ಇತ್ತೀಚಿನ ಸುದ್ದಿ
ರಥಬೀದಿ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವ್ರತ: ದೇವರಿಗೆ ವಿಶೇಷ ಅಲಂಕಾರ
September 1, 2020, 12:29 PM

ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka news) :
ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಅನಂತ ಚತುರ್ದಶಿ ( ನೋಪಿ ) ವ್ರತ ಪ್ರಯುಕ್ತ ದೇವರಿಗೆ ವಿಶೇಷ ಅನಂತ ದೇವರ ಅಲಂಕಾರ ಮಾಡಲಾಯಿತು.

ಪ್ರಾತಃ ಕಾಲ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ನಡೆದು ಬಳಿಕ ಶ್ರೀ ಅನಂತ ದೇವರ ಕಲಶ ಪ್ರತಿಷ್ಠಾಪನೆ ದೇವಳದ ಅರ್ಚಕರಿಂದ ನೆರವೇರಿತು.

ಬಳಿಕ ಸರ್ವಾಭರಣ ಭೂಷಿತ ಅನಂತ ದೇವರ ಅಲಂಕಾರ ಬಳಿಕ ಮಧ್ಯಾಹ್ನ ಮಹಾ ಪೂಜೆ ನೆರವೇರಿತು. ಕೊರೊನಾ ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಭಜಕರಿಗೆ ದೇವಳದ ಒಳ ಆವರಣದಲ್ಲಿ ಪ್ರವೇಶ ನಿಷೇಧಿಸಲಾಗಿತ್ತು.

ದೇವಳದ ಹೊರ ಆವರಣದಲ್ಲಿ ಭಜಕರಿಗೆ ಪ್ರಾರ್ಥನೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು .