ಇತ್ತೀಚಿನ ಸುದ್ದಿ
ಏರ್ ಲಿಫ್ಟ್ : 40 ತಾಸಿನ ಬಳಿಕ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಟಗ್ ಸಿಬ್ಬಂದಿಗಳ ರಕ್ಷಣೆ
17/05/2021, 14:28
ಮಂಗಳೂರು(reporterkarnataka news):
ಕಾಪು ಲೈಟ್ ಹೌಸ್ ನಿಂದ ಸುಮಾರು 5 ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ ನೌಕೆಯಲ್ಲಿದ್ದ ಎಲ್ಲ 9 ಮಂದಿ ಸಿಬ್ಬಂದಿಗಳನ್ನು ಏರ್ ಲಿಫ್ಟ್ ಮೂಲಕ ಬಚಾವ್ ಮಾಡಲಾಗಿದೆ. ಇದರೊಂದಿಗೆ 40 ತಾಸಿಗೂ ಅಧಿಕ ಕಾಲದ ಅನಿಶ್ಚಿತತೆಯ ಬದುಕು ಕೊನೆಗೊಂಡಿದೆ.
ನೌಕಾ ಸೇನೆಯ ಹೆಲಿಕಾಪ್ಟರ್ ಮತ್ತು ಶಿಪ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ಕೋಸ್ಟಲ್ ಗಾರ್ಡ್ ಡಿಐಜಿ ಎಸ್.ಬಿ. ವೆಂಕಟೇಶ್ ಸೋಮವಾರ ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.