5:33 PM Wednesday2 - December 2020
ಬ್ರೇಕಿಂಗ್ ನ್ಯೂಸ್
ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್ ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ರಾಜ್ಯದ 6004 ಗ್ರಾಮ ಪಂಚಾಯಿತಿ ಪೈಕಿ 5762 ಗ್ರಾಪಂಗಳಲ್ಲಿ ನಡೆಯಲಿದೆ ಲೋಕಲ್ ಫೈಟ್  ರಾಜಕೀಯ ಪಕ್ಷ ಸ್ಥಾಪನೆ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಸಭೆ ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್

ಇತ್ತೀಚಿನ ಸುದ್ದಿ

ಗೌನಿಪಲ್ಲಿ ಪತ್ತಿನ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

November 13, 2020, 10:52 PM

ಕೋಲಾರ(reporterkarnataka news):

ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದ ದೊಡ್ಡ ಪ್ರಮಾಣದ ಪತ್ತಿನ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ  

ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.

 ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿತ 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳನ್ನು ಕಾಂಗ್ರೆಸ್‌ ಬೆಂಬಳಿತ ಅಭ್ಯರ್ಥಿಗಳು ಗೆದ್ದಿದ್ದಾರೆ

ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಅಮೀರ್‌ ಜಾನ್‌, ಕೊಂಡಾಮರಿ ಕೆ.ಆರ್‌.ಮೋಹನ್‌ ಕುಮಾರ್‌, ರತ್ನಪ್ಪ, ರಹಮತ್‌ ಉಲ್ಲಾ, ಕೋಡಿಪಲ್ಲಿ ಕೆ.ಬಿ.ಸುಬ್ಬಾರೆಡ್ಡಿ, ಸಾಲಗಾರರ ಮೀಸಲು ಕ್ಷೇತ್ರದಿಂದ ನಾಸೀರಾ, ಎಂ.ಸಿ.ನೀರಜಾ, ಸಾಲಗಾರರಲ್ಲದ ಕ್ಷೇತ್ರದಿಂದ ಪಿ.ವಿ.ಭಾಸ್ಕರರೆಡ್ಡಿ, ಸಾಲಗಾರರ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಪೂಜಾರಿ ನಾರಾಯಣಸ್ವಾಮಿ, ಸಾಲಗಾರರ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ವೆಂಕಟರವಣ, ಸಾಲಗಾರರ ಹಿಂದುಳಿದ ಎ ವರ್ಗದ ವತಿಯಿಂದ ಜಿ.ಆರ್‌..ಸತ್ಯನಾರಾಯಣ, ಸಾಲಗಾರರ ಹಿಂದುಳಿದ ಬಿ ಮೀಸಲು ಕ್ಷೇತ್ರದಿಂದ ಶಂಕರ ಪ್ರಸಾದ್ ಚುನಾಯಿತರಾಗಿದ್ದಾರೆ.

  ಚುನಾವಣಾಧಿಕಾರಿಯಾಗಿ ಬಿ.ವಿ.ಶಿವಶಂಕರ್‌ ಕಾರ್ಯನಿರ್ವಹಿಸಿದರು.

  ಚುನಾವಣೆ ನಂತರ ನಡೆದ ವಿಜಯೋತ್ಸವದಲ್ಲಿ ರಾಯಲ್ಪಾಡ್‌ ಬ್ಲಾಕ್‌ ಕಾಂಗ್ರೆಸ್‌ ಆಧ್ಯಕ್ಷ ಸಂಜಯ್‌ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಮಧು, ಮುಖಂಡರಾದ ವಿಶ್ವನಾಥ್‌, ಪಿ.ವಿ.ಶ್ರೀನಿವಾಸ್‌, ಜಿ.ಎ.ಬಾಬಾಜಾನ್‌, ಪೈರೋಜ್‌, ಕೆ.ಎಚ್‌.ರವಿ, ಸೋಮಶೇಖರ್‌, ಶಬ್ಬೀರ್‌ ಖಾನ್‌, ರಾಜಶೇಖರ, ಪಿ.ಟಿ.ಶಂಕರ್‌, ಸೋಮಶೇಖರ್‌, ರಾಜಶೇಖರ್‌, ಚಂದ್ರಯ್ಯಶೆಟ್ಟಿ, ಗಿರಿ, ಕೆ.ಎನ್.ಜಗನ್ನಾಥ್‌, ಎನ್‌.ಕೆ.ಹರೀಶ್‌, ಆಜಾಮ್‌, ಮುನಿರಾಜು, ನಾರಾಯಣಸ್ವಾಮಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು