ಇತ್ತೀಚಿನ ಸುದ್ದಿ
ತುಂಬೆ ಡ್ಯಾಮ್ ಸಂತ್ರಸ್ತ ರೈತರಿಂದ ಪಾಲಿಕೆ ಆಯುಕ್ತರ ಭೇಟಿ: ಸಂತ್ರಸ್ತರಿಗೆ ಬೇಡಿಕೆ ಏನು?
September 21, 2020, 9:50 PM

ಮಂಗಳೂರು(reporterkarnataka news): ತುಂಬೆ ಡ್ಯಾಮ್ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ನ್ಯಾಯೋಚಿತ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂತ್ರಸ್ತ ರೈತರು ನಗರಪಾಲಿಕೆ ಆಯುಕ್ತರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಂತ್ರಸ್ತರ ನಿಯೋಗ ನ್ಯಾಯೋಚಿತ ಸೂಕ್ತ ಪರಿಹಾರ ಒದಗಿಸುವಂತೆ ಲಿಖಿತ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಜಾನ್ ಲೋಬೋ, ಅಂಜಲಿ ಡಿಸೋಜ, ಗ್ರೆಟ್ಟ ಡಿಸೋಜ, ವಾಸಿ ಡಿಸೋಜ, ಗ್ಲಾ ಶನ್ ಡಿಸೋಜ, ಪ್ರಜ್ವಲ್ ಡಿಸೋಜ, ಜೀತ ಡಿಸೋಜ, ಫೆಲಿಕ್ಸ್ ಸವಿತಾ ಡಿಸೋಜ, ಪ ಲ್ ಸೀತಾ ಮೇರಿ ಡಿಸೋಜ, ಅನಿಶಾ ನವೀನ ಸಿಂತಿಯ, ಮೇಲರಾಯ್ ಧ ಲ್, ಸೀನಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.