ಇತ್ತೀಚಿನ ಸುದ್ದಿ
ಎಸ್ಸೆಸ್ಸೆಲ್ಸಿ ಪರೀಕ್ಷೆ: ತನ್ವಿ ಎಸ್. ನಾಯಕ್ ಗೆ 623 ಅಂಕ
August 10, 2020, 3:38 PM

ಮಂಗಳೂರು(reporterkarnataka news): ಎಸ್ಸೆಸ್ಸೆಲ್ಸಿ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಮಂಗಳೂರಿನ ಲೇಡಿಹಿಲ್ ವಿಕ್ಟೋರಿಯ ಹೆಣ್ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿ ತನ್ವಿ ಎಸ್. ನಾಯಕ್ 623( ಶೇ.99.68) ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಈಕೆ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ಎನ್. ನಾಯಕ್ ಹಾಗೂ ಸಂಜೀವ್ ನಾಯಕ್ ದಂಪತಿಯ ಪುತ್ರಿ.
ತನ್ವಿ ‘ಸ್ಪರ್ಧಾ ಕಲಿ’ಯಲ್ಲಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾಳೆ.