ಇತ್ತೀಚಿನ ಸುದ್ದಿ
ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಪ್ರದೀಪ್ ಸಿಂಗ್ ಮೊದಲ ಸ್ಥಾನ
August 4, 2020, 10:59 AM

ನವದೆಹಲಿ(reporterkarnatakanews):
ಕೇಂದ್ರ ಲೋಕಸೇವಾ ಆಯೋಗ 2019ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷಾ ಫಲಿತಾಂಶ ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿ ನೇಮಕಾತಿ ಪಡೆಯುತ್ತಾರೆ.
ಪ್ರದೀಪ್ ಸಿಂಗ್ ಮೊದಲ ಸ್ಥಾನ ಪಡೆದಿದ್ದಾರೆ. ಜತಿನ್ ಕಿಶೋರ್ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನ ಪ್ರತಿಭಾ ವರ್ಮಾ ಅವರ ಪಾಲಾಗಿದೆ. ಒಟ್ಟು 829 ಮಂದಿ ಗೆಲುವು ಸಾಧಿಸಿದ್ದಾರೆ.
ಪ್ರದೀಪ್ ಸಿಂಗ್ ಪ್ರಥಮ ರ್ಯಾಂಕ್ ಪಡೆದರೆ, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ. ಟಾಪ್-ಟೆನ್ ಪಟ್ಟಿಯಲ್ಲಿ ಮೂರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಕನಿಷ್ಠ ಒಂಬತ್ತು ಮಂದಿ ಇದ್ದಾರೆ. ಆಯ್ಕೆಯಾದ 829 ಜನರಲ್ಲಿ 304 ಮಂದಿ ಸಾಮಾನ್ಯ ವರ್ಗದವರಾಗಿದ್ದರೆ 78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗದವರು, 251 ಮಂದಿ ಇತರ ಹಿಂದುಳಿದ ವರ್ಗದವರು (ಒಬಿಸಿ), 129 ಪರಿಶಿಷ್ಟ ಜಾತಿ ಮತ್ತು 67 ಮಂದಿ ಪರಿಶಿಷ್ಟ ಪಂಗಡದವರು.
ಯುಪಿಎಸ್ಸಿ 182 ಅಭ್ಯರ್ಥಿಗಳ ಏಕೀಕೃತ ಮೀಸಲು ಪಟ್ಟಿಯನ್ನು ಸಹ ನಿರ್ವಹಿಸಿದೆ. ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ನಂತಹ ವಿವಿಧ ಸೇವೆಗಳು ಒಟ್ಟು 927 ಹುದ್ದೆಗಳನ್ನು ವರದಿ ಮಾಡಿದ್ದು, ಗ್ರೂಪ್ ಎ ಸರ್ವೀಸಸ್ 438 ಹುದ್ದೆಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಐಎಎಸ್ನಲ್ಲಿ 180, ಐಪಿಎಸ್ನಲ್ಲಿ 150 ಮತ್ತು ಐಎಫ್ಎಸ್ನಲ್ಲಿ 24 ಹುದ್ದೆಗಳು ಖಾಲಿ ಇವೆ. ಯುಪಿಎಸ್ಸಿ ತನ್ನ ಕ್ಯಾಂಪಸ್ನಲ್ಲಿರುವ ಪರೀಕ್ಷಾ ಹಾಲ್ ಬಳಿ “ಫೆಸಿಲಿಟೇಶನ್ ಕೌಂಟರ್” ಹೊಂದಿದೆ.
ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು ಮತ್ತು ನೇಮಕಾತಿಗಳ ಬಗ್ಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟೀಕರಣವನ್ನು ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವೈಯಕ್ತಿಕವಾಗಿ ಅಥವಾ ದೂರವಾಣಿ ಮೂಲಕ 011-23385271 / 23381125/23098543 ಗೆ ಪಡೆಯಬಹುದು. ಫಲಿತಾಂಶಗಳು ವೆಬ್ಸೈಟ್ನಲ್ಲಿ (www.upsc.gov.in) ಲಭ್ಯವಿರುತ್ತವೆ. ಮುಂದಿನ 15 ದಿನಗಳಲ್ಲಿ ವೆಬ್ಸೈಟ್ನಲ್ಲಿ ಮಾರ್ಕ್ಸ್ ಲಭ್ಯವಿರುತ್ತದೆ ಅಂತ ತಿಳಿಸಿದೆ.