10:37 AM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಆನ್ ಲೈನ್ ಕಾರ್ಯಾಗಾರ

August 14, 2020, 3:40 AM

ಮಂಗಳೂರು(reporterkarnatakanews): ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸ್ಕಿಲ್‌ರೆರಿ ಬೆಂಗಳೂರು ವತಿಯಿಂದ ಉದ್ಯಮಶೀಲತೆ ಕುರಿತು ಆನ್ಲೈನ್ ಕಾರ್ಯಗಾರವು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಎನ್ ಎಸ್. ಎಸ್ ಅಧಿಕಾರಿ ಡಾ.ಗಣನಾಥ ಎಕ್ಕಾರು ಮಾತನಾಡಿ, ಸ್ವಂತ ಉದ್ಯಮದಿಂದ ದೇಶಕ್ಕೆ ಕೊಡುಗೆ ನೀಡಿದಂತೆ ಕೌಶಲ್ಯದ ಕೊರತೆಯಿಂದ ಇಂದಿನ ಯುವಜನತೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ ಎಂದರು. 

ರಾಷ್ಟ್ರೀಯ ಸೇವಾ ಯೋಜನೆ  ಅನುಷ್ಠಾನಾಧಿಕಾರಿ ಡಾ.ಪೂರ್ಣಿಮ ಜೋಗಿ, ಮಾತನಾಡಿ ಉದ್ಯಮಶೀಲತೆಯಿಂದ ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.

ಸ್ಕಿಲ್‌ರೆರಿ ಸಂಸ್ಥೆ ಸ್ಥಾಪಕರು ಮಿಥುನ್ ಅಶೋಕ್ ಸಂಪನ್ಮೂಲ ವ್ಯಕ್ತಿ ಮಾತನಾಡಿ, ಸ್ವಂತ ಉದ್ಯಮ ಪ್ರಾರಂಭಿಸಲು ಅಗತ್ಯವಾದ ಕಂಪನಿಯ ವಿವರಣೆ,ಮಾರ್ಕೆಟಿಂಗ್ ಉತ್ಪನ್ನ,ಸೇಲ್ಸ್ ಬಜೆಟ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ಕೊಡಗು ಜಿಲ್ಲಾ   ಕೋವಿಡ್-19 ನೋಡಲ್  ಅಧಿಕಾರಿ ವನಿತ್ ಕುಮಾರ್  ಸ್ವಾಗತಿಸಿದರು.

ಉಡುಪಿ ಜಿಲ್ಲಾ  ಕೋವಿಡ್ 19 ನೋಡಲ್ ಅಧಿಕಾರಿ ವಂದಿಸಿದರು. ದ.ಕ ಜಿಲ್ಲಾ ನೋಡಲ್ ಅಧಿಕಾರಿ ದೇವಿ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.

 ಮಂಗಳೂರುವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ  ಅಧ್ಯಕ್ಷತೆಯನ್ನು ವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು