ಇತ್ತೀಚಿನ ಸುದ್ದಿ
ಚಿತ್ರ ಸಾಹಿತಿ ಕೆ. ಕಲ್ಯಾಣ್ ಸಂಸಾರದಲ್ಲಿ ಅಪಸ್ವರ: ಆತ್ಮಹತ್ಯೆಗೆ ಶರಣಾದ ಗಂಗಾ ಕುಲಕರ್ಣಿ
October 29, 2020, 3:21 PM

ಬೆಳಗಾವಿ(reporterkarnataka news): ಚಿತ್ರಸಾಹಿತಿ ಕೆ, ಕಲ್ಯಾಣ್ ಅವರ ಕುಟುಂಬದಲ್ಲಿ ಅಪಸ್ವರ ಕೇಳಿ ಬಂದಿದ್ದ ವೇಳೆ ಸುದ್ದಿಯಲ್ಲಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಷ್ಟಗಿಯಲ್ಲಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ , ಕಲ್ಯಾಣ್ ಅವರ ಮನೆಯಲ್ಲಿ ಗಂಗಾ ಕುಲಕರ್ಣಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಕೆ. ಕಲ್ಯಾಣ್ ಮತ್ತು ಅವರ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು.
ಗಂಗಾ ಕುಲಕರ್ಣಿ ಅವರು ಕೆ. ಕಲ್ಯಾಣ್ ಮನೆಯಲ್ಲಿ ವಿಚಿತ್ರ ಪೂಜೆ ಮಾಡುತ್ತಿದ್ದರು ಎಂದು ವರದಿಯಾಗಿತ್ತು.
ಗಂಗಾ ಕುಲಕರ್ಣಿ ಅವರ ಕಣ್ಣು ಕೆ. ಕಲ್ಯಾಣ್ ಕುಟಂಬಕ್ಕೆ ಸೇರಿದ್ದ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಮೇಲೆ ಬಿದ್ದಿತ್ತು. ಇದನ್ನು ವಶಪಡಿಸಿಕೊಳ್ಳಲು ಸಂಚು ಹೂಡಿದ್ದರು ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.