ಇತ್ತೀಚಿನ ಸುದ್ದಿ
ಕುಶಾಲನಗರ ಬಸವನಳ್ಳಿಯ ಶುಂಠಿ ಹೊಲದಲ್ಲಿ ವೃದ್ಧ ಕಾರ್ಮಿಕನ ಹತ್ಯೆ: ಆರೋಪಿಯ ಬಂಧನ
30/08/2025, 17:35

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಕಾಲೋನಿ ಬಳಿ ಶುಂಠಿ ಹೊಲದಲ್ಲಿ ಕೆಲಸ ಮಾಡಿಕೊಂಡು ಶೆಡ್ ನಲ್ಲಿ ವಾಸವಿದ್ದ ಕೇರಳ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ಹತ್ಯೆಗೆ ಒಳಗಾದ ವ್ಯಕ್ತಿ ಜಮೀನು ನಲ್ಲಿ ಕಾರ್ಮಿಕ ಹಾಗೂ ಕಾವಲುಗಾರನಾಗಿದ್ದ ಮುರಳಿ(52) ಎಂದು ಗುರುತಿಸಲಾಗಿದೆ. ಬಸವನಹಳ್ಳಿ ಗ್ರಾಮದ ತೀರ್ಥ ಮತ್ತು ಕಾವಲುಗಾರ ಮುರಳಿ ನಡುವೆ ಜಗಳ ನಡೆದಿದ್ದು, ತೀರ್ಥ ಮುರುಳಿ ಮೇಲೆ ಕಟ್ಟಿಯಿಂದ ಮಾರಣಾoತಿಕ ಹಲ್ಲೆ ಮಾಡಿ ಹತ್ಯೆ ಮಾಡಿದ್ದು, ತಡಿಯಲು ಬಂದ ಆರೋಪಿ ತೀರ್ಥ ನ ಪತ್ನಿ ಮೇಲೂ ಹಲ್ಲೆ ಮಾಡಲಾಗಿದೆ. ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ತೀರ್ಥನನ್ನು ಬಸವನಹಳ್ಳಿಯ ಆತನನ್ನು ಬಂಧಿಸಿ, ಗಾಯಗೊಂಡ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.