪ್ರಮುಖರಾದ
ರಾಕೇಶ್, ಸತೀಶ್ ಸಾಲ್ಯಾನ್, ಚಂದ್ರ ಹಾಸ್, ಚೇತನ್ ರೈ, ಕವಿತಾ ಶೆಟ್ಟಿ , ಹೇಮಾವತಿ ಡಿ.ಕೋಟ್ಯಾನ್, ಚಂದ್ರಕಲಾ ರತ್ನಾಕರ ಆಚಾರಿ, ಶೇಖರ್ ದೇವಾಡಿಗ, ರಕ್ಷಿತ್ ಕಬೀರ್, ರಾಧಾಕೃಷ್ಣ,ಪ್ರಶಾಂತ್ ಆಚಾರ್ಯ, ಉಪೇಂದ್ರ ಆಚಾರ್ಯ,ಅಶೋಕ್ ಆಚಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.