ಇತ್ತೀಚಿನ ಸುದ್ದಿ
ಪಾಲಿಕೆ ನೂತನ ಕಮಿಷನರ್ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಅಧಿಕಾರ ಸ್ವೀಕಾರ
August 27, 2020, 6:13 AM

ಮಂಗಳೂರು ( reporterkarnataka news): ಮಂಗಳೂರು ಮಹಾನಗರಪಾಲಿಕೆ ನೂತನ ಕಮಿಷನರ್ ಆಗಿ ನೇಮಕಗೊಂಡ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಪಾಲಿಕೆಯ ಕಮಿಷನರ್ ಆಗಿದ್ದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಅಕ್ಷಯ್ ಶ್ರೀಧರ್ ಅವರನ್ನು ನೇಮಿಸಲಾಗಿದೆ.
ಅಕ್ಷಯ್ ಅವರು ಬೀದರ್ ನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ ದೀರ್ಘಕಾಲದ ಬಳಿಕ ಐಎಎಸ್ ಅಧಿಕಾರಿ ಕಮಿಷನರ್ ಆಗಿ ನೇಮಕಗೊಂಡಂತಾಗಿದೆ. ಹೆಪ್ಸಿಬಾರಾಣಿ ಕೊರ್ಲಪತಿ ಬಳಿಕ ಯಾವುದೇ ಐಎಎಸ್ ಅಧಿಕಾರಿ ಇಲ್ಲಿಗೆ ನೇಮಕಗೊಂಡಿರಲಿಲ್ಲ.
ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.