ಇತ್ತೀಚಿನ ಸುದ್ದಿ
ಮಂಗಳೂರು ದಸರಾಕ್ಕೆ ದೀಪ ಬೆಳಗಿ ಚಾಲನೆ ನೀಡಿದ ಕೋವಿಡ್ ವಾರಿಯರ್ ಡಾ.ಆರತಿಕೃಷ್ಣ
October 17, 2020, 6:40 PM

ಅನುಷ್ ಪಂಡಿತ್
ಮಂಗಳೂರು (reporter Karnataka News)
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ದಸರಾ ಮಹೋತ್ಸವವಕ್ಕೆ ಕೋವಿಡ್ ವಾರಿಯರ್, ಎನ್ಆರ್ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಚಾಲನೆ ನೀಡಿದರು.

ಮಂಗಳೂರು ದಸರಾ ಮಹೋತ್ಸವವು ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಕೋವಿಡ್-19ವಾರಿಯರ್ ಆಗಿ ಅವಿರತ ಶ್ರಮಿಸಿದ ಡಾ. ಆರತಿಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಅಮಂತ್ರಿಸಲಾಗಿತ್ತು.


9 ದಿನಗಳ ಕಾಲ ನವದುರ್ಗೆಯರನ್ನು ಇಲ್ಲಿ ವೈಭವೋಪೇತವಾಗಿ ಸಾಂಪ್ರದಾಯಿಕ ಪೂಜಿಸಲಾಗುತ್ತಿತ್ತು, ಹತ್ತನೇ ದಿನ ಶಾರದ ದೇವಿಯ ಭವ್ಯ ಮೆರವಣಿಗೆ ನಡೆಯುತ್ತಿತ್ತು ಆದರೆ ಈ ಬಾರಿ ಕೊರೊನಾ ಮಹಾಮಾರಿ ಇರುವುದರಿಂದ ಮಂಗಳೂರು ದಸರಾ ಸರಳವಾಗಿ ನಡೆಯಲಿದೆ.


ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಿಯೋನಿಕ್ಸ್ ನಿಗಮದ ಹರಿಕೃಷ್ಣ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಿಯೋನಿಕ್ಸ್ ನಿಗಮದ ಹರಿಕೃಷ್ಣ ಬಂಟ್ವಾಳ ಮತ್ತಿ