7:50 PM Monday18 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ…

ಇತ್ತೀಚಿನ ಸುದ್ದಿ

ತುಳು ಭಾಷೆಯಿಂದ 6 ಭಾಷೆಗೆ ಡಬ್ ಆಗಲಿದೆ ಸಿನಿಮಾ: ಈ ಮೂವಿ ಯಾವುದು ಗೊತ್ತೇ? 

December 27, 2020, 9:33 AM

ಮಂಗಳೂರು(reporterkarnataka news) : ತುಳು ಭಾಷೆಯಲ್ಲಿ ನಿರ್ಮಾಣವಾಗಲಿರುವ ” 21 ಗ್ರ್ಯಾಮ್ಸ್ ”  ಹೆಸರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ತುಳು ಭಾಷೆಯಿಂದ  ಆರು ಭಾಷೆಗೆ ಡಬ್ ಆಗಲಿದೆ.

ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದು ಏಕಕಾಲದಲ್ಲಿ ಆರು ಭಾಷೆಗೆ ಡಬ್ ಆಗಿ ಆಯಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಣ ತಂಡ ತಿಳಿಸಿದೆ. 

ಚಿತ್ರವು ತುಳು ಭಾಷೆಯಲ್ಲಿ ನಿರ್ಮಾಣಗೊಂಡು ಕನ್ನಡ, ಹಿಂದಿ , ತಮಿಳು, ತೆಲುಗು , ಮರಾಠಿ, ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ.

ಸೋಚ್ ಸಿನಿಮಾ , ಎಲ್.ಎಸ್.ಮೀಡಿಯಾ, ಓಮ್ ಸ್ಟುಡಿಯೋ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಸಿನಿಮಾ ತಂಡದವರು ಅಬ್ಬಕ್ಕ ಕ್ವೀನ್ ಕ್ರೂಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿನಿಮಾದ ಬಗ್ಗೆ ವಿವರ ನೀಡಿದರು.

ಸಿನಿಮಾದ ಹಿರೋ ಬಹುಭಾಷ ನಟ ಅಮಿತ್ ರಾವ್ ಅವರು ಮಾತನಾಡಿ ಪೂರ್ತಿ ಸಿನಿಮಾವು ಆರಂಭದಿಂದ ಕೊನೆ ತನಕ ಸಸ್ಪೆನ್ಸ್ ಆಗಿ ಇರಲಿದೆ‌ . ಹಿರೋ ಹಿರೋಹಿನ್ ಕೇಂದ್ರಿತ ಮನೋವೈಜ್ಞಾನಿಕ ಭೂಮಿಕೆಯೆ ಈ ಸಿನಿಮಾದ ವಿಶೇಷವಾಗಿದೆ ಎಂದು ತಿಳಿಸಿದರು.

ತಾನು ಈ ಸಿನಿಮಾಕ್ಕಾಗಿ ಹೇರ್ ಸ್ಟೈಲ್ ವಿಭಿನ್ನವಾಗಿ ಬದಲಾಯಿಸಿಕೊಳ್ಳಬೇಕಾಯಿತು ಎಂದು ಅಮಿತ್ ರಾವ್ ತಿಳಿಸಿದರು.

ಸಿನಿಮಾದ ನಿರ್ದೇಶಕ ಸ್ಟೀಪನ್ ಅವರು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಕನ್ನಡ ಚಿತ್ರ ರಂಗದಲ್ಲಿ ಸಹ ನಿರ್ದೇಶಕನಾಗಿ ದುಡಿದ ಅನುಭವದ ಹಿನ್ನೆಲೆ ತುಳು ಭಾಷೆಯಲ್ಲಿ ಸಿನಿಮಾ ಮಾಡಲು ಮುಂದಾಗಿದ್ದೇನೆ. ನಿರ್ಮಾಣ ತಂಡದ ಪ್ರೋತ್ಸಾಹದ ಕಾರಣದಿಂದಾಗಿ ತುಳುವಿನಿಂದ 6 ಭಾಷೆಗೆ ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದೇವೆ ಎಂದು ತಿಳಿಸಿದರು. “21 ಗ್ರ್ಯಾಮ್ಸ್ ” ಸಿನಿಮಾ ಸೈಕಾಲಜಿಕಲ್ ಥ್ರಿಲ್ಲರ್ ಕಥಾ ಹಂದರ ವನ್ನು ಹೊಂದಿದೆ ಎಂದು ತಿಳಿಸಿದರು.

ಸಿನಿಮಾ ನಿರ್ಮಾಪಕರಾದ ಅವಿನಾಶ್ ಶೆಟ್ಟಿ ಅವರು ಮಾತನಾಡಿ ತುಳು ಸಿನಿಮಾ ರಂಗದ ಹೊಸ ಸಾಧನೆಗೆ ನಾವು ಸಿದ್ದರಾಗುತ್ತಿದ್ದೇವೆ ಎಂದು ತಿಳಿಸಿದರು.

ಇನ್ನೋರ್ವ ನಿರ್ಮಾಪಕ ಎಲ್.ಎಸ್.ಮೀಡಿಯಾ ಆಡಳಿತ  ನಿರ್ದೇಶಕ ಲಕ್ಷ್ಮಣ್ ಸುವರ್ಣ ಅವರು ಮಾತನಾಡಿ, ತುಳುವರು ಎಲ್ಲಾ ಭಾಷೆಯ ಸಿನಿಮಾಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ , ಅದೇ ರೀತಿಯಾಗಿ ತುಳುವರ ನಿರ್ಮಾಣದ ಈ ಸಿನಿಮಾವನ್ನು ಎಲ್ಲಾ ಭಾಷಿಗರು  ಪ್ರೀತಿಯಿಂದ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಇನ್ನೋರ್ವ ನಿರ್ಮಾಪಕಿ ಹಾಗೂ ಬಹು ಭಾಷ  ನಟಿ ಸೋನಲ್ ಮೊಂತೆರೊ ಅವರು ಮಾತನಾಡಿ , ಈ ಚಿತ್ರದ ನಿರ್ದೇಶಕರು ಸಿನಿಮಾ ಕತೆಯನ್ನು ಹೇಳಿದ ಸಂದರ್ಭದಲ್ಲಿ ಕಥೆಯ ಬಗ್ಗೆ ಅಗಾಧವಾದ ಕುತೂಹಲ ಮೂಡಿದ ಹಿನ್ನೆಲೆಯಲ್ಲಿ ಈ ಸಿನಿಮಾ ನಿರ್ಮಾಣ ತಂಡದ ಪಾಲುದಾರಿಕೆ ಒಪ್ಪಿದೆ, ತುಳು ಸಿನಿಮಾವನ್ನು ಮತ್ತೊಂದು ಮಜಲಿಗೆ ” 21 ಗ್ರ್ಯಾಮ್ಸ್ ” ಚಿತ್ರ ಕೊಂಡೊಯ್ಯುತ್ತದೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

ಇನ್ನೋರ್ವ ನಿರ್ಮಾಪಕ ಚರಣ್ ಸುವರ್ಣ ಅವರು ಮಾತನಾಡಿ ತುಳು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಈ ಸಿನಿಮಾ ಸ್ಥಾಪಿಸಲಿದೆ ಎಂದರು. ಸಿನಿಮಾದ ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್ ಅವರು ಮಾತನಾಡಿ,  ವಿಭಿನ್ನ ಶೈಲಿಯ ನಿರೂಪಣೆಯ ಚಿತ್ರವಾಗಿರುವುದರಿಂದ ವಸ್ತ್ರ ವಿನ್ಯಾಸ ಕೂಡ   ಸವಾಲಿನದಾಗಿದ್ದು ಆಕರ್ಷಕವಾಗಿರಲಿದೆ ಎಂದು ತಿಳಿಸಿದರು. 

ಸಿನಿಮಾ ಚಿತ್ರೀಕರಣವು ಮಂಗಳೂರು, ಕುಂದಾಪುರ , ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿ ನಡೆಯಲಿದೆ , ಜೊತೆಗೆ ಉತ್ತರ ಪ್ರದೇಶ ಹಾಗೂ ಜಾರ್ಖಾಂಡ್ ನಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಸ್ಟೀಪನ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಅಮಿತ್ ರಾವ್ , ನಿರ್ದೇಶಕ ಸ್ಟೀಪನ್ , ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್ , ನಿರ್ಮಾಪಕರಾದ ಅವಿನಾಶ್ ಶೆಟ್ಟಿ , ಲಕ್ಷ್ಮಣ್ ಸುವರ್ಣ , ಸೋನಲ್ ಮೊಂತೆರೊ, ಅನುಪಮ ಸುವರ್ಣ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು